Advertisement

ಪಶು ವೈದ್ಯ ಕಾಲೇಜು ಕಟ್ಟಡ ದುಸ್ಥಿತಿಗೆ ಸಚಿವರ ಅಸಮಾಧಾನ

05:22 PM Nov 21, 2020 | Suhan S |

ಗದಗ: ಉದ್ಘಾಟನೆಗೊಂಡ ಕೇವಲ ಎರಡು ವರ್ಷಗಳಲ್ಲಿ ಇಲ್ಲಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ಬಿರುಕು ಬಿಟ್ಟಿರುವುದು ಹಾಗೂ ಅಲ್ಲಲ್ಲಿ ಮೇಲ್ಚಾವಣಿ ಸೋರುತ್ತಿದೆ. ಕಟ್ಟಡದ ದುಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.

Advertisement

ಕಾಲೇಜು ಕ್ಯಾಂಪಸ್‌ ಮುಖ್ಯ ಕಟ್ಟಡ, ಆಸ್ಪತ್ರೆ ಹಾಗೂ ಪಶು ಪಾಲನೆಯ ಫಾರಂಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಈ ವೇಳೆ ಕಟ್ಟಡದಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಕಟ್ಟಡ ನಿರ್ಮಾಣದ ವರ್ಷ, ಅನುದಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಟ್ಟಡ ನಿರ್ಮಾಣಗೊಂಡು ಎರಡ್ಮೂರು ವರ್ಷಗಳಲ್ಲೇ ಶಿಥಿಲಾವಸ್ಥೆಯಲ್ಲಿ ಕಂಡು ಬರುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ಅದಕ್ಕೆ ಧ್ವನಿಗೂಡಿಸಿದ ಕಾಲೇಜಿನ ಸಿಬ್ಬಂದಿ, ಮಳೆ ಬಂದರೆ ಬಹುತೇಕ ಕೊಠಡಿಗಳು ಸೋರುತ್ತವೆ.ಕಿಟಿಕಿ ಬಾಗಿಲುಗಳಿಂದಲೂ ಮಳೆ ನೀರು ಬರುತ್ತವೆ. ಇದರಿಂದ ತುಂಬಾ ಸಮಸ್ಯೆಯಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು. ಮಹಾವಿದ್ಯಾಲಯದಲ್ಲಿ ಶಿಕ್ಷಕರ ಮತ್ತು ಲ್ಯಾಬ್‌ಗಳ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಆದಷ್ಟು ಬೇಗ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅಗತ್ಯ ಸೌಕರ್ಯ ಒದಗಿಸುವಂತೆ ಮಹಾವಿದ್ಯಾಲಯದ ಡೀನ್‌ ಡಾ|ಆರ್‌.ನಾಗರಾಜ್‌ ಮನವಿ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಭು ಚವ್ಹಾಣ್‌, ಕಾಲೇಜು ಆವರಣದಲ್ಲಿರುವ ಪಶು ಆಸ್ಪತ್ರೆಯ ಕಟ್ಟಡ ಉತ್ತಮವಾಗಿದೆ. ಆದರೆ, ಕಾಲೇಜು ಕಟ್ಟಡ ತೃಪ್ತಿತಂದಿಲ್ಲ. ಇದೊಂದು ಥರ್ಡ್‌ ಕ್ಲಾಸ್‌ ಕಟ್ಟಡ.ಕಟ್ಟಡಕ್ಕೆ ಬಿಡುಗಡೆಯಾದ ಅನುದಾನ, ಕಟ್ಟಡದ ಗುಣಮಟ್ಟದ ಕುರಿತು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next