ಬೃಹತ್ ಭಾಗವು ಸೋಮವಾರ ಕುಸಿದು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂತ್ರಿಮಾಲ್
ಮುಚ್ಚುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್‌ಪ್ರಸಾದ್ ಆದೇಶಿಸಿದ್ದಾರೆ. ಇದರ ಜತೆಗೆ ಮಂತ್ರಿ ಮಾಲ್‌ಗೆ
ನೀಡಿದ್ದ “ಸ್ವಾಧೀನಾನುಭವ ಪತ್ರ’ವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಕೂಡ ಆದೇಶಿಸಲಾಗಿದೆ. ಇದರಿಂದಾಗಿ ಮಂತ್ರಿ ಮಾಲ್‌ನ್ನು ಮುಚ್ಚಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
Advertisement
ಸೋಮವಾರ ಮಧ್ಯಾಹ್ನ ಮಂತ್ರಿಮಾಲ್ ಕಟ್ಟಡದ ಹಿಂಭಾಗದ ನಾಲ್ಕನೇ ಮಹಡಿಯ ಗೋಡೆ ಕಾರಿಡಾರ್ ಸಮೇತ ಕುಸಿದು ಬಿತ್ತು. ಜತೆಗೆ, 3 ಹಾಗೂ 2ನೇ ಮಹಡಿಯ ಗೋಡೆಯೂ ಶಿಥಿಲಗೊಂಡು ಕುಸಿಯಿತು. ಇದರಿಂದಾಗಿ ಕೆಳಗೆ ಕಾರ್ಯ ನಿರತವಾಗಿದ್ದ ಸಿಬ್ಬಂದಿ ಮೇಲೆ ಅವಶೇಷಗಳು ಬಿದ್ದು ಮೂವರು ಗಾಯಗೊಂಡರು. ಕಟ್ಟಡದ ಹಿಂಭಾಗ ಹಾಗೂ ಸಾರ್ವಜನಿಕರ ಓಡಾಟ ಇಲ್ಲದಿರುವ ಕಡೆ ಗೋಡೆ ಕುಸಿದಿರುವ ಕಾರಣ ಹೆಚ್ಚು ಅಪಾಯ ಸಂಭವಿಸಿಲ್ಲ.