Advertisement

ಶಾಸಕ ನಡಹಳ್ಳಿಗೆ ಒಲಿಯುವುದೇ ಮಂತ್ರಿಗಿರಿ?

05:55 PM Jul 31, 2021 | Nagendra Trasi |

ಮುದ್ದೇಬಿಹಾಳ: ರಾಜ್ಯದಲ್ಲಿ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡುವ ವರಿಷ್ಠರ ತೀರ್ಮಾನ ಆಕಾಂಕ್ಷಿಗಳಿಗೆ ವರವಾಗಿದೆ. ಮೂರುಬಾರಿ ಆಯ್ಕೆಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಈ ಭಾಗದ ಬಿಜೆಪಿಯಮೊದಲ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮುಂಚೂಣಿಯಲ್ಲಿದ್ದಾರೆ.

Advertisement

ರಾಜ್ಯಮಟ್ಟದಲ್ಲಿ ಹಲವು ಘಟಾನುಘಟಿಗಳ ಸಂಪರ್ಕ, ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಪ್ರಭಾವಿ ರಾಜಕಾರಣಿ ಎನ್ನಿಸಿಕೊಂಡು ಬಹಳಷ್ಟು ಶಾಸಕರ ಜತೆ ಉತ್ತಮ ಒಡನಾಟ ಹೊಂದಿರುವ ಇವರು, 2006ರಿಂದಲೂ ಸಮಾಜ ಸೇವೆಯಲ್ಲಿ ಚಿರಪರಿಚಿತರಾಗಿದ್ದಾರೆ. 2008, 2013ರಲ್ಲಿ ದೇವರಹಿಪ್ಪರಗಿಯ ಕಾಂಗ್ರೆಸ್‌ ಶಾಸಕರಾಗಿದ್ದರು.

2018ರಲ್ಲಿ ಮುದ್ದೇಬಿಹಾಳದಲ್ಲಿ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿ 25-30 ವರ್ಷಗಳ ಕಾಂಗ್ರೆಸ್‌ ಭದ್ರಕೋಟೆ ಛಿದ್ರ ಮಾಡಿ ಬಿಜೆಪಿಯ ಮೊದಲ ಶಾಸಕರೆನ್ನುವ ದಾಖಲೆ ತಮ್ಮದಾಗಿಸಿಕೊಂಡರು. ಇದೇ ವೇಳೆ ದೇವರಹಿಪ್ಪರಗಿಯಲ್ಲೂ ಕಮಲ ಅರಳಲು ಕಾರಣರಾದರು. ಪ್ರಸ್ತುತ ಸಂಪುಟ ದರ್ಜೆ ಸಚಿವ ಸ್ಥಾನಮಾನದ ಕರ್ನಾಟಕ ಆಹಾರ ನಿಗಮದ ಅಧ್ಯಕ್ಷರಾಗಿ, ವಿಧಾನಸಭೆಯ ಕೆಲ ಸಮಿತಿಗಳಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದಾರೆ. ಅಧಿವೇಶನದಲ್ಲಿ ದಿಟ್ಟ, ನೇರ, ಸ್ಪಷ್ಟ ಮಾತುಗಳಿಂದ, ಚಾಕಚಕ್ಯತೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ದುಡಿಮೆಯ ಬಹುಪಾಲು ದಾಸೋಹಕ್ಕಾಗಿ ಮೀಸಲಿಟ್ಟಿರುವ ನಡಹಳ್ಳಿಯವರು ವರ್ಷಕ್ಕೆ 2-3 ಕೋಟಿ ಸ್ವಂತ ಹಣವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಾರೆ. ಇದುವರೆಗೆ ಅಂದಾಜು 1000 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಯ ಪರಿಚಯ ಮಾಡಿಸಿದ್ದಾರೆ.

ಯತ್ನಾಳರ ನಂತರದ ಹಿರಿಯ ಶಾಸಕರಾಗಿರುವ ನಡಹಳ್ಳಿಯವರಿಗೆ ಸಚಿವ ಸ್ಥಾನ ಕೊಟ್ಟಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೇರುಗಳು ಇನ್ನಷ್ಟು ಗಟ್ಟಿಗೊಳ್ಳುತ್ತವೆ.
ಡಾ| ಪರಶುರಾಮ ಪವಾರ,
ತಾಲೂಕು ಬಿಜೆಪಿ ಅಧ್ಯಕ್ಷ

*ಡಿ.ಬಿ. ವಡವಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next