Advertisement

ಸಚಿವ ಪಾಟೀಲ ಸೇರಿ 14 ಜನರಿಗೆಸೇವಾಲಾಲ್‌ ರತ್ನ ಪ್ರದಾನ

02:31 PM Jan 29, 2018 | |

ವಿಜಯಪುರ : ನೀರಾವರಿ ಕ್ಷೇತ್ರ ಸಾಧನೆಗಾಗಿ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಅವರಿಗೆ ಕರ್ನಾಟಕ ಬಂಜಾರಾ ರಕ್ಷಣಾ ವೇದಿಕೆ ಶ್ರೀಸಂತ ಸೇವಾಲಾಲ್‌ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.

Advertisement

ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಇಂದುಮತಿ ಲಮಾಣಿ, ಕಾನೂನು ಕ್ಷೇತ್ರದಲ್ಲಿ ಗಣೇಶ ರಾಠೊಡ, ಬಂಜಾರಾ ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಹರಿಲಾಲ್‌ ಪವಾರ, ಬಂಜಾರಾ ಸಮಾಜ ಸೇವೆಯಲ್ಲಿ ಕಿಸನ ಭಾವು ರಾಠೊಡ, ಕ್ರೀಡೆಯಲ್ಲಿ ರಾಜು ಪವಾರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ಬಾಬುರಾಜೇಂದ್ರ ನಾಯಕ, ಸಂಗೀತ ಕ್ಷೇತ್ರದಲ್ಲಿ ಗೋವಿಂದ ಮಹಾರಾಜ, ಕ್ರೀಡೆಯಲ್ಲಿ ಸಂಜು ಲಮಾಣಿ, ಪತ್ರಿಕೋದ್ಯಮದಲ್ಲಿ ಈರಣ್ಣ ಹಡಪದ, ಭರತನಾಟ್ಯದಲ್ಲಿ ಅಂಬಿಕಾ ಸನ್ನದಿ, ಸಂಗೀತ ಕ್ಷೇತ್ರದಲ್ಲಿ ಬಸನಗೌಡ ಬಿರಾದಾರ ಹಾಗೂ ಸೋಮಶೇಖರ ರಾಠೊಡ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಡಾ| ಭುವನೇಶ್ವರಿ ಮಲ್ಲಿಕಾರ್ಜುನಮಠ (ಮೇಲಿನಮಠ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿವ ಡಾ| ಎಂ.ಬಿ. ಪಾಟೀಲ, ಬಂಜಾರಾ ಸಮಾಜ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಬಂಜಾರಾ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ತಾಂಡಾ ಅಭಿವೃದ್ಧಿ ನಿಗಮದಿಂದ ಹಲವಾರು ಯೋಜನೆಗಳನ್ನು ರೂಪಿಸಿದೆ. ನನಗೆ ಸಂತ ಸೇವಾಲಾಲ್‌ರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ, ಇದು ನನ್ನ ಜವಾಬ್ದಾರಿ ಸಹ ಹೆಚ್ಚಿಸಿದ್ದು ಈ ಪ್ರಶಸ್ತಿ ನನಗೆ ರಕ್ಷಾ ಕವಚ
ಇದ್ದಂತೆ ಎಂದರು. 

ಸೋಮದೇವರಹಟ್ಟಿಯ ಜಗನು ಮಹಾರಾಜ, ಕೆಸರಾಳ ತಾಂಡಾದ ಧನಸಿಂಗ್‌ ಮಹಾರಾಜ, ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ತೊರವಿ ತಾಂಡಾದ ಗೋಪಾಲ ಮಹಾರಾಜ, ಭೀಮಸಿಂಗ್‌ ಮಹಾರಾಜ, ಪ್ರಕಾಶ ಮಹಾರಾಜ, ಕುಮಾರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾಜು ಪವಾರ ಅದ್ಯಕ್ಷತೆ ವಹಿಸಿದ್ದರು. ನಗರ ಶಾಸಕ ಡಾಎಂ.ಎಸ್‌.ಬಾಗವಾನ ಮಾತನಾಡಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮೇಲ್ಮನೆ ಮಾಜಿ ಸದಸ್ಯ ಪ್ರಕಾಶ ರಾಠೊಡ, ಜೆಡಿಎಸ್‌ ಮುಖಂಡ ದೇವಾನಂದ ಚವ್ಹಾಣ ಮುಖ್ಯ ಅತಿಥಿಯಾಗಿದ್ದರು.

ಹೊನ್ನುಟಗಿ ಗ್ರಾಪಂ ಉಪಾಧ್ಯಕ್ಷ ರಮೇಶ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಚವ್ಹಾಣ, ಜಿಲ್ಲಾ ಕಾರ್ಯಾಧ್ಯಕ್ಷ ನೀಲಕಂಠ ಚವ್ಹಾಣ, ಕುಮಾರ ರಾಠೊಡ, ಸಂಜು ನಾಯಕ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next