Advertisement

ಹೊಸ ಪಠ್ಯ ಹಿಂಪಡೆಯಲು ಜೈ ಕನ್ನಡಿಗರ ಸೇನೆ ಆಗ್ರಹ

12:27 PM Jun 18, 2022 | Team Udayavani |

ಕಲಬುರಗಿ: ರಾಜ್ಯ ಸರ್ಕಾರ ರೋಹಿತ್‌ ಚಕ್ರವರ್ತಿ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಮಾಡಿ ವಿತರಿಸಲು ಮುಂದಾಗಿರುವ ಪುಸ್ತಕಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜೈ ಕನ್ನಡಿಗರ ಸೇನೆ ಸದಸ್ಯರು ಪ್ರತಿಭಟನೆ ಮಾಡಿದರು.

Advertisement

ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಮಕ್ಕಳ ಭವಿಷ್ಯ ತಪ್ಪಾಗಿ ರೂಪುಗೊಳ್ಳುವ ಆತಂಕ ಹೆಚ್ಚಿದೆ. ಆದ್ದರಿಂದ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬಾರದು. ಸರ್ಕಾರ ಪಠ್ಯಪುಸ್ತಕವನ್ನು ಕೇಸರಿಕರಣ ಮಾಡುತ್ತಿರುವುದು ಸರಿಯಲ್ಲ ಎಂದು ಘೋಷಣೆ ಕೂಗಿದರು.

ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಹಲವು ಮಹನೀಯರ ಇತಿಹಾಸವನ್ನು ತಿರುಚಿ ತಪ್ಪು ಸಂದೇಶವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಕೂಡಲೇ ಹೊಸ ಮುದ್ರಿತ ಪಠ್ಯ ಪುಸ್ತಕಗಳನ್ನು ಹಿಂದಕ್ಕೆ ಪಡೆಯಬೇಕು. ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಜಗನ್ನಾಥ ಸೂರ್ಯವಂಶಿ, ರಾಮಾ ಪೂಜಾರಿ, ವಿಠಲ ಪೂಜಾರಿ, ಧರ್ಮಸಿಂಗ್‌ ತಿವಾರಿ, ಬಾಬುರಾವ್‌, ಕವಿರಾಜ, ಚೇತನ, ಸುರೇಶ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next