Advertisement

Kallabettu: ಎಕ್ಸಲೆಂಟ್‌ನಲ್ಲಿ ರಾಣಿ ಅಬ್ಬಕ್ಕ ಅಂಚೆಚೀಟಿ ಬಿಡುಗಡೆಗೊಳಿಸಿದ ಸಚಿವೆ ನಿರ್ಮಲಾ

01:00 AM Dec 16, 2023 | Team Udayavani |

ಮೂಡುಬಿದಿರೆ: ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ರಾಣಿ ಅಬ್ಬಕ್ಕ ಅವರ ಹೆಸರಿನಲ್ಲಿ ರಾಷ್ಟ್ರೀಯ ರಕ್ಷಣ ಅಕಾಡೆಮಿ ಮಹಿಳಾ ಸೈನಿಕ ಶಾಲೆ ಸ್ಥಾಪಿಸುವ ಮೂಲಕ ಆಕೆಯ ಶೌರ್ಯ, ಯುದ್ಧ ಕೌಶಲ, ದೇಶಪ್ರೇಮವನ್ನು ಶಾಶ್ವತವಾಗಿ ದಾಖಲಿಸುವ ಕೆಲಸ ಮಾಡಬೇಕಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟರು.

Advertisement

“ಆಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ, ಭಾರತ ಸರಕಾರದ ಅಂಚೆ ಇಲಾಖೆ, ಸಂವಹನ ಸಚಿವಾಲಯದ ಸಹಭಾಗಿತ್ವದಲ್ಲಿ ರಾಣಿ ಅಬ್ಬಕ್ಕ ದೇವಿ ಸಂಸ್ಮರ ಣಾರ್ಥ ರೂಪಿಸ
ಲಾದ ಅಂಚೆ ಚೀಟಿ  ಯನ್ನು ಇಲ್ಲಿನ ಕಲ್ಲಬೆಟ್ಟು ಎಕ್ಸ ಲೆಂಟ್‌ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹೋರಾಟಗಾರರ ಡಿಜಿಟಲ್‌ ಕೋಶ
ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅನಾಮಿಕರಾಗಿ, ಪ್ರಚಾರಕ್ಕೆ ಬಾರದೆ ಉಳಿದ 14,500 ಮಂದಿ ಹೋರಾಟ ಗಾರರನ್ನು ಪರಿಚಯಿಸುವ ಡಿಜಿಟಲ್‌ ಕೋಶವನ್ನು ಕೇಂದ್ರ ಸರಕಾರ ರೂಪಿಸಿದ್ದು ಅದನ್ನು ಆಯಾಯ ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿ ಪ್ರಚುರ ಪಡಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು, ನಮ್ಮ ಮಕ್ಕಳು ಇದನ್ನೆಲ್ಲ ತಿಳಿದುಕೊಳ್ಳಬೇಕಾಗಿದೆ ಎಂದೂ ತಿಳಿಸಿದರು.

ತುಳುನಾಡಿನ ಗ್ರೇಟ್‌ ರಾಣಿ
ಮೂಡುಬಿದಿರೆ ಮೂಲದ ಉಳ್ಳಾಲದ ರಾಣಿ ಅಬ್ಬಕ್ಕ ಕುರಿತಾದ ಕಿರುಚಿತ್ರ ಪ್ರದರ್ಶನ ಸಂಸತ್‌ನಲ್ಲಿ ನಡೆದಿದ್ದು ಪ್ರಧಾನಿ ಮೋದಿ ಸಹಿತ ಸಂಸದರೆಲ್ಲ ವೀಕ್ಷಿಸಿದ್ದಾರೆ. ಆಕೆಯ ಶೌರ್ಯ, ಅಗ್ನಿ ಬಾಣ ಪ್ರಯೋಗ ಕೌಶಲ, ಆಡಳಿತ, ನ್ಯಾಯ, ಎಲ್ಲದರಲ್ಲೂ ಎದ್ದು ಕಾಣುವ ವ್ಯಕ್ತಿತ್ವ, ನಿಜಕ್ಕೂ ನಮಗೆ ವಿಶೇಷವಾಗಿ ಮಹಿಳೆಯರಿಗೆ ಒಂದು ಪಾಠವಾಗಿದೆ. ಅಬ್ಬಕ್ಕ ತುಳು ನಾಡಿನ “ಗ್ರೇಟ್‌ ರಾಣಿ’ ಎಂದವರು ಹೇಳಿದರು.

ಸಾಧಕಿಯರಿಗೆ ಪ್ರೇರಣೆಯಾಗಲಿ
ಮಹಿಳಾ ಮೀಸಲಾತಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವುದನ್ನು ಮಹಿಳೆಯರು ಸದ್ಬಳಕೆ ಮಾಡಬೇಕಾಗಿದೆ. ಸೇನೆಯೂ ಒಳಗೊಂಡಂತೆ ಎಲ್ಲ ರಂಗಗಳಲ್ಲೂ ಮುಂಚೂಣಿ ಯಲ್ಲಿದ್ದು ಸಾಧಕರಾಗಿ ಮಿಂಚಲು ರಾಣಿ ಅಬ್ಬಕ್ಕರಂಥ ವ್ಯಕ್ತಿತ್ವ ನಿಮಗೆಲ್ಲ ಪ್ರೇರಣೆಯಾಗಲಿ ಎಂದರು.

Advertisement

ಅಬ್ಬಕ್ಕ ಅವರ ಬಗ್ಗೆ ವಿಶೇಷ ಮಾಹಿತಿ ಒಳಗೊಂಡ ಎಕ್ಸಲೆಂಟ್‌ ಕಾಲೇಜಿನ ಈ ಸಲದ ಮಾಸಿಕ ಸಂಚಿಕೆ, ‘ಮನೋರಮಾ’ವನ್ನು ನಿರ್ಮಲಾ ಸೀತಾರಾಮನ್‌ ಅನಾವರಣ ಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು “ಪೋರ್ಚುಗೀಸರ ವಿರುದ್ಧದ ಹೋರಾಟದಲ್ಲಿ ವಿರೋಧಿಯಾಗಿದ್ದ ಗಂಡನ ಕಿರುಕುಳವನ್ನು ಸಹಿಸಿಕೊಂಡು, ಬಾಹ್ಯವಾಗಿ ರಕ್ಷಣ ಪಡೆ ಕಟ್ಟಿಕೊಂಡು ಹೋರಾಡಬೇಕಾದ ಪರಿಸ್ಥಿತಿಯನ್ನು ನಿಭಾಯಿಸಿದ ಕ್ರಮ ನಿಜಕ್ಕೂ ಅಚ್ಚರಿಯ ಸಂಗತಿ ಎಂದರು.

ಸಚಿವೆ ನಿರ್ಮಲಾ ಅವರನ್ನು ಆಮಂತ್ರಿಸಲು ಹೋಗಿದ್ದಾಗ ಅವರು ಅಬ್ಬಕ್ಕನವರ ಬಗ್ಗೆ ಬಹಳಷ್ಟು ತಿಳಿದು ಕೊಂಡಿರುವುದನ್ನರಿತು ಅಚ್ಚರಿ ಎನಿಸಿತು; ಅಬ್ಬಕ್ಕ ಅವರ ವ್ಯಕ್ತಿತ್ವ ವಿಶೇಷವೇ ಸಚಿವರನ್ನು ಇಲ್ಲಿಗೆ ಬರ ಮಾಡಿಕೊಂಡಿದೆ ಎಂದು ಹೆಗ್ಗಡೆ ಹೇಳಿದರು.

ಕರ್ನಾಟಕ ವೃತ್ತ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಅವರು ರಾಣಿ ಅಬ್ಬಕ್ಕ ಅವರ ಜೀವನ, ಹೋರಾಟಮಯ ಬದುಕಿನ ಚಿತ್ರಣವಿತ್ತರು. ಶಾಸಕ ಉಮಾನಾಥ ಕೋಟ್ಯಾನ್‌, ಧರ್ಮಸ್ಥಳದ ಡಿ. ಸುರೇಂದ್ರಕುಮಾರ್‌, ಪತ್ನಿ ಅನಿತಾ ಸುರೇಂದ್ರ ಕುಮಾರ್‌, ಬಂಟ್ವಾಳದ ಡಾ| ತುಕಾರಾಮ ಪೂಜಾರಿ, ಫಿಲಾಟೆಲಿಸ್ಟ್‌ ಮಹೇಂದ್ರ ಸಿಂಗಿ, ಚೌಟರ ಅರಮನೆಯ ಕುಲದೀಪ ಎಂ., ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ನವೀನ್‌ಚಂದರ್‌, ಉಪಾಧೀಕ್ಷಕಿ ಉಷಾ ಕೆ. ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್‌ ಪಾಲ್ಗೊಂಡಿದ್ದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್‌ ಸ್ವಾಗತಿಸಿದರು. ಶೈಕ್ಷಣಿಕ ನಿರ್ದೇಶಕ, ಅಂಚೆ ಚೀಟಿ ಸಮಿತಿ ಸಂಚಾಲಕ ಡಾ| ಬಿ.ಪಿ. ಸಂಪತ್‌ ಕುಮಾರ್‌ ವಂದಿಸಿದರು. ಮಂಗಳೂರಿನ ನಿವೃತ್ತ ಉಪನ್ಯಾಸಕಿ ಮಾಲಿನಿ ಹೆಬ್ಟಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next