Advertisement

ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಚಿವ ನಾರಾಯಣ ಗೌಡ ಕಿಡಿ

08:16 PM Jan 09, 2022 | Team Udayavani |

ಶ್ರೀರಂಗಪಟ್ಟಣ : ಉಲ್ಭಣಿಸಿರುವ ಕೋವಿಡ್ ಸಮಸ್ಯೆ ನಿರ್ವಹಣೆ ವಿಚಾರದಲ್ಲಿ ಸಚಿವರು ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪ ಮಾಡಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಭಾನುವಾರ ಕಿಡಿ ಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಶ್ರೀರಂಗಪಟ್ಟಣದ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಶಾಸಕರು ಇಲ್ಲ ಸಲ್ಲದ ಆರೋಪ ಮಾಡಬಾರದು.ಅವರಿಂದ ನಾನೇನು ಕಲಿಯಬೇಕಿಲ್ಲ.ಅವರು ಕೇವಲ ಒಂದು ಸಾರಿ ಮಾತ್ರ ಗೆದ್ದು ಶಾಸಕರಾಗಿದ್ದಾರೆ ನಾನು‌ ಮೂರು ಸಾರಿ ಗೆದ್ದು ಮಂತ್ರಿ ಆಗಿದ್ದೇನೆ ಎಂದರು.

ನಾನು ಹೇಳಿದ ಮೇಲೆಯೇ ಇಲ್ಲ ಎಲ್ಲಾ ಸೌಕರ್ಯಗಳು ಆಗಿರುವುದು. ಅವರೇನು ಅವರ ಮನೆಯಿಂದ ತಂದು‌ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಕಳೆದ ಒಂದು ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಬಂದ ಅನುದಾನ ಲೆಕ್ಕ ಕೊಟ್ಟಿಲ್ಲ ಎಂದಿರುವ ರವೀಂದ್ರ ಅವರಿಗೆ ತಿರುಗೇಟು ನೀಡಿ, ಅವರು ಸರ್ಕಾರಕ್ಕೆ ಈ ಬಗ್ಗೆ ಅರ್ಜಿ‌ಹಾಕಿ ತಗೆದುಕೊಳ್ಳಲಿ.ಇಲ್ಲಿ ನಾವೇನು‌ ಕೊಳ್ಳೆ ಹೊಡೆದಿಲ್ಲ. ಆರೋಪ ಮಾಡೋದಕ್ಕೆ ದಾಖಲೆ ಇರಬೇಕು ಗಾಳಿಯಲ್ಲಿ ಗುಂಡು ಹಾರಿಸುವ ತರ ಮಾತನಾಡಬಾರದು ಎಂದರು.

ಕಳೆದ ಕೋವಿಡ್ ಸಂಧರ್ಭದಲ್ಲಿ ನಾವು ಹೇಗೆ ಕೋವಿಡ್ ನಿರ್ವಹಣೆ ಮಾಡಿದ್ದೇವೆ ಅನ್ನುವುದು ನಿಮಗೆಲ್ಲ ಗೊತ್ತು‌.ಈ ಶಾಸಕರಿಂದ ಏನು‌ ಕಲಿಯಬೇಕಿಲ್ಲ.ಸೋಂಕಿತರಿಗೆ ಏನೇ ಬೇಕಾದರು ಸರ್ಕಾರವೇ ಮಾಡಬೇಕು. ಇವರೇನು ಮಾಡುತ್ತಾರಾ? ಅವತ್ತು ಕೂಡ ಇಲ್ಲಿಯ ಶಾಸಕರು ಫೋನ್ ‌ಮಾಡಿದ್ದರು. ನಾನೇ ಖುದ್ದು ಮಾತನಾಡಿ ಸಮಸ್ಯೆ ಬಗೆ ಹರಿಸಿ ಸೌಲಭ್ಯ ಕಲ್ಪಿಸಿದ್ದೇನೆ.ಅವರು ಆರೋಪ ಮಾಡಿದರು ಅಂತಾ ನಾನು‌ ಇಲ್ಲಿಗೆ ಬಂದಿಲ್ಲ.ನಾನು‌ ನನ್ನ ಜಿಲ್ಲೆ ಅಂತಾ ನಾನೇ ಬಂದ್ದೀದ್ದೇನೆ. ಒಂದು ವೇಳೆ ಈ ಕೋವಿಡ್ ವಿಚಾರದಲ್ಲಿ ಅಧಿಕಾರಿಗಳು ತಪ್ಪು ಮಾಡಿದರೆ ಖಂಡಿತಾ ಅವರಿಗೆ ಶಿಕ್ಷೆ ಆಗುತ್ತದೆ ಎಂದರು.

Advertisement

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಅವರಿಗೆ ಇದು ಅವರ ತಾಲೂಕು ಅವರು ಕೂಡ ಸೇವಾ ಮನೋಭಾವನೆಯಿಂದ ಮಾಡಬೇಕು. ಸೇವೆ ಮಾಡುವ ಇಚ್ಚೆ ಇದ್ದರೆ ಮಾಡಿಲಿ ಇಲ್ಲವೇ ನಮ್ಮ ಸರ್ಕಾರದ ವತಿಯಿಂದಲೇ ಎಲ್ಲರಿಗೂ ವ್ಯವಸ್ಥೆ ಕಲ್ಪಿಸಿತ್ತೇವೆ ಎಂದು ತಿರುಗೇಟು‌ ನೀಡಿದರು.

ಸಮಸ್ಯೆಗೆ ಸ್ಪಂದಿಸಿದ ತಾಲೂಕಿನ ತಹಶೀಲ್ದಾರ್ ಸೇರಿದಂತೆ ಡಿಸಿ ಯವರಿಗೂ ರವರಿಗೂ ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next