Advertisement

ಸಿಡಿ ಪ್ರಕರಣ ಸತ್ಯಾಂಶ ಶೀಘ್ರ ಬಯಲು: ಡಾ. ನಾರಾಯಗೌಡ

10:09 PM Mar 31, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಡೆದಿರುವ ಸಿಡಿ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಯಾರು ಷಡ್ಯಂತರ ನಡೆಸಿದ್ದಾರೆ ಎಲ್ಲಾ ವಿಚಾರಗಳು ಶೀಘ್ರ ಬಯಲಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಗೌಡ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಬಂದು ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ರಮೇಶ್ ಜಾರ್ಕಿಹೂಳಿ ಅವರು ಎಲ್ಲಿಯೂ ಹೋಗಿಲ್ಲ ಅವರ ಕ್ಷೇತ್ರದಲ್ಲಿದ್ದಾರೆ ಅವರಿಗೆ ಮಹಾರಾಷ್ಟ್ರಗೆ ಮೊದಲಿಂದಲೂ ಒಳ್ಳೆಯ ಸಂಬಂಧಯಿದೆ ಅವರು ಹೋಗಿ ಬರುತ್ತಾರೆ ಅವಿತುಕೊಳ್ಳುವ ಪ್ರಶ್ನೆಯೇ ಇಲ್ಲ ಲೇಡಿ ಏನು ಸ್ಪೇಟ್ಮೆಂಟ್ ಕೊಟ್ಟಿದ್ದಾರೆ ಎಂಬುದು 100% ಗುತ್ತಾಗಿದೀಯಾ ನಿಮಗೆ(ಮಾಧ್ಯಮದವರಿಗೆ) ಓಪನ್ ಏನು ಆಗಿಲ್ಲ ಕಾದು ನೋಡಿ ಎಲ್ಲವೂ ಬಯಲಾಗುತ್ತದೆಯೆಂದು ಭವಿಷ್ಯ ನುಡಿದ ಸಚಿವರು ಯಾರು ಮಾಡಿಸಿದ್ದಾರೆ ಮತ್ತು ಯಾರು ಷಡ್ಯಂತರ ನಡೆಸಿದ್ದಾರೆ ಅವರು ಅನುಭವಿಸುತ್ತಾರೆ ಎಂದರು.

ತೊಂದರೆಯಿಲ್ಲ-ಭಯವಿಲ್ಲ: ರಾಜಕೀಯವಾಗಿ ತೇಜೋವಧೆಯನ್ನು ತಪ್ಪಿಸಲು ನ್ಯಾಯಾಲಯದ ಮೊರೆ ಹೋಗಿದ್ದೇವೆ ನಮ್ಮ ಮೇಲೆ ಏನಾದರೂ ಸತ್ಯಾಂಶ ಇದ್ದರೆ ಬಿಡುಗಡೆ ಮಾಡಲು ನಮಗೇನು ತೊಂದರೆಯಿಲ್ಲ ಭಯವೂ ಇಲ್ಲವೆಂದು ಸ್ಪಷ್ಟಪಡಿಸಿದ ಸಚಿವರು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು ರಾಜ್ಯದ ಜಕ್ಕೂರು ಏರೋಡ್ರಮ್‍ನಲ್ಲಿ ವಾರ್ಷಿಕ 100 ಪೈಲೆಟ್‍ಗಳನ್ನು ತಯಾರು ಮಾಡಲು ಯೋಜನೆಯನ್ನು ರೂಪಿಸಿ ಅದಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದ ಸಚಿವರು ಇಲಾಖೆಗೆ ಅನುದಾನ ಕೊರತೆಯಿರುವುದು ನಿಜ ಖೇಲೋ ಇಂಡಿಯಾ ಯೋಜನೆಯ ಮೂಲಕ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನವನ್ನು ತರುವ ಪ್ರಯತ್ನ ಮಾಡಿದ್ದೇವೆ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ರೀಡಾ ಇಲಾಖೆಯನ್ನು ಸದೃಡಗೊಳಿಸಲು ಮತ್ತು ಕ್ರೀಡಾಪಟುಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಆದ್ಯತೆ ನೀಡುತ್ತಿದ್ದು ಜತೆಗೆ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಅಗತ್ಯ ಅನುದಾನ ಸಹ ನೀಡುತ್ತಾರೆ ಎಂದರು.

ಜಿಪಂ ಅಧ್ಯಕ್ಷ ಎಂಬಿ ಚಿಕ್ಕನರಸಿಂಹಯ್ಯ(ಚಿನ್ನಿ),ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಓ ಶಿವಶಂಕರ್,ಅಪರ ಜಿಲ್ಲಾಧಿಕಾರಿ ಅಮರೇಶ್,ಎಸಿ ರಘುನಂದನ್,ಶಿಡ್ಲಘಟ್ಟ ಮಾಜಿ ಶಾಸಕ ಎಂ.ಶಾಸಕ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next