Advertisement

ಜನರ ಹಿತಕ್ಕಾಗಿ ಕೆಲಸ ಮಾಡಿ : ಸಚಿವ ಎಂಟಿಬಿ ನಾಗರಾಜ್‌

02:41 PM Aug 22, 2022 | Team Udayavani |

ವಿಜಯಪುರ: ಜನಪ್ರತಿನಿಧಿಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು. ಜನರ ಹಿತದೃಷ್ಟಿ ಮತ್ತು ಅಭಿವೃದ್ಧಿ ಕಾರ್ಯಗಳೇ ಧ್ಯೇಯವಾಗಿರಬೇಕು ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

Advertisement

ಪಟ್ಟಣದ ಪುರಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ವಿಜಯಪುರ ಪುರಸಭೆ 2 ಬಾರಿ ಉತ್ತಮ ಪುರಸಭೆ ಎಂದು ರಾಜ್ಯ ಪ್ರಶಸ್ತಿ ಪಡೆದಿದೆ. ನಗರೋತ್ಥಾನ ನಾಲ್ಕನೇ ಹಂತದಲ್ಲಿ ವಿಜಯಪುರ ಪುರಸಭೆಗೆ ಪೌರಾಡಳಿತ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದ್ದೇವೆ. ಕಾರ್ಯತಂತ್ರ ರೂಪಿಸಿ, ಟೆಂಡರ್‌ಗೂ ಕರೆಯಲು ಸಿದ್ಧತೆ ನಡೆದಿದೆ. ಇಲ್ಲಿನ ಜlಲ್ಲೆ ಮತ್ತು ತಾಲೂಕು ಅಧ್ಯಕ್ಷರು ವಿಶೇಷ ಅನುದಾನ ನೀಡಲು ಮನವಿ ನೀಡಿದ್ದರು. ಆ ವಿಶೇಷ ಅನುದಾನವು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.

ಅಭಿವೃದ್ಧಿಯತ್ತ ಗಮನ ಹರಿಸಿ: ಯಾವುದೇ ರಾಜಕೀಯ ಪಕ್ಷವಾಗಲಿ ಪುರಸಭೆ ಆಡಳಿತವನ್ನು ನಡೆಸಿಕೊಂಡು ಹೋಗುವುದು ಮುಖ್ಯ. ಮೀಸಲಾತಿಗೆ ತಕ್ಕಂತೆ ಗೆದ್ದು ಸದಸ್ಯರಾದ ಮೇಲೆ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಬೇಕು. ವಿಜಯಪುರ ಪುರಸಭೆ ಸುಮಾರು 8 ವರ್ಷಗಳ ಕಾಲ ಅಡಳಿತ ಇಲ್ಲದೆ, ಕೇವಲ ಅಧಿಕಾರಿಗಳೇ ನಡೆಸುವಂತಾದಾಗ ಯಾವುದೇ ಕೆಲಸಗಳು ನಡೆಯುವುದು ಬಹಳ ಕಷ್ಟ. ಜನಪ್ರತಿನಿಧಿಗಳು ಜನರ ಹಿತದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್‌, ಉಪಾಧ್ಯಕ್ಷ ಎಂ. ಕೇಶವಪ್ಪ, ಪುರಸಭಾ ಮುಖ್ಯಾಧಿಕಾರಿ ಮೋಹನ್‌ ಕುಮಾರ್‌ ಮತ್ತು ಪುರಸಭಾ ಸದಸ್ಯರು, ಬಿಜೆಪಿ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next