Advertisement
ಜಾಗತಿಕ ಹೂಡಿಕೆದಾರರ ಸಮಾವೇಶ “ಇನ್ವೆಸ್ಟ್ ಕರ್ನಾಟಕ’ ಕ್ಕೆ ಹೂಡಿಕೆದಾರರನ್ನು ಆಹ್ವಾನಿಸಲು ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗದ ಜತೆ ಜರ್ಮನಿ ಪ್ರವಾಸದಲ್ಲಿರುವ ಅವರು, ರಾಜ್ಯದಲ್ಲಿ ಉದ್ಯಮ ಸ್ಥಾಪನೆ, ಬಂಡವಾಳ ಹೂಡಿಕೆ ಮತ್ತು ತಯಾರಿಕೆ ಸಾಮರ್ಥ್ಯ ಹೆಚ್ಚಿಸುವುದರ ಪ್ರಯೋಜಗಳನ್ನು ಅಲ್ಲಿನ ಪ್ರಮುಖ ಉದ್ದಿಮೆಗಳು ಮತ್ತು ವಾಣಿಜ್ಯ ಸಂಘಟನೆಗೆ ಮನವರಿಕೆ ಮಾಡಿಕೊಟ್ಟರು.
ಭಾರತದ ಮೆಷಿನ್ ಟೂಲ್ಸ್ ವಲಯದಲ್ಲಿ ಶೇ. 52ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಕರ್ನಾಟಕದಲ್ಲಿ ತನ್ನ ತಯಾರಿಕ ಘಟಕ ಆರಂಭಿಸಬೇಕು. ತುಮಕೂರು ಮೆಷಿನ್ ಟೂಲ್ ಪಾರ್ಕ್‌ನಲ್ಲಿ ಲಭ್ಯ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಇಂಡೆಕ್ಸ್ ವೆರ್ಕೆ ಕಂಪೆನಿಗೆ ಮನವಿ ಮಾಡಿದರು. ಜರ್ಮನಿಯ ಪ್ರಮುಖ ವಾಣಿಜ್ಯೋದ್ಯಮ ಸಂಘಟನೆಗಳಲ್ಲಿ ಒಂದಾಗಿರುವ 1,60,000 ಉದ್ದಿಮೆಗಳನ್ನು ಪ್ರತಿನಿ ಧಿಸುವ ಐಎಚ್‌ಕೆ ಸ್ಟುಟ್‌ಗಾರ್ಟ್ ಜತೆಗಿನ ಸಮಾಲೋಚನೆಯಲ್ಲಿ ಕರ್ನಾಟಕವು ಜಾಗತಿಕ ಬಂಡವಾಳ ಹೂಡಿಕೆಯ ಮೆಚ್ಚಿನ ತಾಣವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾವಿಸಿ, ರಾಜ್ಯದಲ್ಲಿ ವಹಿವಾಟು ಆರಂಭಿಸಲು ಲಭ್ಯ ಇರುವ ಪೂರಕ ವಾತಾವರಣವನ್ನು ಮನವರಿಕೆ ಮಾಡಿಕೊಟ್ಟರು.