Advertisement

ವಿವಾಹ ನೋಂದಣಿಯಂತೆ ಮತಾಂತರ ಕೂಡ ನೋಂದಣಿ ಮಾಡುವ ಚಿಂತನೆ ನಡೆದಿದೆ: ಸಚಿವ ಮಾಧುಸ್ವಾಮಿ

05:31 PM Dec 12, 2021 | Team Udayavani |

ತುಮಕೂರು: ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನೂ ಕೂಡ ನೋಂದಣಿ ಮಾಡುವಂತಹ ಪದ್ದತಿಯನ್ನು ಮತಾಂತರ ನಿಷೇಧ ಕಾಯಿದೆಯಲ್ಲಿ ತರುವ ಚಿಂತನೆ ಇದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲೆ ಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರದಲ್ಲಿ ಮಾತನಾಡಿದ ಅವರು, ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡ್ಗೆ ವಿವಾಹಿತರ ವಿವರ ಹಾಕುತ್ತೇವೆಯೋ ಹಾಗೆಯೇ ಮತಾಂತರಗೊಂಡವರ ವಿವರವನ್ನೂ ನೋಟೀಸ್ ಬೋರ್ಡಗೆ ಹಾಕಿ ಆಕ್ಷೇಪಣೆಗೆ ಸಮಯವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂಥವರ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಯಾರಿಗೂ ನೋವು ಆಗದ, ಅಡಚಣೆ ಆಗದ ರೀತಿಯಲ್ಲಿ ಕಾಯಿದೆ ಇರಬೇಕು  ಎಂದು ಯೋಚಿಸಿದ್ದೇನೆ ಆ ನಿಟ್ಟಿನಲ್ಲಿ ಪರಮಾರ್ಶೆ ನಡೆದಿದೆ ಎಂದರು. ಬಲವಂತ ಹಾಗೂ ಆಮಿಷ ಒಡ್ಡಿ ಮಾಡುವ ಮತಾಂತರ ಈಗಾಗಲೇ ನಿಷೇಧ ಇದ್ದು ಮತಾಂತರ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಅನ್ನೋದು ಚರ್ಚೆ ನಡೆಯಬೇಕಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ದಗೊಳ್ಳುತಿದ್ದು, ಮತಾಂತರ ಆಗುವವನೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ,ಬಲವಂತದ ಮತಾಂತರ ಅಲ್ಲ ಎಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದಾಗಿದೆ. ಜತೆಗೆ,ಒಮ್ಮೆ ಮತಾಂತರ ಗೊಂಡ ವ್ಯಕ್ತಿ ಮೂಲ ಜಾತಿ,‌ಧರ್ಮವನ್ನು ಕಳೆದುಕೊಳ್ಳುತ್ತಾನೆ ಎಂದು ಮಾಹಿತಿ‌ನೀಡಿದ್ದಾರೆ.

ಪರಿಶಿಷ್ಟ ಜಾತಿ ವ್ಯಕ್ತಿ ಕ್ರಿಶ್ಚಿಯನ್ ಗೆ ಮತಾಂತರಗೊಂಡರೆ ಆತ ಅಲ್ಪ ಸಂಖ್ಯಾತ ಎಂದಾಗುತ್ತದೆ, ಆತನ ಮೂಲ ಜಾತಿ ಪ್ರಮಾಣ ಪತ್ರ ಬದಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next