Advertisement

ಬೆಳ್ತಂಗಡಿಗೆ ಆಗಮಿಸಿದ ಸಚಿವ ಮಾಧು ಸ್ವಾಮಿ: ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಲೋಕಾರ್ಪಣೆ

10:53 AM Jan 16, 2021 | Team Udayavani |

ಬೆಳ್ತಂಗಡಿ: ರಾಜ್ಯದ ಸಣ್ಣ ನೀರಾವರಿ ಇಲಾಖೆ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಶನಿವಾರ ಬೆಳ್ತಂಗಡಿ  ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಹಿನ್ನೆಲೆ ಕ್ಷೇತ್ರಕ್ಕೆ ಆಗಮಿಸಿದ್ದಾರೆ.

Advertisement

ಮಾರ್ಗ ಮಧ್ಯ ಶಾಸಕ‌ ಹರೀಶ್ ಪೂಂಜ ಅವರ ಶ್ರಮಿಕ ಕಚೇರಿಗೆ ಭೇಟಿ ನೀಡಿದರು. ಇದೇ ವೇಳೆ ಶಾಸಕರು ಸಚಿವರನ್ನು ಬರಮಾಡಿಕೊಂಡರು. ಈವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿ.ಪಂ.‌ ಸದಸ್ಯರು, ಪ.ಪಂ.  ನಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯರು, ಬಿಜೆಪಿ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಭೇಟಿ ನೀಡುವ ಸಲುವಾಗಿ ಸನ್ನಿಧಾನಕ್ಕೆ ತೆರಳಿದರು.  ಮಂಜುನಾಥ ಸ್ವಾಮಿ ದರ್ಶನ ಪಡೆದು, ಧರ್ಮಾಧಿಕಾರಿ ಡಾ.ಡಿ.ವೇರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿರುವ ಅವರು ವಿವಿಧ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸುವರು.

ಇದನ್ನೂ ಓದಿ:  ಚಿನ್ನದ ಸರ ಕಳ್ಳತನವಾಗಿದೆ ಎಂದ ಅಜ್ಜಿ:ಪೊಲೀಸರ ತನಿಖೆಯ ವೇಳೆ ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ

Advertisement

ಬೆಳಗ್ಗೆ 10.30 ಕ್ಕೆ ನಿಟ್ಟಡೆ ಗ್ರಾಮದ ಕುಕ್ಕುಜೊಟ್ಟು ಕಿಂಡಿ ಆಣೆಕಟ್ಟು ಕಾಮಗಾರಿ ಉದ್ಘಾಟನೆ ನೆರವೇರಿಸುವರು. ಅಪರಾಹ್ನ 2:30ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಸಚಿವರಿಗೆ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ಗಂಟೆಗೆ ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ, ಬಳಿ ನಿರ್ಮಾಣಗೊಳ್ಳಲಿರುವ ಸೇತುವೆ ಸಹಿತ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವರು.ಈ ವೇಳೆ ಸಚಿವ ಎಸ್.ಅಂಗಾರ ಅವರಿಗೂ ಅಭಿನಂದನೆ ನಡೆಯಲಿದೆ.

ಇದನ್ನೂ ಓದಿ: ನೂತನ ನಿಯಮ ಗೊಂದಲ: ಅಪ್ ಡೇಟ್ ಮುಂದೂಡಿ ಮಹತ್ವದ ನಿರ್ಧಾರ ಕೈಗೊಂಡ ವಾಟ್ಸಾಪ್

Advertisement

Udayavani is now on Telegram. Click here to join our channel and stay updated with the latest news.

Next