Advertisement

ಪಠ್ಯದಲ್ಲಿ ಏನು ಓದಿಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ: ಸಚಿವ ಮಧು ಬಂಗಾರಪ್ಪ

02:33 PM Jun 08, 2023 | Team Udayavani |

ಬೆಂಗಳೂರು: ಈ ವರ್ಷವೇ ಪಠ್ಯ ಪರಿಷ್ಕರಣೆಯಾಗಿದೆ. ಮಕ್ಕಳಿಗೆ ಅವಶ್ಯಕತೆ ಇಲ್ಲದ್ದನ್ನು ತಜ್ಞರು ಪರಿಶೀಲಿಸಿ ತೀರ್ಮಾನಿಸುತ್ತಾರೆ. ಸಂಪುಟದಲ್ಲಿ ಇದು ತೀರ್ಮಾನವಾಗಲಿದೆ. ಮುಂದಿನ ಸಂಪುಟದಲ್ಲೇ ಚರ್ಚೆ ಮಾಡಲಾಗುತ್ತದೆ. ಈ ಹಿಂದೆಯೂ ಸಪ್ಲಿಮೆಂಟರಿ ಪರಿಷ್ಕರಣೆ ಆಗಿದ್ದಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಒತ್ತಡ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಆರಂಭದಲ್ಲಿ ಸೇತುಬಂಧ ಇರಲಿದೆ. ಪಠ್ಯದಲ್ಲಿ ಏನು ಓದಿಸಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ಬಹಳ ಸೂಕ್ಷ್ಮ ವಿಚಾರ. ಮಕ್ಕಳ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ‌. ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ಅಂಶ ಉಳಿಸಲಾಗುತ್ತದೆ ಎಂದರು.

ಇದನ್ನೂ ಓದಿ:WC 23 ”ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾವು ಆಡುವುದಿಲ್ಲ”: ಹೊಸ ರಾಗ ಎಳೆದ ಪಾಕಿಸ್ಥಾನ

ಪಠ್ಯ ಪರಿಷ್ಕರಣೆಯಾಗಬೇಕೆಂದು ಸಾಹಿತಿಗಳು ಸಿಎಂಗೆ ಮನವಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ಕೂಡ ಆಸಕ್ತಿ ತೋರಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನು ಮಾಡುತ್ತೇವೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಇದು ಖುಷಿಯ ವಿಚಾರ ಎಂದರು.

ತಜ್ಞರು ಪಕ್ಷಕ್ಕೆ ಸೀಮಿತವಾಗಿರಲ್ಲ. ಅವರು ಕೊಡುವ ಸಲಹೆ ಪರಿಗಣಿಸಲಾಗುತ್ತದೆ. ತಪ್ಪು ತಿಳುವಳಿಕೆ ತಕ್ಷಣ ತಡೆ ಹಿಡಿಯಬೇಕಾಗುತ್ತದೆ. ಅದನ್ನು ನಾವು ಮಾಡುತ್ತೇವೆ. ಯಾವ ಪಠ್ಯ ಬೇಡ ಎಂದು ತಜ್ಞರು ಸೂಚಿಸುತ್ತಾರೋ ಅದನ್ನು ಬೋಧಿಸದಂತೆ ತಿಳಿಸಲು ಅವಕಾಶವಿದೆ ಎಂದು ಸಚಿವರು ಹೇಳಿದರು.

Advertisement

ಶಿಕ್ಷಕರ ನೇಮಕದಲ್ಲಿ ಎರಡು ಸಮಸ್ಯೆ ಇದೆ. ಕಾನೂನಿನ ತೊಡಕಿದೆ ಅದನ್ನು ಎಜಿ ಅವರ ಚರ್ಚೆ ಮಾತನಾಡಲಾಗುತ್ತದೆ‌. ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರು ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆದಷ್ಟು ಶೀಘ್ರವಾಗಿ ಪರಿಹರಿಸಲಾಗುತ್ತದೆ‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next