Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಹೈಕಮಾಂಡ್‌ನಲ್ಲಿಯೂ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ ಎಂದರು. ನಾವು ಕೇವಲ ಅಭಿವೃದ್ಧಿ ಕಡೆ ಗಮನಹರಿಸುತ್ತಿದ್ದೇವೆ. ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಬಿಟ್ಟು, ಅಭಿವೃದ್ಧಿಗೆ ಕೈಜೋಡಿಸಬೇಕು. ಕಳ್ಳಕಾಕರ ಬಗ್ಗೆ ಮಾಹಿತಿ ಇದ್ದರೆ ಕೊಡಿ, ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಮಗೆ 24 ಗಂಟೆ ಮಾಡಲು ಕೆಲಸವಿದೆ. ಆದರೆ, ವಿರೋಧ ಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು ಕಿಡಿಕಾರಿದರು.
Related Articles
Advertisement
ಬಿಜೆಪಿಗೆ ಹೆಸರು ಬರುತ್ತದೆಂದು ಅನುದಾನ ಕೇಳುತ್ತಿಲ್ಲ: ಕೆ.ಆರ್.ಪೇಟೆ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂಬ ಜೆಡಿಎಸ್ ಶಾಸಕರ ಆರೋಪಕ್ಕೆ ಸಚಿವ ನಾರಾಯಣಗೌಡ ತಿರುಗೇಟು ನೀಡಿದರು. ಮಗು ಅಳದೆ ಯಾರೂ ಹಾಲನ್ನು ಕೊಡಲ್ಲ. ನಾನು ಬಿಜೆಪಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಬೇರೆ ಕ್ಷೇತ್ರದ ಶಾಸಕರೂ ಹೋರಾಟ ಮಾಡ ಬೇಕು. ಅವರು ಹೋರಾಟ ಮಾಡದೇ ಅನುದಾನ ಸಿಗಲ್ಲ ಎಂದರು.
ಬಿಜೆಪಿಯವರ ಬಳಿ ಅನುದಾನ ಕೇಳಲು ಜಿಲ್ಲೆಯ ಜೆಡಿಎಸ್ ಶಾಸಕರಿಗೆ ಮುಜುಗರವಾಗುತ್ತಿದೆ. ಇವರು ಮುಖ್ಯಮಂತ್ರಿ ಬಳಿ ಹೋಗಿ ಅನುದಾನ ಕೇಳುತ್ತಿಲ್ಲ. ನಾನು ತಾಲೂಕು ಅಭಿವೃದ್ಧಿ ಕನಸಿಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಆದರೆ, ಅದು ಸಹಕಾರ ಆಗದಿದ್ದಕ್ಕೆ ಪಕ್ಷಾಂತರ ಮಾಡಿದ್ದೇನೆ. ಜೆಡಿಎಸ್ ಶಾಸಕರಿಗೆ ರಾಜಕಾರಣ ಮಾಡುವುದು ಬಿಟ್ಟರೆ ಅಭಿವೃದ್ಧಿ ಮಾಡುವ ಯೋಚನೆ ಇಲ್ಲ. ಅಭಿವೃದ್ಧಿಯಾದರೆ ಬಿಜೆಪಿಗೆ ಹೆಸರು ಬರುತ್ತೆ ಅಂತ ಸರ್ಕಾರದ ಬಳಿ ಅನುದಾನ ಕೇಳುತ್ತಿಲ್ಲ ಎಂದು ಹೇಳಿದರು.