Advertisement

ತಮಿಳುನಾಡಿಗೆ ಹರಿದ ಕಾವೇರಿ ನೀರಿನ ವಿವರ ನೀಡಿದ ಸಚಿವ ಕಾರಜೋಳ

05:16 PM Sep 15, 2022 | Team Udayavani |

ಬೆಂಗಳೂರು: ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಹರಿಸಬೇಕಾಗಿದ್ದ ನೀರಿನ ಪ್ರಮಾಣ 177.25.ಟಿಎಂಸಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಸಮೃದ್ಧವಾದ ಮಳೆಯಿಂದ ಹರಿದುಹೋಗಿರುವ ಒಟ್ಟು ನೀರಿನ ಪ್ರಮಾಣ 416.65 ಟಿಎಂಸಿ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ವಿವರಗಳನ್ನು ನೀಡಿದ್ದಾರೆ.

Advertisement

ಗುರುವಾರ ವಿಧಾನ ಪರಿಷತ್ತಿನಲ್ಲಿ ಶಾಸಕರಾದ ದಿನೇಶ್‌ ಗೂಳಿಗೌಡ ಅವರ ಪ್ರಶ್ನೆಗೆ ಸಚಿವ ಗೋವಿಂದ ಎಂ. ಕಾರಜೋಳ ರವರು ತಮಿಳುನಾಡಿಗೆ ನೀರಿನ ಹರಿವಿನ ಪ್ರಮಾಣದ ಬಗ್ಗೆ ಉತ್ತರಿಸಿದರು.

ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ಕರ್ನಾಟಕದಿಂದ ತಮಿಳುನಾಡಿಗೆ ಮಾಸಿಕವಾಗಿ ಹರಿಸಬೆಕಾದ ನೀರಿನ ಪ್ರಮಾಣ ಒಟ್ಟು 177.25 ಟಿಎಂಸಿ ಆಗಿದ್ದು, 2007 ರ ಫೆಬ್ರವರಿ 05 ರ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯವು 2018 ಫೆಬ್ರವರಿ 17ರ ಆದೇಶದಲ್ಲಿ ಮಾರ್ಪಡಿಸಿರುವಂತೆ ತಮಿಳುನಾಡಿಗೆ ಕೇಂದ್ರ ಜಲ ಆಯೋಗದ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿ ಜಲ ವರ್ಷದಲ್ಲಿ ಹರಿಸಬೇಕಾದ ತಿಂಗಳ ಹರಿವಿನ ಪ್ರಮಾಣವು ಈ ಕೆಳಕಂಡಂತಿದೆ.

1) ಜನವರಿ ತಿಂಗಳಿನಲ್ಲಿ – 2.76 ಟಿಎಂಸಿ
2) ಫೆಬ್ರವರಿ – 2.50 ಟಿಎಂಸಿ
3) ಮಾರ್ಚ್ – 2.50 ಟಿಎಂಸಿ
4) ಏಪ್ರಿಲ್ – 2.50 ಟಿಎಂಸಿ
5) ಮೇ – 2.50 ಟಿಎಂಸಿ
6) ಜೂನ್ – 9.19 ಟಿಎಂಸಿ
7) ಜುಲೈ – 31.24 ಟಿಎಂಸಿ
8) ಆಗಸ್ಟ್ – 45.95 ಟಿಎಂಸಿ
9) ಸೆಪ್ಟೆಂಬರ್ – 36.76 ಟಿಎಂಸಿ
10) ಅಕ್ಟೋಬರ್ – 20.22 ಟಿಎಂಸಿ
11) ನವೆಂಬರ್ – 13.78 ಟಿಎಂಸಿ
12) ಡಿಸೆಂಬರ್ – 7.35 ಟಿಎಂಸಿ
ಒಟ್ಟು – 177.25 ಟಿಎಂಸಿ

2022ನೇ ಸಾಲಿನಲ್ಲಿ ಇಲ್ಲಿಯವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 12-09-2022 ರವರೆಗೆ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ 101.08 ಟಿಎಂಸಿ ಆಗಿದ್ದು, ಆದರೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 416.65 ಟಿಎಂಸಿ ಹೆಚ್ಚುವರಿ ನೀರು ಹರಿದು ದಾಖಲಾಗಿರುತ್ತದೆ.

Advertisement

ಕಾವೇರಿ ನ್ಯಾಯಾಧೀಕರಣದ ತೀರ್ಪಿನನ್ವಯ ಪ್ರತಿ ವರ್ಷ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ಈ ಕೆಳಕಂಡಂತಿದೆ.
1) ಜೂನ್ ತಿಂಗಳಿನಲ್ಲಿ – 9.19 ಟಿಎಂಸಿ
2) ಜುಲೈ – 31.24 ಟಿಎಂಸಿ
3) ಆಗಸ್ಟ್ – 45.95 ಟಿಎಂಸಿ
4) ಸೆಪ್ಟೆಂಬರ್ – 14.70 ಟಿಎಂಸಿ
(12-09-2022 ರವರೆಗೆ)
ಒಟ್ಟು – 101.08 ಟಿಎಂಸಿ

ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಹರಿದಿರುವ ನೀರಿನ ಪ್ರಮಾಣ ಈ ಕೆಳಕಂಡಂತಿದೆ.
1) ಜೂನ್ ತಿಂಗಳಿನಲ್ಲಿ – 16.46 ಟಿಎಂಸಿ
2) ಜುಲೈ – 106.93 ಟಿಎಂಸಿ
3) ಆಗಸ್ಟ್ – 223.57 ಟಿಎಂಸಿ
4) ಸೆಪ್ಟೆಂಬರ್ – 69.69 ಟಿಎಂಸಿ
(12-09-2022 ರವರೆಗೆ)
ಒಟ್ಟು – 416.65 ಟಿಎಂಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next