Advertisement

Hampil: ಜನತಾ‌ ಪ್ಲಾಟ್‌ ನಿವಾಸಿಗಳ ಸಮಸ್ಯೆ ಆಲಿಸಿದ ಸಚಿವ ಜಮೀರ್

05:45 PM Aug 09, 2023 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ಹಂಪಿಗೆ ಭೇಟಿ ನೀಡಿ, ಜನತಾ ಪ್ಲಾಟ್ ನಿವಾಸಿಗಳ ಸಮಸ್ಯೆ ಆಲಿಸಿದರು.

Advertisement

ನ್ಯಾಯಾಂಗ ನಿಂದನೆ ಕೇಸ್ ಹೆಸರಲ್ಲಿ ಕಳೆದ ಎರಡು ತಿಂಗಳ ಹಿಂದೆ ವಿಜಯನಗರ ಜಿಲ್ಲಾಡಳಿತ ಇಲ್ಲಿನ ಹೋಂ ಸ್ಟೇ, ಅಂಗಡಿ ಮುಂಗಟ್ಟು ಹಾಗೂ ಹೊಟೇಲ್ ಗಳಿಗೆ ಬೀಗಮುದ್ರೆ ಹಾಕಿತ್ತು. ಇದರಿಂದ ಕಳೆದ ಎರಡು ತಿಂಗಳಿಂದ ಹಂಪಿಗೆ ಬರುವ ಯಾತ್ರಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ವಸತಿ ಸೌಲಭ್ಯ ಇರಲಿ ಆಹಾರ, ನೀರೂ ಸಹ ದೊರಕದೆ ಸಮಸ್ಯೆಯಾಗಿತ್ತು. ಇನ್ನು ಸ್ಥಳೀಯರೂ ಸಹ ಯಾವುದೇ ಸರಕು ಬೇಕಾದರೂ ಸಮೀಪದ ಗ್ರಾಮಗಳಿಗೆ ತೆರಳುವ ಪರಿಸ್ಥಿತಿ ಬಂದೊದಗಿದೆ.

ಈ ಎಲ್ಲಾ ವಿಷಯವನ್ನು ಸ್ಥಳೀಯರು ಭೇಟಿ ನೀಡಿದ ಸಚಿವ ಜಮೀರ್ ಅಹಮದಗ ಅವರ ಗಮನಕ್ಕೆ ತಂದರು. ಮಹಿಳೆಯರು ಹಾಗೂ ಗ್ರಾಮಸ್ಥರು ತಮ್ಮ ಅಹವಾಲು ಸಲ್ಲಿಸಿದರು. ಈ ವೇಳೆ ಸಚಿವರೊಂದಿಗೆ ಮಾತನಾಡಿದ ಗ್ರಾಮಸ್ಥ ಕಿರಣ್ ಹಂಪಿ ಜನರ ಮೇಲಿರುವ ಗಾಂಜಾ ಮಾರಾಟ, ವೇಷ್ಯಾವಾಟಿಕೆ ಆರೋಪದ ಕುರಿತು ಇರುವ ವಾಸ್ತವತೆ, ಹಂಪಿ ಜನರ ಮೇಲೆ ಕೇಳಿ ಬಂದ ಆರೋಪಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಎಲ್ಲರು ಆರೋಪಿಸುವಂತೆ ಇಲ್ಲಿ ಯಾವುದೇ ರೆಸಾರ್ಟ್ ಗಳಿಲ್ಲ. ಇರುವುದೆಲ್ಲವೂ ಹೋಂ ಸ್ಟೇಗಳು. ಈ ಹೋಂಸ್ಟೇಗಳು ವಾಣಿಜ್ಯ ವಹಿವಾಟಿನ ಅಡಿಯಲ್ಲಿ ಬರುವುದೇ ಇಲ್ಲ. ಆದರೂ ಅನಧಿಕೃತ ವ್ಯವಹಾರ ಎಂದು ಆರೋಪಿಸಿ ಜನರ ಜೀವನ‌ ನಡೆಸಲೂ ಸಹ ತೊಂದರೆ ಮಾಡಿದ್ದಾರೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹಮದ್ ನಿಮ್ಮಗಳ ಬಗ್ಗೆ ಇರುವ ತಪ್ಪು ಗ್ರಹಿಕೆ ನನಗೀಗ ನಿವಾರಣೆಯಾಯಿತು ಎಂದರು.

ಜನರ ಅಹವಾಲು ಸ್ವೀಕರಿಸಿದ ಸಚಿವ ಜಮೀರ್ ಅಹಮದ್ ಖಾನ್ ನಂತರ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದರು.

Advertisement

ಹಂಪಿ ಜನರು ಗಾಂಜಾ ಮಾರಾಟ ಮಾಡುತ್ತಾರೆ ವೇಷ್ಯಾವಾಟಿಕೆ ನಡೆಸುತ್ತಾರೆ ಎನ್ನುವ ಆರೋಪಗಳು ಹುರುಳಿಲ್ಲದವು ಎನ್ನುವುದನ್ನು ಸಚಿವರ ಗಮನಕ್ಕೆ ತರಲಾಗಿದೆ. ನ್ಯಾಯಾಂಗದ ಆದೇಶ ಆಗುವವರೆಗಾದರೂ ಜನರ ಜೀವನೋಪಾಯಕ್ಕೆ ಯಾವುದೇ ತೊಂದರೆ ಮಾಡದಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಎಂದು‌‌ ನಿವಾಸಿ ಕಿರಣ್ ಕುಮಾರ್ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next