Advertisement

ಸಿಂದಗಿ-ಹಾನಗಲ್‌ ಗೆಲ್ತೀವಿ : ಸಚಿವ ಗೋವಿಂದ ಕಾರಜೋಳ 

02:45 PM Oct 07, 2021 | Team Udayavani |

ಬೆಳಗಾವಿ: ಸಿದಂಗಿ, ಹಾನಗಲ್‌ ಉಪ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಮುಂದಿಟ್ಟುಕೊಂಡು ವೋಟ್‌ ಕೇಳುತ್ತೇವೆ. ಅಭ್ಯರ್ಥಿ ಆಯ್ಕೆ ಕಗ್ಗಂಟಲ್ಲ. ಅದು ರಾಜಕೀಯ ತಂತ್ರ. ಕೆಲವೇ ತಾಸುಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗುತ್ತದೆ ಎಂದರು.

ಮಹದಾಯಿ ನದಿ ನೀರಿನ ಹಂಚಿಕೆ ಸದ್ಯ ನ್ಯಾಯಾಲಯದಲ್ಲಿ ಇದೆ. ಈ ಬಗ್ಗೆ ಹೆಚ್ಚು ಚರ್ಚೆ ಅಗತ್ಯವಿಲ್ಲ. ರಾಜ್ಯಕ್ಕೆ 13.4 ಟಿಎಂಸಿ ಅಡಿ ನೀರು ಹಂಚಿಕೆ ಆಗಿದೆ. ಇದರಲ್ಲಿ 5 ಟಿಎಂಸಿ ಅಡಿ ನೀರನ್ನು ಅಗತ್ಯ ಇರುವ ತಾಲೂಕಿಗೆ ಬಳಸಲಾಗುತ್ತಿದೆ. ಇನ್ನುಳಿದ 8 ಟಿಎಂಸಿ ಅಡಿ ನೀರನ್ನು ವಿದ್ಯುತ್‌ ಉತ್ಪಾದಿಸಲು ಬಳಸಲಾಗುತ್ತಿದೆ. ನಮ್ಮ ಪಾಲಿನ ನೀರನ್ನು ಉಪಯೋಗಿಕೊಳ್ಳಲು ಯೋಜನೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಕೋರ್ಟ್‌ನಲ್ಲಿ ವಿವಾದ ಇತ್ಯರ್ಥ ಆದ ಬಳಿಕ ಯೋಜನೆಯ ಕೆಲಸ ಆರಂಭಿಸಲಾಗುವುದು ಎಂದರು.

ಹೈದ್ರಾಬಾದ್‌ ನಿಜಾಮರ ಆಡಳಿತದಲ್ಲಿ ಹೆ„ದ್ರಾಬಾದ್‌ ಕರ್ನಾಟಕ ಅಂತ ಹೆಸರಿತ್ತು. ಕಲ್ಯಾಣರು ಆಳಿರುವುದಕ್ಕೆ ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಿಸಿದ್ದೇವೆ. ಗುಲಾಮಗಿರಿ ಸಂಕೇತ ಅಳಿಸಿಹಾಕುವುದಕ್ಕಾಗಿ ಕಲ್ಯಾಣ ಕರ್ನಾಟಕ ಅಂತ ನಾಮಕರಣ ಮಾಡಲಾಗಿದೆ. ಆ ರೀತಿ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಇಲ್ಲ. ಸಾಧಕ-ಬಾಧಕಗಳನ್ನು ನೋಡಿ ಕಿತ್ತೂರು ಕರ್ನಾಟಕ ಮಾಡಲಾಗುವುದು ಎಂದರು.

ಅಸತ್ಯ, ಹಿಂಸೆ ಮೇಲೆ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ದುರಾದೃಷ್ಟಕರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷ ಕಂಬಾಳಪಲ್ಲಿ ಘಟನೆ ನೆನಪಿಸಿಕೊಳ್ಳಬೇಕು. ಎಸ್‌. ಎಂ. ಕೃಷ್ಣ ಮುಖ್ಯಮಂತ್ರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರು ಆಗಿದ್ದರು. ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡುತ್ತಾರೆ. ಹರಿಜನರಿಗೆ ಮಲ ತಿನ್ನಿಸಿದರ ಬಗ್ಗೆ ಸಿದ್ದರಾಮಯ್ಯನವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಆಕಸ್ಮಿಕವಾಗಿ ವಾಹನ ಅಪಘಾತ ಆಗಿಧ್ದೋ ಅಥವಾ ಉದ್ದೇಶ ಪೂರ್ವಕವಾಗಿ ಹಾಯಿಸಿಧ್ದೋ ಗೊತ್ತಿಲ್ಲ. ಇಂಥ ಘಟನೆ ಆಗಬಾರದಿತ್ತು, ಯಾರೇ ಇರಲಿ ಅದನ್ನು ಖಂಡಿಸುತ್ತೇನೆ. ಇಂಥ ಘಟನೆ ಎಲ್ಲಿಯೂ ನಡೆಯಬಾರದು. ಆದರೆ ಇಂಥ ವಿಷಯದಲ್ಲಿ ರಾಜಕಾರಣ ಮಾಡಬಾರದು. ಸತ್ಯ ಮತ್ತು ವಸ್ತುಸ್ಥಿತಿ ಏನಿದೆ ಅದನ್ನ ಹೇಳಲು ಅಡ್ಡಿಯಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next