Advertisement

ಮೂರನೇ ಅಲೆ ತಡೆಯಲು ಸಜ್ಜಾಗಿ: ಕಾರ್ಯಕರ್ತರಿಗೆ ಸಚಿವ ಗೋಪಾಲಯ್ಯ ಕರೆ

06:50 PM Aug 31, 2021 | Team Udayavani |

ಬೆಂಗಳೂರು: ಕೋವಿಡ್ ಮೂರನೇ ಅಲೆ ತಡೆಯಲು ಕ್ಷೇತ್ರದ ಜನತೆಗೆ ಅನುಕೂಲವಾಗುವಂತೆ ಜೊತೆ ಜೊತೆಯಲಿ ಕಾರ್ಯಕರ್ತರು, ಅಧಿಕಾರಿಗಳು ಸಜ್ಜಾಗುವಂತೆ ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಕರೆ ನೀಡಿದರು.

Advertisement

ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಂಡಲ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮ ಹಾಗೂ ಕ್ಷೇತ್ರದಲ್ಲಿ ಕೋವಿಡ್ ಸಮಯದಲ್ಲಿ ಕರ್ತವ್ಯ ನಿಭಾಯಿಸಿದ ಡಾಕ್ಟರ್ ಮತ್ತು ಅಧಿಕಾರಿಗಳ ವರ್ಗ ಹಾಗೂ ಕಾರ್ಯಕರ್ತರುಗಳಿಗೆ ಸನ್ಮಾನಿಸಿ ಮಾತನಾಡಿದರು.

ಲಸಿಕೆ ನೀಡಲು ನಮ್ಮ ಮುಖಂಡರುಗಳು ಪ್ರತಿ ಮನೆಗೆ ಹೋಗಿ ಟೋಕನ್ ನೀಡುತ್ತಿದ್ದಾರೆ. ವಾರದೊಳಗೆ ನಮ್ಮ ಕ್ಷೇತ್ರದ ಎಲ್ಲಾ ಜನತೆಗೆ ವ್ಯಾಕ್ಸಿನೇಷನ್ ನೀಡುವುದು ಮುಕ್ತಾಯವಾಗುತ್ತದೆ. ಮೂರನೇ ಅಲೆ  ತಡೆಯಲು ಈಗಾಗಲೇ ಕೆಂಪೇಗೌಡ ಸಮುದಾಯ ಭವನದಲ್ಲಿ ನೂರು ಹಾಸಿಗೆಗಳ ಕೇಂದ್ರ ಸಿದ್ಧವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಉಪ ಮೇಯರ್ ಹರೀಶ್, ಉತ್ತರ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯರಾಮಯ್ಯ ಕಾರ್ಯದರ್ಶಿ ಲಕ್ಷ್ಮಣಗೌಡ ಕ್ಷೇತ್ರದ ಮಹಿಳಾ ಅಧ್ಯಕ್ಷೆ ನಾಗರತ್ನ ಲೋಕೇಶ್ ಪಾಲಿಕೆ ಮಾಜಿ ಸದಸ್ಯ ಮಹದೇವ್ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next