Advertisement

Mudhol: ತಾಯಿ-ಮಗು ಆಸ್ಪತ್ರೆ ಅನುಷ್ಠಾನಕ್ಕೆ‌ ಕ್ರಮ: ಸಚಿವ ದಿನೇಶ್ ಗುಂಡೂರಾವ್

04:29 PM Jun 27, 2024 | Team Udayavani |

ಮುಧೋಳ : ಮುಧೋಳ ತಾಲೂಕಿಗೆ ತಾಯಿ-ಮಗು ಆಸ್ಪತ್ರೆ ಮಂಜೂರಾಗಿದ್ದು, ಆಸ್ಪತ್ರೆ ಕಾರ್ಯಾರಂಭಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಟಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆಯುತ್ತಿರುವ ಮುಧೋಳ ನಗರಕ್ಕೆ ಅಗತ್ಯವಿರುವ ತಾಯಿ-ಮಗು ಆಸ್ಪತ್ರೆಗೆ ಆರಂಭಕ್ಕೆ ಹೆಚ್ಚಿನ ಒತ್ತಡವಿತ್ತು, ಇದೀಗ ಆಸ್ಪತ್ರೆ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಆಸ್ಪತ್ರೆ ಕಾರ್ಯಾರಂಭಗೊಳ್ಳಲಿದೆ ಎಂದರು.

ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಮುಂಬರುವ ದಿನಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ‌ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಸುಸಜ್ಜಿತ ಆಕ್ಸಿಜನ್ ಘಟಕವಿದ್ದು ಅಗತ್ಯ ತಜ್ಞರ ತಂಡವಿರದ ಕಾರಣ ಹಾಳಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ತಜ್ಞರ ತಂಡವನ್ನು ನೇಮಿಸಿ ಆಕ್ಸಿಜನ್ ಬಳಕೆಗೆ ಕ್ರಮವಹಿಸಲಾಗುವುದು. ಇದರಿಂದ ಹೊರಗಡೆಯಿಂದ ಆಕ್ಸಿಜನ್ ಖರೀದಿಸುವ ಆರ್ಥಿಕ ಹೊರೆ ತಗ್ಗಿಸಲಾಗುವುದು ಎಂದರು.

ಆಸ್ಪತ್ರೆಯಲ್ಲಿನ ಸ್ವಚ್ಛತೆ ಕಂಡು ಪ್ರಶಂಸೆ ವ್ಯಕ್ತಪಡಿಸಿದ ಸಚಿವರು ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಯನ್ನು ಒದಗಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಪ್ರಧಾನಕಾರ್ಯದರ್ಶಿ ಹರ್ಷಾಗುಪ್ತಾ, ಡಾ. ಜಿ.ಎನ್.ಶ್ರೀನಿವಾಸ, ಡಾ. ಅನಂತ ದೇಸಾಯಿ, ಡಿಎಚ್ಒ ಜಯಶ್ರೀ ಎಮ್ಮಿ, ಡಾ. ರಾಜಕುಮಾರ ಯರಗಲ್ಲ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಟಿಎಚ್ಒ ವೆಂಕಟೇಶ ಮಲಘಾಣ, ಡಾ.ಎ.ಎ.ಸೈರ್ಯವಂಶಿ, ಸೇರಿದಂತೆ ಇತರರು ಇದ್ದರು.

Advertisement

ಇದನ್ನೂ ಓದಿ: NEET-UG ಪ್ರಕರಣ: ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು…

Advertisement

Udayavani is now on Telegram. Click here to join our channel and stay updated with the latest news.

Next