Advertisement

ಪ್ರವಾಹ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ: ಡಾ. ಸಿ. ಎನ್‌. ಅಶ್ವತ್ಥನಾರಾಯಣ್‌

01:18 PM Sep 05, 2022 | Team Udayavani |

ರಾಮನಗರ: ಪ್ರವಾಹ ಆಗಿ ಬಿಟ್ಟಿದೆ ಎಂದು ಯಾರೂ ಗಾಬರಿಯಾಗಬೇಡಿ. ನಾವು ನಿಮ್ಮ ಜತೆ, ಇರುತ್ತೇವೆ.ಸಂಬಂಧಿಸಿದ ಅಧಿಕಾರಿಗಳು ನಿಮಗೆ ಸಹಕಾರಕೊಡುತ್ತಾರೆ. ಸರ್ಕಾರದಿಂದ 10 ಸಾವಿರ ಹಣ ನೀಡಲಾಗುತ್ತದೆ. ಪ್ರತಿ ಮನೆಗೂ ರೇಷನ್‌ ಕೊಡಲಾಗುತ್ತೆ. ಇಲ್ಲಿನ ಮೂಲಭೂತ ಸಮಸ್ಯೆ ಬಗ್ಗೆ ಗಮನಹರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್‌. ಅಶ್ವತ್ಥನಾರಾಯಣ್‌ ಹೇಳಿದರು.

Advertisement

ನಗರ ವ್ಯಾಪ್ತಿಯ ಅಕೇಶ್ವರ ಕಾಲೋನಿ, ಟಿಪ್ಪುನಗರ ಸೇರಿದಂತೆ ಸುತ್ತಮುತ್ತಲಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಅಭಿವೃದ್ಧಿ ಮಾಡುವಲ್ಲಿ ನಮ್ಮ ಸರ್ಕಾರ ಮುಂದಿದೆ.ಅದರಲ್ಲೂ ಕೈಗಲೀಜು ಮಾಡಿಕೊಳ್ಳದೇ, ಸ್ವಾರ್ಥಮಾಡಿಕೊಳ್ಳದೇ ಅಭಿವೃದ್ಧಿ ಮಾಡುತ್ತಿದ್ದೇವೆ. ಅಚ್ಚುಕಟ್ಟಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಯಾರ ಬಳಿಯುಕೈತೋರಿಸಿ ಕೊಳ್ಳುವ ರೀತಿಯಲ್ಲಿ ನಾವು ಯಾವ ಕೆಲಸವನ್ನು ಮಾಡುತ್ತಿಲ್ಲ ಎಂದರು.

ಗಂಜಿ ಕೇಂದ್ರ ತೆರೆಯಲಾಗಿದೆ: ನಗರಕ್ಕೆ 450 ಕೋಟಿ ರೂಪಾಯಿ ಕುಡಿಯುವ ನೀರಿನ ಯೋಜನೆಯನ್ನು ನೀಡಿದ್ದೇವೆ. ಎತ್ತಿನಹೊಳೆ, ಶ್ರೀರಂಗ ಯೋಜನೆ, ಸತ್ತೇಗಾಲ ನೀರಿನ ಯೋಜನೆ ಮುಂದುವರಿಸುತ್ತಿದ್ದೇವೆ. ಮಳೆಯಿಂದ ಹಾನಿಯಾಗಿರುವ ಪ್ರದೇಶದಲ್ಲಿಈಗಾಗಲೇ ಸರ್ಕಾರದಿಂದ 10 ಸಾವಿರ ಪರಿಹಾರ ನೀಡಲಾಗಿದೆ. ಜತೆಗೆ 5 ಲಕ್ಷ ತನಕ ನೀಡಲಾಗುತ್ತದೆ. ಗಂಜಿ ಕೇಂದ್ರ ತೆರೆಯಲಾಗಿದೆ. ಪರಿಹಾರ ನೀಡುವುದರಲ್ಲಿ 2 ಪಟ್ಟು ಹೆಚ್ಚಳ ಮಾಡಿದ್ದೇವೆ. ಬೆಳೆ ಹಾನಿಯಾದಾಗಲೂ ನೀಡುತ್ತಿದ್ದೇವೆ ಎಂದು ಹೇಳಿದರು.

ಶಾಶ್ವತ ಪರಿಹಾರ ದೊರಕಲಿದೆ: ಬೆಂಗಳೂರು- ಮೈಸೂರು ರಸ್ತೆ ನಿರ್ಮಾಣವಾಗುತ್ತಿರುವುದು ಜನತೆಗೆ ಅನುಕೂಲ ಕಲ್ಪಿಸಬೇಕು. ಹಾಗಾಗಿ, ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕ್ರಮಕೈಗೊಳ್ಳಲಾಗುತ್ತದೆ. ಸ್ವಲ್ಪ ಸಮಯ ತೆಗೆದುಕೊಂಡರುಶಾಶ್ವತ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಗಡ್ಕರಿ ಭೇಟಿ: ತಪ್ಪು ಮಾಡಿರುವುದಕ್ಕೆ ದಾಖಲೆ ನೀಡಿದರೇ ಸ್ವಾಗತಿಸುತ್ತೇವೆ. ಖಂಡಿತವಾಗಿಯೂ ಯಾರೇ ತಪ್ಪು ಮಾಡಿದ್ದರೂ, ಅವರ ಮೇಲೆನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ನೆರೆಯಿಂದಾಗಿ ಹಾನಿಯಾಗಲೂ ಈಭಾಗದ ಪ್ರತಿನಿಧಿಗಳೇ ಕಾರಣರಾಗಿದ್ದಾರೆ. ಅವರಿಂದಲೇ ಇಂತಹಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲಿನಿಂದ ಪ್ರತಿನಿಧಿಸಿದವರು, ಚರಂಡಿ, ಕಾಲುವೆ, ಸೇರಿದಂತೆ ಒತ್ತುವರಿಯ ಲೆಕ್ಕ ಇಟ್ಟುಕೊಳ್ಳಬೇಕು ಎಂದು ಹೇಳಿದರು.

Advertisement

ಯಾರಿಗೋ ಜ್ವರ ಬಂದರೇ, ಮತ್ತ್ಯಾರಿಗೋ ಬರೆ ಎಳೆದರಂತೆ. ಜ್ವರ ಬರಿಸಿದವರನ್ನು ಬಿಟ್ಟುಜನರ ಮೇಲೆ ಬರೆ ಎಳೆಯಲು ಆಗುತ್ತದೆಯೇ? ಅವರು, ಲೆಕ್ಕದಲ್ಲಿ ಸಿಗುತ್ತಾರೆಯೇ? ಅಥವಾದಾಖಲೆಯಲ್ಲಿ ಸಿಗುತ್ತಾರೆಯೇ? ಎಂದು ಪ್ರಶ್ನಿಸಿದಅವರು, ನೆರೆಗೆ ಈ ಭಾಗದಲ್ಲಿ ಮೊದಲನಿಂದಲೂಪ್ರತಿನಿಧಿ ಯಾಗಿರುವ ಮಹಾನುಭಾವರು ಕಾರಣರಾಗಿದ್ದಾರೆ ಎಂದು ಹೇಳಿದರು.

ಬಾಡಿಗೆದಾರರಿಗೂ ಪರಿಹಾರ ವ್ಯವಸ್ಥೆ: ಸಚಿವ

ರಾಮನಗರ: ಕಂಡು ಕೇಳರಿಯದ ಮಳೆಯಿಂದ ಸಂತ್ರಸ್ತರ ಪೈಕಿ ಬಾಡಿಗೆ ಮನೆಗಳಲ್ಲಿದ್ದ ಬಾಡಿಗೆದಾರರಿಗೂ ತಕ್ಷಣವೇ 10 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್‌ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಳೆಯಿಂದ ವಾಣಿಜ್ಯ ಕಟ್ಟಡಗಳಿಗೂ ಅಪಾರ ಹಾನಿಯಾಗಿದೆ. ಇವಕ್ಕೂ ಎನ್‌ಡಿಆರ್‌ ಎಫ್‌ ಮಾನದಂಡಗಳಡಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಮನೆ ಹಾನಿಗೆ ಹಿಂದೆ ಕೇವಲ 2 ಸಾವಿರ ರೂ. ಮನೆ ಸಂಪೂರ್ಣ ಬಿದ್ದರೆ ಕೇವಲ 1 ಲಕ್ಷ ರೂ. ಮಾತ್ರ ಪರಿಹಾರ ಕೊಡಲಾಗುತ್ತಿತ್ತು. ಇದನ್ನು ರಾಜ್ಯ ಬಿಜೆಪಿಸರ್ಕಾರ ಕ್ರಮವಾಗಿ 10 ಸಾವಿರ ರೂ. 5 ಲಕ್ಷ ರೂಪಾಯಿಗಳಿಗೆ ಏರಿಸಿದೆ ಎಂದರು.

ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಡಿಮೆ ಎಂಟ್ರಿ ಹಾಗೂ ಎಕ್ಸಿಟ್‌ ಪಾಯಿಂಟ್‌ ನೀಡಿರುವ ಕುರಿತುಜನತೆಯಿಂದ ವಿರೋಧದ ಮಾತುಕೇಳಿಬರುತ್ತಿದ್ದು, ಶೀಘ್ರವೇ ಈ ಹೆದ್ದಾರಿಯಲ್ಲಿ ಸಾಧ್ಯವಾದಷ್ಟೂ ಒಳಬರುವ ಹಾಗೂ ಹೊರ ಹೋಗುವ ಪಾಯಿಂಟ್‌ಗಳ ಹೆಚ್ಚಳಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಎರಡು ಹಂತದಲ್ಲಿ ಮಾಡಲಾಗುತ್ತಿದ್ದು, ನಮ್ಮ ಸರ್ಕಾರದಿಂದಲೇ ಇದನ್ನು ಲೋಕಾರ್ಪಣೆ ಮಾಡಲಾಗುತ್ತದೆ.ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ

 

 

Advertisement

Udayavani is now on Telegram. Click here to join our channel and stay updated with the latest news.

Next