Advertisement

ಸಿದ್ದರಾಮಯ್ಯನವರೇ ಮನೆಯಲ್ಲಿ ಕುಳಿತು ಆರೋಪ ಮಾಡುವುದರಿಂದ ಏನು ಕೆಲಸ ಆಗುವುದಿಲ್ಲ: ಭೈರತಿ

02:46 PM May 07, 2021 | Team Udayavani |

ದಾವಣಗೆರೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮನೆಯಲ್ಲಿ ಕುಳಿತು ಆರೋಪ ಮಾಡುವುದರಿಂದ ಏನು ಕೆಲಸ ಆಗುವುದಿಲ್ಲ. ಫೀಲ್ಡ್‌ಗೆ ಇಳಿದು ಕೆಲಸ ಮಾಡಲಿ ಎಂದು ನಗರಾಭಿವೃದ್ಧಿ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಾಕೀತು ಮಾಡಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಚಾರವಾಗಿ ಸಿದ್ದರಾಮಯ್ಯ ಅವರು ಸುಳ್ಳು ಆರೋಪ ಮಾಡುವದನ್ನು ಬಿಡಬೇಕು. ಮನೆಯಲ್ಲೇ ಕುಳಿತು ಹೇಳುವುದಲ್ಲ, ಜನರ ಬಳಿ ಬಂದು ಕೆಲಸ ಮಾಡಿದಾಗಲೇ  ಏನೂ ಎಂಬುದು ಗೊತ್ತಾಗುತ್ತದೆ. ಸುಖಾ ಸುಮ್ಮನೆ ಆರೋಪ ಮಾಡುವುದನ್ನ ಬಿಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಸಿನಿಮೀಯ ಮಾದರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸಾವು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಿಮಗೆ (ಸಿದ್ದರಾಮಯ್ಯ) ಬೇರೆ ಏನೂ ಕೆಲಸ ಇಲ್ಲ. ಮನೆಯಲ್ಲಿ ಕುಳಿತು, ಫೋನ್‌ನಲ್ಲೇ ಎಲ್ಲವನ್ನೂ ಹೇಳಿದರೆ ಏನೂ ಕೆಲಸ ಆಗುವುದಿಲ್ಲ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next