Advertisement

ಏರಿಯಲ್ ಲ್ಯಾಡರ್ ಫ್ಲಾಟ್ ಫಾರ್ಮ್ ನ ಅಗ್ನಿಶಾಮಕ ವಾಹನಗಳಿಗೆ ಚಾಲನೆ ನೀಡಿದ ಗೃಹ ಸಚಿವರು

05:35 PM Jul 19, 2020 | keerthan |

ಬೆಂಗಳೂರು: ದೊಡ್ಡ ಕಟ್ಟಡಗಳಿಗೆ ಸ್ಯಾನಿಟೈಸ್ ಮಾಡಲು ಸಹಾಯಕವಾಗುವ ಎರಡು ಲ್ಯಾಡರ್ ಫ್ಲಾಟ್ ಫಾರ್ಮ್ ನ ಅಗ್ನಿಶಾಮಕ ವಾಹನಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂದು ಚಾಲನೆ ನೀಡಿದರು.

Advertisement

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಸೇರ್ಪಡೆಯಾದ ಏರಿಯಲ್ ಲ್ಯಾಡರ್ ಫ್ಲಾಟ್ ಫಾರ್ಮ್ ನ 54 ಮೀಟರ್ ಎತ್ತರದ ವರೆಗಿನ ಎರಡು ವಾಹನಗಳಿಗೆ ಗೃಹ ಸಚಿವರು ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ನಗರದಲ್ಲಿ ಪ್ರತಿನಿತ್ಯ ಕೋವಿಡ್ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಗಳು, ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಸುಮಾರು 50 ಅಗ್ನಿ ಶಾಮಕ ವಾಹನಗಳಿಂದ ರೋಗ ನಿವಾರಕ ದ್ರಾವಣ ಸಿಂಪಡಣೆ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 90 ಮೀಟರ್ ಉದ್ದದ ಎಎಲ್ ಪಿ ವಾಹನ ಖರೀದಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next