Advertisement

ಸಚಿವ ಭೈರತಿ ಬಸವರಾಜ್ ರಿಂದ ಕಲಬುರಗಿ ಮಹಾನಗರ ಪ್ರದಕ್ಷಿಣೆ: ಸ್ವಚ್ಛತಾ ಕಾರ್ಯ ವೀಕ್ಷಣೆ

08:58 AM Jun 24, 2020 | Mithun PG |

ಕಲಬುರಗಿ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬುಧವಾರ ಬೆಳಿಗ್ಗೆಯೇ ಕಲಬುರಗಿ ಮಹಾನಗರ ಪ್ರದಕ್ಷಿಣೆ ಮಾಡಿದರು. ಶರಣಬಸವೇಶ್ವರ ದೇವಸ್ಥಾನ, ವಿದ್ಯಾನಗರ, ಎಸ್ ವಿಪಿ ಸರ್ಕಲ್, ಜಗತ್ ಸರ್ಕಲ್, ಸ್ವಸ್ತಿಕ್ ನಗರದಲ್ಲಿ ಸಂಚಾರ ನಡೆಸಿದ ಅವರು ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.

Advertisement

ನಗರವನ್ನು ಸ್ವಚ್ಛವಾಗಿಡಬೇಕು. ಉದ್ಯಾನವನಗಳನ್ನು ಸೂಕ್ತವಾಗಿ ನಿರ್ವಹಣೆ ‌ಮಾಡಬೇಕು‌ ಎಂದು ಸಚಿವರು ಸೂಚಿಸಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಿದರು.  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನಗಳಲ್ಲಿ ಸುಮಾರು 5 ಸಾವಿರ ಸಸಿಗಳನ್ನು ‌ನೆಡುವಂತೆ  ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ಸಚಿವ ಭೈರತಿ ಸೂಚನೆ ‌ನೀಡಿದರು.

ಸಚಿವರು ಬರುತ್ತಿರುವುದರಿಂದ ಪಾಲಿಕೆ, ಪೌರಕಾರ್ಮಿಕರಿಗೆ ಹೊಸ ಗಮ್ ಬೂಟ್, ಕೈಗವಸು, ಜಾಕೆಟ್, ಮಾಸ್ಕ್ ಗಳನ್ನು ಒದಗಿಸಿತ್ತು.

ಆ ಬಳಿಕ ಸಚಿವರು ಜೇವರ್ಗಿ ರಸ್ತೆಯಲ್ಲಿರುವ ನಂದಿಕೂರ ಗ್ರಾಮದಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ‌ವೀಕ್ಷಿಸಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಾಲಿಕೆಯ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next