Advertisement

ಸತೀಶ್ ಜಾರಕಿಹೊಳಿಗೆ ಜನ ತಕ್ಕ ಉತ್ತರವನ್ನು ನೀಡುತ್ತಾರೆ: ಬಿ.ಸಿ.ಪಾಟೀಲ್

12:37 PM Nov 09, 2022 | Team Udayavani |

ಚಿತ್ರದುರ್ಗ: ಸಿಂಧೂ ನದಿಯಿಂದ ಹಿಂದೂ ಎಂಬ ಪದ ಬಂದಿದೆ. ಸತೀಶ್ ಬಹುಶಃ ಇತಿಹಾಸ ಓದಿಲ್ಲ ಅನ್ನಿಸುತ್ತದೆ. ಸತೀಶ್ ಹೇಳಿಕೆಯನ್ನು ಜನರು ಸಹಿಸುವುದಿಲ್ಲ. ಜಾರಕಿಹೊಳಿಗೆ ತಕ್ಕ ಉತ್ತರವನ್ನು ಜನರು ನೀಡುತ್ತಾರೆ. ಸತೀಶ್ ಸರ್ಟಿಫಿಕೇಟ್ ಗಳಲ್ಲಿ ಹಿಂದೂ ಅಂತ ಹಾಕಿಕೊಂಡಿದ್ದೇಕೆ. ಹಿಂದೂಗಳ ಬಗ್ಗೆ ಅಸಭ್ಯವಾಗಿ, ಹಗುರವಾಗಿ, ಅಶ್ಲೀಲವಾಗಿ ಮಾತಾಡಬಾರದು. ವಾಲ್ಮೀಕಿ ರಾಮಾಯಣ ಬರೆದಿದ್ದಾರೆ, ರಾಮ ಯಾರು. ಇವರು ಯಾರು ನಮ್ಮ ದೇಶದವರಲ್ಲವೇ, ಪರ್ಶಿಯನ್ನರಾ? ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹರಿಹಾಯ್ದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸತೀಶ್ ಕೆಳಮಟ್ಟದಲ್ಲಿ ಮಾತಾಡಬಾರದು, ನಾಲಿಗೆ ಮೇಲೆ ಹಿಡಿತ ಇರಬೇಕು.  ಈಗ ಸಿದ್ಧರಾಮಯ್ಯ ಬಡವರಿಗೆ ಊಟ ಹಾಕುತ್ತಿದ್ದಾರೆಯೇ?. ಕೋವಿಡ್ ವೇಳೆ ಪ್ರಧಾನಿ ಮೋದಿಯಿಂದ ಉಚಿತ ಅಕ್ಕಿ ವಿತರಣೆ  ಯೋಜನೆ. ಕೊವಿಡ್ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದೇಶ ಮಾರಾಟ ಮಾಡುತ್ತಿದ್ದರು. ಕೊವಿಡ್ , ಪ್ರವಾಹ ಸ್ಥಿತಿ ಸಮರ್ಥವಾಗಿ ನಿಭಾಯಿಸಿದ್ದೇವೆ. ಬಡವರು ಸಿದ್ಧರಾಮಯ್ಯ ಮನೆಗೆ ಹೋಗಿ ಊಟ ಕೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಚಂದ್ರು ಸಾವು ಪ್ರಕರಣ: ತನಿಖಾ ವರದಿ ಬಂದ ಬಳಿಕವೇ ಮುಂದಿನ ತೀರ್ಮಾನ; ಸಿಎಂ ಬೊಮ್ಮಾಯಿ

ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಜನರಿಲ್ಲ ಎಂದ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಅವರು, ಸಿದ್ಧರಾಮಯ್ಯ ವೇಷ ಮರೆಸಿಕೊಂಡು ಸಂಕಲ್ಪ ಯಾತ್ರೆಗೆ ಬರಲಿ. ಆಗ ಜನ ಸೇರಿದ್ದು ಅವರಿಗೆ ಗೊತ್ತಾಗುತ್ತದೆ. ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರ ಬಂದೇಬಿಟ್ಟಿತೆಂದು ಬಿಂಬಿಸುತ್ತಿದ್ದರು. ಸಂಕಲ್ಪ ಯಾತ್ರೆಯಲ್ಲಿ ಜನಸಂದಣಿ ಸೇರುವುದು ಸಹಿಲಾಗದೆ ಟೀಕೆ ಮಾಡುತ್ತಿದ್ದಾರೆ. ಅವರ ಭಟ್ಟಂಗಿಗಳು ಜನರಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಾರೆ. ಸಿದ್ಧರಾಮಯ್ಯ ಮುಸುಕು ಹಾಕಿಕೊಂಡು ಬಂದು ಕೂರಲಿ. ಕಾರ್ಯಕ್ರಮ ಆರಂಭಕ್ಕೂ ಮೊದಲಿನ ಖಾಲಿ ಕುರ್ಚಿಯ ಫೋಟೋ ಹಾಕುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರಬಾರದೆಂದು ಜನ ಸಂಕಲ್ಪ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next