Advertisement

ಕಾಂಗ್ರೆಸ್ ಅಂದರೆ ಗಿಮಿಕ್, ಗಿಮಿಕ್ ಅಂದರೆ ಕಾಂಗ್ರೆಸ್: ಶ್ರೀರಾಮುಲು ಟೀಕೆ

12:15 PM Sep 13, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಕಳೆದ 70 ವರ್ಷಗಳಿಂದ ನೋಡಿದ್ದೇವೆ. ಬರೀ ಗಿಮಿಕ್ ಮಾಡಿಕೊಂಡೇ ಬಂದಿದ್ದಾರೆ. ಕಾಂಗ್ರೆಸ್ ಅಂದರೆ ಗಿಮಿಕ್- ಗಿಮಿಕ್ ಅಂದರೆ ಕಾಂಗ್ರೆಸ್ ಎಂದು ಸಚಿವ ಬಿ.ಶ್ರೀರಾಮುಲು ಟೀಕಿಸಿದರು.

Advertisement

ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರ ಕಾಲದಲ್ಲೂ ಇಂಧನ ಬೆಲೆ ಹೆಚ್ಚಾಗಿತ್ತು.ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತದೆಯೋ?  ಡಿಸೇಲ್, ಪೆಟ್ರೋಲ್ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಾಗಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದಲ್ಲಿ ತಾಕತ್ ಇದ್ದರೆ ವ್ಯಾಟ್ ಕಡಿಮೆ ಮಾಡಿ ನೋಡಿ ಎಂದು ಕಾಂಗ್ರೆಸ್ ಗೆ ಸವಾಲೆಸೆದರು.

ಇದನ್ನೂ ಓದಿ:ಸಿದ್ದರಾಮಯ್ಯ ಆಕಸ್ಮಾತ್ ಗೆದ್ದರೂ ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ: ಯಡಿಯೂರಪ್ಪ

ಮೋದಿ, ಬೊಮ್ಮಾಯಿ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ ಇದನ್ನು ಗಮನಿಸಿ.  ಅಲ್ಲಿ ಕಡಿಮೆ ಮಾಡಿ ಇಲ್ಲಿ ಎತ್ತಿನ ಗಾಡಿ, ಸೈಕಲ್ ನಲ್ಲಿ ಬನ್ನಿ ಎಂದು ರಾಮುಲು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next