Advertisement

ಪಠ್ಯಕ್ರಮದಲ್ಲಿ ಬಸವಣ್ಣನಿಗೆ ಅವಮಾನ ಮಾಡಿಲ್ಲ: ಸಚಿವ ಬಿ.ಸಿ.ನಾಗೇಶ್‌

11:47 PM Jun 14, 2022 | Team Udayavani |

ದಾವಣಗೆರೆ: ಪಠ್ಯಕ್ರಮದಲ್ಲಿ ಬಸವಣ್ಣನವರಿಗೆ ಯಾವುದೇ ಅವಮಾನ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ಸಮಿತಿ ಶಿಫಾರಸು ಮಾಡಿರುವುದೇ ಈಗಲೂ ಇದೆ. ಮೊದಲು ಬಸವಣ್ಣ ಜನಿವಾರ ಕಿತ್ತು ಹಾಕಿ ಹೋದರು ಎಂದಿತ್ತು. ಈಗ ಉಪನಯನದ ಅನಂತರ ಹೋದರು ಎಂದಾಗಿದೆ.

ಆದರೆ ಬಸವಣ್ಣನವರಿಗೆ ಯಾವುದೇ ರೀತಿಯ ಅವಮಾನ ಆಗಿಲ್ಲ. ನಾಲ್ಕು ವರ್ಷಗಳ ಕಾಲ ಇಲ್ಲದ ಗೊಂದಲ ಈಗೇಕೆ? ಈಗಾಗಲೇ ಶೇ. 75ರಷ್ಟು ಪಠ್ಯಪುಸ್ತಕ ವಿತರಣೆ ಆಗಿದೆ. ಬ್ರಿಟಿಷರು ದೇಶಕ್ಕೆ ಬರುವ ಮುನ್ನವೂ ದೇಶದಲ್ಲಿ ಜ್ಞಾನಾರ್ಜನೆ ನಡೆಯುತ್ತಿತ್ತು. ಈಗ ನಾವು ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಜೆಎನ್‌ಯು, ಭಾರತವನ್ನು ತುಕ್ಡೇತುಕ್ಡೇ ಮಾಡುವ ಗ್ಯಾಂಗ್‌ ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಹಿಂದೆ ಕೆಲಸ ಮಾಡಿತ್ತು. ಈಗಲೂ ಹಿಂದೂ ಸಮಾಜ ಒಡೆಯುವ, ಭಾರತವನ್ನು ಇಬ್ಭಾಗ ಮಾಡುವ ಕೆಲಸ ಮಾಡುತ್ತಿದೆ. ಆ ಗ್ಯಾಂಗ್‌ ಏನೇ ಮಾಡಿದರೂ ಯಶಸ್ವಿಯಾಗಲ್ಲ. ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಹಿಂದೆ ಜೆಎನ್‌ಯು ಗ್ಯಾಂಗ್‌ ಇದೆ ಎಂದು ನಾವು ಹೇಳುತ್ತಲೇ ಬರುತ್ತಿದ್ದೆವು. ಈಗ ಅದು ಸಾಬೀತಾಗಿದೆ ಎನ್ನುವುದಕ್ಕೆ ಜೆಎನ್‌ಯು ಪ್ರೊಫೆಸರ್‌ ಒಬ್ಬರು ಪತ್ರ ಬರೆದಿರುವುದೇ ಸಾಕ್ಷಿ. ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಪತ್ರ ಬರೆಯುವುದಕ್ಕೆ ಅವರು ಏನು ಓದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next