Advertisement

ಗವಿಮಠ ಕೋವಿಡ್ ಆಸ್ಪತ್ರೆಗೆ ಸಚಿವ ಬಿ ಸಿ ಪಾಟೀಲ ಭೇಟಿ

01:10 PM May 15, 2021 | Team Udayavani |

ಕೊಪ್ಪಳ: ಕೊಪ್ಪಳದ ಶ್ರೀ ಗವಿಮಠ ಆರಂಭಿಸಿದ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕೊಪ್ಪಳದಲ್ಲಿ ದಿನೇ ದಿನೇ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,  ಸೋಂಕಿತರ ಆರೈಕೆಗಾಗಿ  ಗವಿಮಠವು ಜಿಲ್ಲಾಡಳಿತದ ಸಹಯೋಗದಲ್ಲಿ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಆರಂಭ ಮಾಡಿದೆ. ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಗವಿ ಮಠಕ್ಕೆ ಭೇಟಿ ನೀಡಿ ಸೋಂಕಿತರ ಆರೈಕೆಗೆ ಶ್ರೀಮಠವು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ

ಗವಿಮಠವು 100 ಆಕ್ಸಿಜನ್ ಬೆಡ್ ನ ಕೋವಿಡ್ ಆಸ್ಪತ್ರೆಯನ್ನ ಆರಂಭ ಮಾಡಿತು. ಶನಿವಾರದಂದು 31 ಸೋಂಕಿತರಿಗೆ ಗವಿಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸ್ಥಿತಿಗತಿ ಕುರಿತು ಸಚಿವ ಪಾಟೀಲ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರಿಗೆ ಡಿಸಿ ವಿಕಾಸ್ ಕಿಶೋರ್ ಅವರು ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಜೊತೆ ಕೆಲವು ಗಂಟೆ ಸಮಾಲೋಚನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next