Advertisement

ಎಚ್‍ಡಿಕೆ ಸತ್ಯ ಹರಿಶ್ಚಂದ್ರನ ಎರಡನೇ ಕುಡಿ : ಬಿ.ಸಿ. ಪಾಟೀಲ ವ್ಯಂಗ್ಯ     

01:16 PM Aug 25, 2021 | Team Udayavani |

ರಟ್ಟೀಹಳ್ಳಿ: ಪ್ರಾಮಾಣಿಕತೆಗೆ ಹೆಸರಾದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸತ್ಯ ಹರಿಶ್ಚಂದ್ರನ ಎರಡನೇ ಕುಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ವ್ಯಂಗ್ಯವಾಡಿದರು.

Advertisement

ಮೈದುಂಬಿದ ಮದಗದ ಕೆರೆಗೆ ಬಾಗಿನ ಅರ್ಪಿಸಿ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರಿಂದ ತಾಲೂಕಿನ ಅಭಿವೃದ್ಧಿ ಕಂಡಿದೆ ಎಂಬ ಮಾತು ಸತ್ಯಕ್ಕೆ ದೂರವಾಗಿದೆ. ಈ ಹಿಂದೆ ಅವರ ತಂದೆಯವರ ಕಾಲದಲ್ಲಿ ನಾನು ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಜನರಿಗೋಸ್ಕರ ಅನುದಾನ ತಂದಿರುವುದು ನಿಜ. ಆದರೆ ಅದು ನನ್ನ ತಾಲೂಕಿನ ಜನರ ಅಭಿಲಾಷೆ. ಅದನ್ನು ಅಂದು ತಕ್ಕಮಟ್ಟಿಗೆ ಈಡೇರಿಸಿದ್ದು ಇಂದಿಗೂ ದೇವೇಗೌಡರು ಕೊಟ್ಟ ಅನುದಾನದಲ್ಲಿಯೇ ತಾಲೂಕಿನ ಅಭಿವೃದ್ಧಿಯಾಗುತ್ತಿದೆ ಎಂಬುದು ಭ್ರಮೆಯ ಮಾತೆಂದು ಲೇವಡಿ ಮಾಡಿದರು.

ತಂದೆಯವರು ನೀಡಿದ ಅನುದಾನದಿಂದ ಇಂದಿಗೂ ಅಭಿವೃದ್ಧಿಯಾಗುತ್ತಿದೆ ಎಂದು ಜನರ ದಿಕ್ಕು ತಪ್ಪಿಸುತ್ತಿರುವುದು ವಿಪರ್ಯಾಸ. ಅಧಿಕಾರ ಎಂಬುದು ಶಾಶ್ವತವಲ್ಲ. ನಾವು ಮಾಡಿದ ಕೆಲಸ ಶಾಶ್ವತ. ಕುಮಾರಸ್ವಾಮಿ ಅಧಿಕಾರ ಶಾಶ್ವತ ಎಂದುಕೊಂಡು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿಯನ್ನು ಎರಡೇ ಜಿಲ್ಲೆಗೆ ಸೀಮಿತವಾಗಿರಿಸಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ನಾನು ತಾಲೂಕಿನ ಜನರ ಅಭಿವೃದ್ಧಿಗಾಗಿ ಹಗಲು-ರಾತ್ರಿ ಶ್ರಮಿಸಿ ಜನರ ಪ್ರೀತಿ ಗಳಿಸಿದ್ದರಿಂದ ಹಲವು ಬಾರಿ ಶಾಸಕನಾಗಿ ಆಯ್ಕೆಯಾಗಲು ಕಾರಣವಾಗಿದೆ ಎಂದರು.

ಕುಮಾರಸ್ವಾಮಿ ಅವರು ಅಧಿಕಾರವಿದ್ದಾಗ ದುರಹಂಕಾರ, ಸ್ವೇಚ್ಛಾಚಾರದಿಂದ ತೆಗೆದುಕೊಂಡ ನಿರ್ಧಾರದಿಂದಾಗಿಯೇ ಸಿಎಂ ಸ್ಥಾನ ಹೋಗಿದೆ. ಆ ಸ್ಥಾನದಿಂದ ಕೆಳಗಿಳಿದ ಮೇಲೆ ನೀರಿನಿಂದ ಹೊರ ಬಂದ ಮೀನಿನಂತೆ ಒದ್ದಾಡಿ ದುರಂಹಕಾರ, ಅಸಹಾಯಕತೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದರು. ಜನತೆ ಸಿನಿಮಾ ನಟರನ್ನು ನಟರಾಗಿ ನೋಡದೇ ದೇವರಂತೆ ಕಾಣುತ್ತಾರೆ. ನಾವು ಗಾಜಿನ ಮನೆಯಲ್ಲಿದ್ದೇವೆ ಎಂಬುದನ್ನು ಮರೆಯಬಾರದು. ಒಳ್ಳೆಯ ನಡತೆ ಮೈಗೂಡಿಸಿಕೊಳ್ಳಬೇಕೆಂದು ಸಿನಿಮಾದವರಿಗೆ ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next