Advertisement
ಮೂಡುಬಿದಿರೆ ಹೊರವಲಯದ ಬನ್ನಡ್ಕದಲ್ಲಿ ಸ್ಥಾಪನೆಯಾಗಿರುವ ಮಂಗಳೂರು ವಿ.ವಿ.ಯ 6ನೇ ಘಟಕ ಕಾಲೇಜನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇ-ಗವರ್ನೆನ್ಸ್, ಯೂನಿಫೈಡ್ ಯೂನಿ ವರ್ಸಿಟಿ ಕಾಲೇಜ್ ಮ್ಯಾನೇಜೆ¾ಂಟ್, ಇ-ಆಫೀಸ್, ಸೇವಾ ಸಿಂಧು ಮುಂತಾದ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತೋರಲಾಗುತ್ತಿದೆ ಎಂದರು.
ಶಾಸಕ ಉಮಾನಾಥ್ ಕೋಟ್ಯಾನ್ ಘಟಕ ಕಾಲೇಜಿನ ವೆಬ್‌ಸೈಟ್ ಅನಾ ವರಣಗೊಳಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಪ್ರಾರಂಭವಾದ ಕಾಲೇಜು ತರಗತಿಗಳಲ್ಲಿ ಈ ವರ್ಷ 100ರಷ್ಟು ದಾಖಲಾತಿ ಆಗಿದೆ. ಸುಸಜ್ಜಿತ ಕಾಲೇಜು ಕ್ಯಾಂಪಸ್ ಕಟ್ಟಲು ಐದು ಎಕ್ರೆ ಜಾಗವನ್ನು ವಿ.ವಿ.ಗೆ ಹಸ್ತಾಂತರಿಸ ಲಾಗುವುದು ಎಂದರು. ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಪ್ರದೇಶಕ್ಕೆ ಕಾಲೇಜು ಒದಗಿಸಿಕೊಡಲು ಶಾಸಕರು ಅವಿರತ ಶ್ರಮವಹಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದರ ಜತೆಗೆ ಸಬ್ ಕಾ ಪ್ರಯಾಸ್ ಕೂಡ ಅಗತ್ಯ ಎಂದರು.
Related Articles
Advertisement
ಕುಲಸಚಿವ ಪ್ರೊ| ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿದರು. ಆಶಾ ಶ್ಯಾಲೆಟ್ ಡಿ’ಸೋಜಾ ಮತ್ತು ಸುಲೋಚನಾ ಪಚ್ಚನಡ್ಕ ನಿರೂಪಿಸಿ ದರು. ಘಟಕ ಕಾಲೇಜಿನ ಸಂಯೋಜಕ ಡಾ| ಗಣಪತಿ ಗೌಡ ವಂದಿಸಿದರು.