Advertisement
ಪಟ್ಟಣದ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿಂದು ನಡೆದ ಎಲ್ಲಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಇಲಾಖೆಯ ಅಭಿವೃದ್ಧಿ ಕಡೆ ಗಮನಿಸಬೇಕೆಂದರು.
Related Articles
Advertisement
ಶಾಲೆಗಳು ಶುರುವಾಗಿವೆ. ಈಗ ಪ್ರತಿ ಶಾಲಾವಾರು ವರದಿ ರಿಪೋರ್ಟ್ ತರಬೇಕು. ಬಿದ್ದು ಹೋಗುವ ಶಾಲೆಗಳ ಬಳಿ ಹೋಗಿ ನೈಜ ವರದಿಯನ್ನು ನೀಡಬೇಕು ಎಂದು ಗೃಹ ಸಚಿವರು ಹೇಳಿದರು.
ಕೋವಿಡ್ ಸಂಖ್ಯೆಯಲ್ಲಿ ತೀರ್ಥಹಳ್ಳಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ. ಹೀಗಾಗಿ ತಕ್ಷಣ ಎಲ್ಲಾ ಕಾರ್ಯಪ್ರವೃತ್ತರಾಗಬೇಕು.ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಚುರುಕಾಗಬೇಕು. ಮೊದಲು ಎಲ್ಲರನ್ನು ಟೆಸ್ಟ್ ಮಾಡಿಸಬೇಕು ಎಂದರು.
ಜನ ಮಾಸ್ಕ್ ಹಾಕುತ್ತಿಲ್ಲ, ಸಾಮಾಜಿಕ ಜಾಗೃತಿ ಮೂಡಿಸಬೇಕು. ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಬೇಕು ಎಂದರು.
ಈ ವೇಳೆ ಗ್ರಾಮ ಪಂಚಾಯತ್ ಪಿಡಿಒಗಳು ಮಾತನಾಡಿ, ಎಲ್ಲಾ ಕಡೆ ಲಸಿಕೆ ಕೊರತೆ ಇದೆ. ಜನರಿಗೆ ಸಮಾಧಾನ ಮಾಡುವುದೇ ದೊಡ್ಡ ಸಮಸ್ಯೆ ಆಗಿದೆ. ತಕ್ಷಣ ಲಸಿಕೆ ವ್ಯವಸ್ಥೆ ಆಗಬೇಕು ಎಂದರು. ಸಚಿವರು ತಕ್ಷಣ ಮಾತನಾಡಿ ಸರಕಾರದ ಗಮನ ಸೆಳೆದು ಹೆಚ್ಚಿನ ಲಸಿಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
94 ಸಿ ಅರ್ಜಿ ಹಾಕಲು ಇನ್ನು ಸಮಯ ಇದೆ. ಅಧಿಕಾರಿಗಳು ಜನತೆಗೆ ಮಾಹಿತಿ ನೀಡಬೇಕು. ಜನರಿಗೆ ಯಾವ ಸೌಲಭ್ಯ ಬಂದರೂ ತಲುಪಿಸಿ. ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಎಚ್ಚರ ಎಂದರು.
ಜವಾಬ್ದಾರಿ ನೀಡಿರುವ ಗೃಹ ಇಲಾಖೆಯಲ್ಲಿ ಬದಲಾವಣೆಯ ಛಾಪು ಮೂಡಿಸಿ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡುವ ವಿಶ್ವಾಸ ಇದೆ. ಒಂದು ವ್ಯವಸ್ಥೆ ಸಕ್ರಿಯವಾಗಿ ಸಶಕ್ತವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳ ಮಹತ್ತರ ಜವಾಬ್ದಾರಿ ಇರುತ್ತದೆ. ಸಾರ್ವಜನಿಕರ ಸಮಸ್ಯೆಗಳಿಗೆ ಇಲಾಖೆಯ ಮಟ್ಟದಲ್ಲಿ ಪರಿಹರಿಸಿ ಬಗೆಹರಿಯದಿದ್ದರೆ ಅವರಿಗೆ ಅಗತ್ಯ ತಿಳುವಳಿಕೆ ಕಾನೂನಿನ ಅರಿವು ಮಾಹಿತಿ ನೀಡಿ ಎಂದರು.
ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಕೃಷಿ ಭೂಮಿ ಜಮೀನುಗಳು, ,ಮನೆಗಳ ಹಾನಿ,ಸಂಪರ್ಕ ರಸ್ತೆ ಸೇತುವೆ ಕುರಿತಾಗ ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿನ ಅಂಕಿ ಅಂಶ ಪಡೆದ ಸಚಿವರು, ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸಂಬಂಧಪಟ್ಟ ಆಯಾ ಅಧಿಕಾರಿಗಳಿಗೆ ಸೂಚಿಸಿದರು.,
ಅಲ್ಲದೆ ತಾಲ್ಲೂಕಿನಲ್ಲಿ ಕಟ್ಟಡ ಕಟ್ಟುವ ಬಡವರಿಗೆ ಸರ್ಕಾರದ ನೂತನ ಯೋಜನೆಯ ಮರಳು ವಿತರಣೆ
ಬಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಾನು ಗೃಹ ಇಲಾಖೆಯಲ್ಲಿ ಹೊಸ ಬದಲಾವಣೆಯ ಛಾಪನ್ನು ಮೂಡಿಸಿ, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವ ಹೊಣೆಯನ್ನು ಹೊತ್ತಿದ್ದೇನೆ. ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಕೆಲಸ ಮಾಡುತ್ತೇನೆ ನಾನು ಸರಳವಾಗಿ ಸದಾ ಕಾಲಕ್ಕೂ ಸಾರ್ವಜನಿಕರ ಜೊತೆ ಹೊಂದಿಕೊಂಡು ಇರುವವನು. ಜನ ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಬರುತ್ತಾರೆ.
ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ,ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಶ್ರೀಪಾದ್,ತಾಲ್ಲೂಕು ಪಂಚಾಯಿತಿ ಸಿಇಒ ಆಶಾಲತಾ,ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.