ಕುಷ್ಟಗಿ: ವೇದಿಕೆ ಮೇಲಿನಿಂದ ಹೇಳುವ ಸಿದ್ದಾಂತ, ಘೋಷಣೆಯಿಂದ ಸರ್ಕಾರಗಳು ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಪ್ರವಾಸೋಧ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಕುಷ್ಟಗಿ ತಾಲೂಕಿನ ತಾವರಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾವರಗೇರಾ ಪಟ್ಟಣದ ಮಹಾತ್ವಾಕಾಂಕ್ಷೆಯ ಪಟ್ಟಣದ 88.16 ಕೋಟಿ ರೂ. ಯೋಜನಾ ವೆಚ್ಚದಲ್ಲಿ ತುರುವಿಹಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಪಕ್ಷದ ಸರ್ಕಾರಗಳು ಬಂದರೂ ಜನರಿಗೆ ಕೊಡುವೆ ಯೋಜನೆಗಳಿಂದ ಜನರು ಗುರುತಿಸಿ ಅಂತಹ ಪಕ್ಷಗಳು ಸರ್ಕಾರ ರಚನೆಗೆ ಮತದಾರರ ಶಕ್ತಿಯಿಂದ ಸಾಧ್ಯವಾಗುತ್ತಿದೆ. ಈಗಿನ ಪೀಳಿಗೆ ಜಾಗೃತರಾಗಿದ್ದು, ಈ ಹಿಂದೆ ಇರುವ ಮತದಾರರು ಈಗ ಇಲ್ಲ. ವೇದಿಕೆಗೆ ಬಂದು ಆಶ್ವಾಸನೆ ಕೊಟ್ಟು ಘೋಷಣೆ ಕೂಗಿ, ಜನರನ್ನು ಕರೆ ತಂದು ದೊಡ್ಡ ಕಾರ್ಯಕ್ರಮ ಮಾಡಿದರೆ ಗೆಲ್ಲುವ ಆಲೋಚನೆ ಮಾಡಿದರೆ ಅದು ಮೂರ್ಖತನವಾದೀತು ಎಂದರು. ಜನರಿಗೆ ಚೆನ್ನಾಗಿ ಗೊತ್ತಿದ್ದು ಯಾರಿಗೆ ಮತದಾನ ಮಾಡಬೇಕೆಂಬುದು ಗೊತ್ತಿದೆ ರಾಜ್ಯ, ರಾಷ್ಟ್ರ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ನಾವು ಹೇಳಿಕೊಡಬೇಕಿಲ್ಲ ಜನರೇ ಮಾದ್ಯಮಗಳ ಮೂಲಕ ಎಲ್ಲವನ್ನು ತಿಳಿದುಕೊಳ್ಳುತ್ತಿದ್ದಾರೆ ಎಂದರು.
ತಾವರಗೇರಾ ಪಟ್ಟಣಕ್ಕೆ ಈ ಯೋಜನೆ ಈ ಹಿಂದೆನೇ ಆಗಸಿಕ್ಕಂತಾಗುತ್ತದೆ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಚಾಲನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಯಾರು ನಡೆಸಿದರು? ಏನು? ಅನ್ನೋದು ಮುಖ್ಯ ಅಲ್ಲ ಬುಲೆಟ್ ದಿಗಿಂದಾ.. ಲೇದಾ.. ಅನ್ನೋದೇ ಮುಖ್ಯ. ಯಾರೂ ಮಾಡಿದ್ದಾರೆ ಅನ್ನೋದೇ ಮುಖ್ಯವಾಗಿರುತ್ತದೆ. ನೆನೆಗುದಿಗೆ ಬಿದ್ದ ಯೋಜನೆಯನ್ನು ಶಾಸಕ ರಾಜುಗೌಡರೇ ಚಾಲನೆ ನೀಡಿದ್ದಾರೆಂದು ನಾನು ಹೇಳುವೆ.
ಎಂದೋ ಘೋಷಣೆ ಮಾಡಿ ಮಾಡಿರೋದು ಅಲ್ಲ. ಮಾಡಿರುವ ಯೋಜನೆ ಜನರಿಗೆ ತಲುಪಿಸಿರಬೇಕು ಈ ಚುನಾವಣೆಯಲ್ಲಿ ಚಾಲನೆ ನೀಡಿ ಬರುವ ಚುನಾವಣೆಯಲ್ಲಿ ಪೂರ್ತಿ ಮಾಡುತ್ತೇನೆ ಎಂದರೆ ಆ ಯೋಜನೆಗೆ ಮಾನ್ಯತೆ ಸಿಗುವುದಿಲ್ಲ. ಎಲ್ಲಿ ಘೋಷಣೆ ಮಾಡಲಾಗಿರುತ್ತದೆಯೋ ಅದೇ ವೇದಿಕೆಯಲ್ಲಿ ಉದ್ಘಾಟನೆಯಾಗಿರಬೇಕು ಅಂದಾಗ ಮಾತ್ರ ಜನರಿಗೆ ಯೋಜನೆ ಲಾಭ ಸಿಕ್ಕಂತಾಗುತ್ತದೆ ಎಂದರು.