Advertisement

ಕೋವಿಡ್‌ 2ನೇ ಅಲೆ ಆವರಿಸದಂತೆ ಕ್ರಮ ಕೈಗೊಳ್ಳಿ

05:31 PM Feb 24, 2021 | Team Udayavani |

ಬಳ್ಳಾರಿ: ನೆರೆಯ ಕೇರಳ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ಕಡೆ ಕೋವಿಡ್‌ 2ನೇ ಅಲೆ ಭೀತಿ ಮತ್ತೇ  ಸ್ಫೋಟಗೊಂಡಿದ್ದು ಜಿಲ್ಲೆಗೆ ಆವರಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್‌ ಸೂಚನೆ ನೀಡಿದ್ದಾರೆ.

Advertisement

ನಗರದ ಜಿಪಂ ನಜೀರ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಪಂ ತ್ತೈಮಾಸಿಕಕೆಡಿಪಿ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ಎರಡನೇ ಅಲೆ ಜಿಲ್ಲೆಗೆ ಆವರಿಸದಂತೆ ತಡೆಗಟ್ಟಲು ಕೂಡಲೇ ಕೊರೊನಾ ಸೊಂಕು ತಡೆಗೆ ಸರ್ಕಾರ ಹೊರಡಿಸಿದ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇದನ್ನು ಎದುರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತಾ ಕ್ರಮಗಳನ್ನು ಆರೋಗ್ಯ  ಇಲಾಖೆ ಅಧಿ ಕಾರಿಗಳು ಮತ್ತು ಜಿಲ್ಲಾಡಳಿತ ಕೈಗೆತ್ತಿಕೊಳ್ಳಬೇಕು. ಹೋಟೆಲ್‌, ರೆಸ್ಟೋರೆಂಟ್‌, ದಾಬಾಗಳ ಮಾಲೀಕರೊಂದಿಗೆ ಸಭೆ ನಡೆಸಿ ಆದೇಶಗಳನ್ನು ಪಾಲಿಸಲು ತಿಳಿಸಬೇಕು. 15 ದಿನಗಳಿಗೊಮ್ಮೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದು, 2ನೇ ಅಲೆ ಎದುರಿಸಲು ಅವರು ಸಜ್ಜಾಗಿದ್ದಾರೆ. ಕೋವಿಡ್‌ ಅಲೆ ಸೋಂಕು ಹೆಚ್ಚಳ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸಿದ್ಧತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಕೋವಿಡ್‌ 2ನೇ ಅಲೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಿದ್ಧತಾ ಕ್ರಮಕೈಗೊಳ್ಳಲಾಗುವುದು ಎಂದರು.

100 ದಿನಗಳ ಕ್ರಿಯಾಯೋಜನೆ: ಜಿಲ್ಲೆಯಲ್ಲಿ ನಾನಾ ಕಾರಣಗಳಿಂದ ಶಾಲೆ ತೊರೆದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಕೈಗೆತ್ತಿಕೊಳ್ಳಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಜಿಪಂ ಸಿಇಒ ಕೆ.ಆರ್‌. ನಂದಿನಿ ಅವರು ಸಭೆಗೆ ವಿವರಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ 100 ದಿನಗಳ ಕ್ರಿಯಾಯೋಜನೆ ರೂಪಿಸಲಾಗಿದೆ. ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಲಾಗಿದ್ದು, 10 ದಿನಗಳಲ್ಲಿಯೇ ಶೇ. 81ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ನಿನ್ನೆಯಿಂದ 6ರಿಂದ 8ನೇ ತರಗತಿ ಶಾಲೆಗಳು ಆರಂಭವಾಗಿದ್ದು, ಎಸ್‌ಒಪಿ  ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಡಿಡಿಪಿಐ ರಾಮಪ್ಪ ಅವರು ಸಭೆಗೆ ತಿಳಿಸಿದರು.

Advertisement

ಅಧಿಕಾರಿಗಳು ಮೂಕಪ್ರೇಕ್ಷರಾಗದಿರಿ: ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಸಚಿವ ಆನಂದ್‌ಸಿಂಗ್‌, ಸಭೆಗೆ ಬರುವ ವಿವಿಧ ತಾಲೂಕು, ಜಿಲ್ಲಾಮಟ್ಟದ ಅಧಿ ಕಾರಿಗಳು ಸಭೆಗೆ ಬಂದು ಮೂಕಪ್ರೇಕ್ಷರಾಗಿ ಕೂತು ಊಟ ಮಾಡಿ ವಾಪಸ್ಸು ಹೋಗುವುದು ಆಗಬಾರದು. ಅ ಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಜನರ ಸಮಸ್ಯೆಗಳನ್ನು ಸಭೆಯಲ್ಲಿ ನಮ್ಮ ಗಮನಕ್ಕೆ ತಂದಾಗ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದವರು ಅಧಿ ಕಾರಿಗಳಿಗೆ ತಾಕೀತು ಮಾಡಿದರು.

18,872 ಬಚ್ಚಲು ಗುಂಡಿ ನಿರ್ಮಾಣ: ಜಿಲ್ಲೆಯ 11 ತಾಲೂಕಿನ 22 ಗ್ರಾಪಂಗಳ 86 ಗ್ರಾಮಗಳಲ್ಲಿ ದ್ರವತ್ಯಾಜ್ಯ ಮುಕ್ತ ಮಾಡಲು ಉದ್ದೇಶದಿಂದ ಬಚ್ಚಲು ಗುಂಡಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಈಗಾಗಲೇ 18872 ಬಚ್ಚಲು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 12 ಗ್ರಾಮಗಳಲ್ಲಿ ಶೇ. 100ರಷ್ಟು ನಿರ್ಮಾಣ ಮಾಡಲಾಗಿದೆ.  ಮಾರ್ಚ್‌ ಅಂತ್ಯದೊಳಗೆ 86 ಗ್ರಾಮಗಳನ್ನು ಶೇ. 100ರಷ್ಟು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್‌.ನಂದಿನಿ ಅವರು ವಿವರಿಸಿದರು.

ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಸುದೀರ್ಘ‌ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಎನ್‌.ವೈ. ಗೋಪಾಲಕೃಷ್ಣ, ಈ. ತುಕಾರಾಂ, ಎಂ.ಎಸ್‌. ಸೋಮಲಿಂಗಪ್ಪ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಪಾಲಿಕೆ ಆಯುಕ್ತೆ ಪ್ರೀತಿ ಗೆಹೊÉàಟ್‌,ಪ್ರೊಬೇಷನರಿ ಐಎಎಸ್‌ ಅ ಧಿಕಾರಿ ರಾಹುಲ್‌ ಸಂಕನೂರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next