Advertisement

ಗಂಗಾವತಿ : ಕುಮ್ಮಟ ದುರ್ಗದ ಸುತ್ತ ಗಣಿಗಾರಿಕೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ

07:38 PM Jul 04, 2022 | Team Udayavani |

ಗಂಗಾವತಿ : ಗಂಡುಗಲಿ ಕುಮಾರರಾಮ ನಡೆದಾಡಿದ ಇತಿಹಾಸ ಪ್ರಸಿದ್ಧ ಕುಮ್ಮಟದುರ್ಗ ಸುತ್ತಮುತ್ತಲು ಕಲ್ಲುಗಣಿಗಾರಿಕೆ ಸೇರಿ ಯಾವುದೇ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸದಂತೆ ರಾಜ್ಯ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ ಆಯುಕ್ತೆ ಪೂರ್ಣಿಮಾ ಬಿ.ಆರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾ ಟಾಸ್ಕ್ಪೋರ್ಸ್ ಕಮೀಟಿ ಸಭೆಯಲ್ಲಿ ಕುಮ್ಮಟದುರ್ಗ ಪ್ರದೇಶದ ಸರ್ವೇ 51 ರಲ್ಲಿ ಖಾಸಗಿ ವ್ಯಕ್ತಿಗೆ ಕಲ್ಲುಗಣಿಗಾರಿಕೆ ನಡೆಸಲು ಪರವಾನಿಗೆ ಕೊಡುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸುವಂತೆ ಸೂಚನೆ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಸರ್ವೇ ನಂಬರ್ 51 ರ ಸುತ್ತಲಿನ ರೈತರು ಜಿಲ್ಲಾಡಳಿತ ಮತ್ತು ರಾಜ್ಯ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಕುಮ್ಮಟದುರ್ಗದ ಸುತ್ತಲು ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಬಾರದು. ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದಲ್ಲಿ ಕೋಟೆ ಕೊತ್ತಲ, ಜಟ್ಟಂಗಿ ರಾಮೇಶ್ವರ ದೇಗುಲ ,ಕಲ್ಲಿನ ಕೆರೆ, ಕುದುರೆಕಾಲು ಕಲ್ಲುಗಳು ಸೇರಿ ನೂರಾರು ಮಾಸ್ತಿಗಲ್ಲು, ವೀರಗಲ್ಲ ಮತ್ತು ಶಿಲಾಶಾಸನಗಳಿದ್ದು ಇಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ಕಲ್ಪಿಸಿದರೆ ಪುರಾತನ ಸ್ಮಾರಕ ಕೋಟೆಗಳು ನಾಶವಾಗುತ್ತವೆ. ಜತೆಗೆ ಫಲವತ್ತಾದ ಕೃಷಿ ಭೂಮಿ ಧೂಳುಮಯವಾಗಿ ಇಡೀ ಪರಿಸರ ನಾಶವಾಗುತ್ತದೆ. ಈ ಪ್ರದೆಶದಲ್ಲಿ ನೂರಾರು ನವಿಲುಗಳಿದ್ದು ಕಲ್ಲುಗಣಿಗಾರಿಕೆಯಿಂದ ಇಡೀ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಗಳು ಜೀವಿ ಸಂಕುಲಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ : ಅಧಿಕಾರಿಗಳ ಅಂಧಾ ದರ್ಬಾರ್: ಪಾಂಡವಪುರ ತಾಲೂಕು ಕಚೇರಿ ದುರ್ಬಳಕೆ ಆರೋಪ

ರಾಜ್ಯ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸದಂತೆ ಸೂಚನೆ ನೀಡಿದ್ದಾರೆ.

Advertisement

ಇತಿಹಾಸ ಪ್ರಸಿದ್ಧ ಕುಮ್ಮಟದುರ್ಗದ ಬೆಟ್ಟಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಹೊಸಪೇಟೆ ಮೂಲದ ವ್ಯಕ್ತಿಯೊರ್ವ ಜಿಲ್ಲಾ ಟಾಸ್ಕ್ಪೋರ್ಸ್ ಕಮೀಟಿಗೆ ಮನವಿ ಸಲ್ಲಿಸಿದ ಪರಿಣಾಮ ಕಮೀಟಿ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿ ಗಣಿಗಾರಿಕೆ ನಡೆಸುವ ಕುರಿತು ಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಕೆಲವರು ಗಣಿಗಾರಿಕೆ ಪರವಾಗಿದ್ದರು.

ಸ್ಮಾರಕಗಳು,ಕೃಷಿಭೂಮಿ ಸಂರಕ್ಷಣೆ ಮತ್ತು ಜೀವಿ ಸಂಕುಲಗಳ ಸಂರಕ್ಷಣೆಯ ದೃಷ್ಠಿಯಿಂದ ಕುಮ್ಮಟದುರ್ಗದ ಸುತ್ತಲು ನಿರ್ದಿಷ್ಠ ಪ್ರದೇಶದಲ್ಲಿ ಗಣಿಗಾರಿಕೆ ಅವಕಾಶ ಕಲ್ಪಿಸದಂತೆ ಜಿಲ್ಲಾಡಳಿತ ಮತ್ತು ರಾಜ್ಯ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಸರಕಾರ ಸ್ಪಂದಿಸಿ ಕಲ್ಲುಗಣಿಗಾರಿಕೆ ಅವಕಾಶ ನೀಡದಂತೆ ಸೂಚಿಸಿದೆ.
– ವೆಂಕಟೇಶ ಜಬ್ಬಲಗುಡ್ಡದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next