Advertisement

1ನೇ ತರಗತಿ ಸೇರುವ ಮಕ್ಕಳ ಕನಿಷ್ಠ ವಯೋಮಿತಿ ನಿಗದಿ

06:05 AM May 24, 2018 | |

ಬೆಂಗಳೂರು: ಪ್ರಸಕ್ತ ಸಾಲಿಗೆ ಒಂದು ತರಗತಿ ಸೇರುವ ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Advertisement

2015-16 ಮತ್ತು 2016-17ನೇ ಸಾಲಿನಲ್ಲಿ ಎಲ್‌ಕೆಜಿಗೆ ಸೇರಿದ ಮಕ್ಕಳ ನಿಗದಿತ ವಯೋಮಿತಿ 3 ವರ್ಷ 10 ತಿಂಗಳು ಪೂರ್ಣಗೊಳಿಸದೇ ಸ್ವ ಇಚ್ಛೆಯಿಂದ ಶಾಲಾಡಳಿತ ಮಂಡಳಿಗೂ ಮಕ್ಕಳನ್ನು ದಾಖಲಾತಿ ಮಾಡಿಕೊಂಡಿದ್ದವು. ಈ ಕಾರಣಕ್ಕಾಗಿಯೇ 2017-18ನೇ ಸಾಲಿನಲ್ಲಿ 1ನೇ ತರಗತಿ ಸೇರುವ ಮಕ್ಕಳಿಗೆ 5 ವರ್ಷ 10 ತಿಂಗಳು ಪೂರೈಸದೇ ಇರುವ ಮಕ್ಕಳ ದಾಖಲಾತಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.

ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 20ರಂತೆ ಹಾಗೂ ಮಕ್ಕಳ ಹಕ್ಕು ಕಾಯ್ದೆ 2009 ಸೆಕ್ಷನ್‌ 12(1)ರ ಅಡಿಯಲ್ಲಿ 2018-19ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾಗುವ ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳಿಂದ ಗರಿಷ್ಠ 7 ವರ್ಷಗಳ ಮಿತಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next