Advertisement

ಸ್ಕಿಡ್ ಆಗಿ ಕಣಿವೆಗೆ ಉರುಳಿದ ಬಸ್: ಐವರು ಸಾವು, 15 ಮಂದಿಗೆ ಗಾಯ

10:13 AM Jan 21, 2023 | Team Udayavani |

ಶ್ರೀನಗರ: ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು ಮಹಿಳೆ ಸೇರಿ ಐವರು ಸಾವನ್ನಪ್ಪಿದ್ದು, 15 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಬಿಲಾವರ್ ನ ಧನು ಪರೋಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಹನವು ಕೌಗ್ ನಿಂದ ಧನು ಪರೋಲೆಗೆ ತೆರಳುತ್ತಿತ್ತು. ಈ ವೇಳೆ ಸ್ಕಿಡ್ ಆಗಿ ಕಣಿವೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಒಬ್ಬರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇದನ್ನೂ ಓದಿ:ಸಂತಾನಕ್ಕಾಗಿ ಸೊಸೆಗೆ ಸ್ಮಶಾನದಲ್ಲಿ ಎಲುಬಿನ ಪುಡಿ ತಿನ್ನಿಸಿದರು..; ಮಂತ್ರವಾದಿ ಸೇರಿ 7 ಜನರ ವಿರುದ್ದ ಎಫ್ಐಆರ್

ಮೃತರನ್ನು ಬಂಟು, ಹನ್ಸ್ ರಾಜ್, ಅಜೀತ್ ಸಿಂಗ್, ಅಮ್ರೂ ಮತ್ತು ಕಾಕು ರಾಮ್ ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ 15 ಮಂದಿ ಪ್ರಯಾಣಿಕರನ್ನು ಬಿಲಾವರ್ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next