ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರನ್ನುಕರೆದೊಯ್ಯಲು ಪ್ರವಾಸೋದ್ಯಮ ಇಲಾಖೆಯಿಂದ ಎರಡು ಮಿನಿಬಸ್ ಸಂಚಾರ ಆರಂಭಿಸಲಾಗಿದೆ.ನಂದಿಬೆಟ್ಟದ ಮೇಲ್ಭಾಗದಲ್ಲಿ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ 300 ಕಾರು, 500 ಬೈಕ್ ಪಾರ್ಕಿಗ್‌ಗೆ ಅಷ್ಟೇ ಅವಕಾಶ ನೀಡಿದೆ.
ಹೀಗಾಗಿ ಮೊದಲು ಬಂದವರಿಗೆ ಮಾತ್ರ ಅವಕಾಶವಿರುತ್ತೆ. ನಂತರ ಬರುವ ಪ್ರವಾಸಿಗರು ನಂದಿಬೆಟ್ಟದ ತಳಭಾಗದ ಚೆಕ್‌ಪೋಸ್ಟ್‌ನಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕಾಗುತ್ತದೆ.ವಾಹನ ದಟ್ಟಣೆಗೆ ಕಡಿವಾಣ: ಈ ಎರಡು ಮಿನಿ ಬಸ್(ಟಿಟಿವಾಹನ)ನಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬರಬಹುದಾಗಿದೆ.
ನಂದಿಬೆಟ್ಟದ ತಪ್ಪಲಿನ ಪೊಲೀಸ್ ಚೆಕ್‌ಪೋಸ್ಟ್‌ನಿಂದ ಬೆಟ್ಟದ ಮೇಲ್ಭಾಗದಮಯೂರ ಹೋಟೆಲ್ ಸರ್ಕಲ್‌ವರೆಗೂ ಪ್ರಯಾಣ ಮಾಡಬಹುದಾಗಿದೆ. ಪ್ರತಿ ಪ್ರಯಾಣಿಕರಿಗೆ 25 ರೂ. ದರ ನಿಗದಿಪಡಿಸಲಾಗಿದೆಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ವಾಹನ ದಟ್ಟಣೆ ಕಡಿಮೆಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರವಾಸೋದ್ಯಮಇಲಾಖೆ ಜಾರಿಗೆ ತಂದಿದೆ.
ಸೌಲಭ್ಯ ಒದಗಿಸಲು ಮುಂದಾದ ಸರ್ಕಾರ: ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಕರ್ನಾಟದಊಟಿಗೆ ಇತ್ತೀಚಿನ ದಿನಗಳಲ್ಲಿ ಪರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಂದಿಗಿರಿಧಾಮದಲ್ಲಿ ಪರಿಸರಕ್ಕೆ ಯಾವುದೇರೀತಿಯಲ್ಲಿ ಧಕ್ಕೆ ಆಗದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ, ಪರಿಸರಮತ್ತು ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದ್ದರು.
ಇದರ ಬೆನ್ನಲ್ಲೇ ಬಸ್ ಸಂಚಾರ ಆರಂಭಿಸಲಾಗಿದೆ.ಕೋವಿಡ್-19 ಮುನ್ನೆಚ್ಚರಿಕೆ ಅಂಗವಾಗಿ ಜಿಲ್ಲಾಡಳಿತ ವೀಕೆಂಡ್‌ಅಂದರೆ ಶುಕ್ರವಾರದಿಂದ ಸೋಮವಾರ ಬೆಳಗ್ಗೆ 6 ಗಂಟೆಯವರಿಗೆಪ್ರಸ್ತುತ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿಧಿ ಸಿ ಆದೇಶ ಹೊರಡಿಸಿದೆ. ಈ ಮಧ್ಯೆ ಪ್ರವಾಸಿಗರಿಗೆ ನಂದಿಗಿರಿಧಾಮದಲ್ಲಿ ಎಲ್ಲಾ ರೀತಿಯಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ರೋಪವೇ ಆದರೆ ಹೊಸ ಕಳೆ: ರಾಜಧಾನಿ ಬೆಂಗಳೂರು ಮತ್ತುದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪಇರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ವಿಶ್ವ ವಿಖ್ಯಾತಿಹೊಂದಿದೆ. ಇಲ್ಲಿ ಜಿಲ್ಲೆಯಲ್ಲಿ ಪರವಾಸಿಗರಲ್ಲದೆ ರಾಜ್ಯ-ಹೊರರಾಜ್ಯಹಾಗೂ ವಿದೇಶಗಳಿಂದ ಪ್ರವಾಸಿಗರು ಪ್ರಾಕೃತಿಕ ಸೌಂದರ್ಯವನ್ನುಕಣ್ತುಂಬಿಸಿಕೊಳ್ಳಲು ಬರುತ್ತಾರೆ. ಹೀಗಾಗಿ ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಖಾಸಗಿ ಸಹಭಾಗಿತ್ವದೊಂದಿಗೆ ನಂದಿಗಿರಿಧಾಮದಲ್ಲಿರೋಪ್‌ವೇ ನಿರ್ಮಿಸಲು ಮುಂದಾಗಿದೆ. ಒಟ್ಟಾರೆ ಹಂತವಾಗಿನಂದಿಗಿರಿಧಾಮದ ಅಭಿವೃದ್ಧಿಗೊಳಿಸಲು ಪ್ರವಾಸೋದ್ಯಮಇಲಾಖೆ ಪುಟ್ಟ ಹೆಜ್ಜೆಯಿಡುತ್ತಿದೆ.