Advertisement
ಅದೇಕೋ ಕೆಲವರು, ಇನ್ನೂ ನಮ್ಮ ಮಾತು ಆರಂಭವೇ ಆಗಿರುವುದಿಲ್ಲ.ಆಗಲೇ ತಮ್ಮ ಅಭಿಪ್ರಾಯ ಹೇಳ ತೊಡಗುತ್ತಾರೆ. ತೀರಾ ಇತ್ತೀಚೆಗೆ ಒಬ್ಬರನ್ನು ಭೇಟಿ ಆದಾಗ ಲೋಕಾರೂಢಿ ಮಾತು ಬಂದಾಗ ಹೂಡಿಕೆಯ ಬಗೆಗೆ ಮಾತು ಎತ್ತಬೇಕು ಎನ್ನುವಷ್ಟರಲ್ಲಿ ಅವರು-” ನನಗೆ ಇದೆಲ್ಲ ಅರ್ಥ ಆಗುವುದೇ ಇಲ್ಲ. ಇದರಲ್ಲಿ ಆಸಕ್ತಿ ಇಲ್ಲ. ನಾನು ಎಂದೂ ಇದರ ಬಗೆಗೆ ಮಾತನಾಡಲೇ ಇಲ್ಲ’ ಎಂದೆಲ್ಲ ಹೇಳಿ ಬಿಟ್ಟರು. ನನಗೋ ಕುತೂಹಲ ಆಗಿ ಯಾಕೆ ನೀವು ಇದುವರೆಗೂ ಒಬ್ಬರ ಹತ್ತಿರವೂ ಇದರ ಬಗೆಗೆ ಮಾತನಾಡಲಿಲ್ಲವಾ? ಎಂದು ಕೇಳಿದೆ. ಅದಕ್ಕವರು ನೀವು ಇಷ್ಟು ಕೇಳಿದ ಮೇಲೆ ಅನ್ನಿಸುತ್ತಿದೆ. ನನಗೆ ಅಂತಹ ಅವಕಾಶವೇ ಬರಲಿಲ್ಲ ಅಂದು ಮೌನವಾದರು. ಆಗ, ಸ್ವಲ್ಪ ಹಾಸ್ಯ ಬೆರೆಸಿದ ಆಪ್ತತೆಯಲ್ಲಿ ಹೇಳಿದೆ -ನೀವು ಇದಕ್ಕೆ ಅವಕಾಶವನ್ನೇ ಮಾಡಿ ಕೊಡಲಿಲ್ಲ. ಯಾರಾದರೂ “ಹೂಡಿಕೆ’ ಎಂಬ ಮಾತು ಹೇಳಿದ ತಕ್ಷಣವೇ ಮಧ್ಯೆಯೇ ಬಾಯಿ ಹಾಕಿ ಅದರಿಂದ ಏನುಪ್ರಯೋಗ? ಅದರಲ್ಲಿ ನನಗಂತೂ, ಆಸಕ್ತಿಯಿಲ್ಲ. ಅದರಿಂದ ಲಾಭ ಮಾಡಿಕೊಂಡವರನ್ನು ನಾನಂತೂ ನೋಡಲಿಲ್ಲ’ ಎಂಬಂಥ ಮಾತುಗಳನ್ನು ಹೇಳುತ್ತಿದ್ದಾರೆ. ಹೀಗಾದರೆ, ಉಳಿತಾಯದ ಬಗ್ಗೆ, ಹೂಡಿಕೆಯ ಬಗ್ಗೆ ನಿಮ್ಮೊಂದಿಗೆ ಮಾತಾಡಲು ಯಾರಿಗೆ ತಾನೆ ಇಷ್ಟವಿರುತ್ತೆ ಹೇಳಿ, ಅಂದೆ. ಅವರು ಮತ್ತೆ ಮಾತನಾಡಲಿಲ್ಲ.
Related Articles
Advertisement
ಕೇವಲ ಹಣಕಾಸಿನ ವಿಷಯಕ್ಕೆ ಮಾತ್ರ ಅಲ್ಲ. ಯಶಸ್ವಿ ಜೀವನ ನಮ್ಮದಾಗಬೇಕೆಂದರೆ, ನಮ್ಮ ಮೈಂಡ್ ಸೆಟ್ ನಲ್ಲಿಯೇ ಬದಲಾವಣೆ ಆಗಲೇ ಬೇಕಿದೆ. ಇಂದಿನ ನಿರಂತರ ಬದಲಾವಣೆಯ ಕಾಲದಲ್ಲಿ ಹೊಸ ಹೊಸ ವಿಷಯಗಳು, ಅವಕಾಶಗಳಿಗೆ ತೆರೆದುಕೊಳ್ಳಲೇ ಬೇಕಿದೆ. ನಾವು ಗ್ರೋಥ್ ಮೈಂಡ್ ಸೆಟ್ ಹೊಂದಿದಾಗಲೇ ಗ್ರೋಥ್ ಆಗೋದು. ಸಕಾರಾತ್ಮಕತೆಯೇ ಇದಕ್ಕೆ ಅಡಿಗಲ್ಲು.
– ಸುಧಾಶರ್ಮ ಚವತ್ತಿ