Advertisement

ಮನಸೆ ರಿಲ್ಯಾಕ್ಸ್‌ ಪ್ಲೀಸ್‌ ತಾಳು ಮನವೇ ತಾಳು…

02:29 PM Aug 11, 2020 | Suhan S |

ಮುರಾರಿಗೆ ಸದಾ ಊರು ಸುತ್ತುವ ಅಭ್ಯಾಸವಿತ್ತು. ಅವನಿಗಿದ್ದುದು ಚಿಕ್ಕ ಸಂಬಳದ ಕೆಲಸ. ಆ ಹಣದಲ್ಲೇ ಸ್ವಲ್ಪ ಉಳಿಸಿ ಟೂರ್‌ ಹೊರಟುಬಿಡುತ್ತಿದ್ದ. ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತೇ ಇದೆ. ನನಗೆ ಕೋಶ ಓದುವಷ್ಟು ಪುರುಸೊತ್ತು, ತಾಳ್ಮೆ ಇಲ್ಲ. ಆದರೆ ದೇಶ ಸುತ್ತಬ ಅನ್ನುತ್ತಿದ್ದ. “ಇದೇನಯ್ಯಾ, ವರ್ಷವಿಡೀ ಸುತ್ತುತ್ತಲೇ ಇರ್ತೀಯಲ್ಲ?’ ಎಂದು ಕೇಳಿದರೆ- ನನ್ನ ಕಾಲಲ್ಲಿ ಚಕ್ರ ಇದೆ. ನಾನಾದರೂ ಏನು ಮಾಡಲಿ ಹೇಳಿ… ಎಂದು ನಗುತ್ತಿದ್ದ. ಆದರೆ ಕೋವಿಡ್ ಬಂದದ್ದೇ ನೆಪ; ಮುರಾರಿಗೆ ಗೃಹಬಂಧನ ಆಗಿಹೋಯಿತು. ಅವನು ಕೆಲಸ ಮಾಡುತ್ತಿದ್ದ ಕಂಪನಿ, ಮನೆಯಿಂದಲೇ ಕೆಲಸ ಮಾಡಿ ಎಂದಿತು. ವಾರವಿಡೀ ಕೆಲಸ ಮಾಡಿದವನು, ಭಾನುವಾರ ಎಲ್ಲಾದರೂ ಸುತ್ತಾಡಲು ನಿರ್ಧರಿಸುತ್ತಿದ್ದ. ಆದರೆ ಲಾಕ್‌ಡೌನ್‌ನ ನಿಯಮಗಳು ಅವನ ಎಲ್ಲಾ ಲೆಕ್ಕಾಚಾರಗಳನ್ನೂ ಉಲ್ಟಾ ಮಾಡಿಬಿಡುತ್ತಿದ್ದವು.

Advertisement

ಪರಿಸ್ಥಿತಿ ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಎಂದುಕೊಂಡು ಮುರಾರಿ ಕಾದಿದ್ದೇ ಬಂತು. ಏನೂ ಪ್ರಯೋಜನ ಆಗಲಿಲ್ಲ. ವರ್ಷಗಳ ಕಾಲ ತನ್ನಷ್ಟಕ್ಕೆ ತಾನು ರಾಜ್ಯ- ದೇಶ ಸುತ್ತುತ್ತಿದ್ದ ಮುರಾರಿಗೆ, ಈಗ ಹೊತ್ತು ಕಳೆಯುವುದೇ ದೊಡ್ಡ ತಲೆನೋವಾಯಿತು. ಯಾರ ಜೊತೆಗಾದರೂ ಗಂಟೆಗಟ್ಟಲೆ ಮಾತಾ ಡೋಣ ಅಂದರೆ, ಕೊರೊನಾ ಅದಕ್ಕೂ ಕಲ್ಲು ಹಾಕಿತ್ತು. ಇದರ ಒಟ್ಟು ಪರಿಣಾಮ ಎಂಬಂತೆ- ಮುರಾರಿಗೆ ಡಿಪ್ರಶನ್‌ ಜೊತೆ ಯಾಯಿತು.ಅದುವರೆಗೂ ಗಲಗಲಗಲ ನಗುತ್ತಾ ಮಾತಾಡುತ್ತಿದ್ದವ, ಈಗ ಮೌನದ ಮೊರೆ ಹೋಗಿದ್ದ. ಆನಂತರದಲ್ಲಿ ಇದು ಇನ್ನಷ್ಟು ವಿಕೋಪಕ್ಕೆ ಹೋಗಿ, ಮಾನಸಿಕ ವೈದ್ಯರ ಬಳಿ ಚಿಕಿತ್ಸೆಗೂ ಹೋದ. ಡಿಪ್ರಶನ್‌ ಎಂಬುದು ಮನುಷ್ಯನನ್ನು ಯಾವ ಮಟ್ಟದಲ್ಲಿ ಹಣಿಯಬಲ್ಲದು ಎಂಬುದಕ್ಕೆ ಮುರಾರಿಯ ಬದುಕಿನ ಕಥೆ ಒಂದು ಉದಾಹರಣೆ, ಅಷ್ಟೇ. ಡಿಪ್ರಶನ್‌ಗೆ ಕಾರಣ ಹೀಗೆಯೇ ಇರಬೇಕು ಎಂದೇನೂ ಇಲ್ಲ.

ಏನೋ ಆಗಿಬಿಡ್ತು, ನನಗೆ ಏನೋ ಆಗಿಬಿಡ್ತದೆ ಎಂದು ಮನದೊಳಗೇ ಯೋಚಿಸುತ್ತಾ ಕೊರಗುವುದು ಡಿಪ್ರಶನ್‌ನ ಲಕ್ಷಣ. ಎಷ್ಟೋ ಸಂದರ್ಭದಲ್ಲಿ ಡಿಪ್ರಶನ್‌ನ ಕಾರಣಕ್ಕೇ ಕೆಲವರು ಜೀವ ಕಳೆದುಕೊಳ್ಳುವುದೂ ಉಂಟು. ಡಿಪ್ರಶನ್‌ ಇಲ್ಲದ ಮನುಷ್ಯನಿಲ್ಲ ನಿಜ. ಆದರೆ, ಅದು ನಮ್ಮನ್ನು ಕಂಟ್ರೋಲ್‌ ಮಾಡುವಂತೆ, ನಮ್ಮ ಮನಸನ್ನೇ ಚಲ್ಲಾಪಿಲ್ಲಿ ಮಾಡುವಂತೆ ಆಗಬಾರದು. ಡಿಪ್ರಶನ್‌ ಜೊತೆಯಾಗುತ್ತಿದೆ ಎಂಬ ಸೂಚನೆ ಪ್ರತಿ ಮನುಷ್ಯನಿಗೂ ಮೊದಲೇ ಸಿಕ್ಕಿಬಿಡುತ್ತದೆ. ಅಂಥ ಸಂದರ್ಭದಲ್ಲಿ, ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಕೊಳ್ಳಬೇಕು. ಅದು ಚಿತ್ರ ಬಿಡಿಸುವುದಿರಬಹುದು, ಕಥೆ, ಕವಿತೆ, ನಾಟಕ ಕಾದಂಬರಿ ಬರೆಯುವ/ ಓದುವ ಕೆಲಸವೇ ಆಗಿರಬಹುದು, ಪೂಜೆ, ಯೋಗ- ಧ್ಯಾನ ಆಗಬ ಹುದು. ಅಥವಾ ಕೃಷಿ ಕೆಲಸ ಆಗಬಹುದು (ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವ, ಅಡುಗೆ ಕಲಿಯುವ ಕೆಲಸ ಆಗಬಹುದು)- ಒಟ್ಟಿನಲ್ಲಿ, ಒಂದು ದಿನದ ಸಾಕಷ್ಟು ಹೊತ್ತು ಬ್ಯುಸಿ ಆಗುವಂಥ ಒಂದು ಕೆಲಸಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕು. ಅಷ್ಟಾಗಿಬಿಟ್ಟರೆ, ಡಿಪ್ರಶನ್‌ನಿಂದ ಮನಸ್ಸು ತಂತಾನೇ ಹೊರಗೆ ಬಂದುಬಿಡುತ್ತದೆ. ಇಷ್ಟಾದರೆ, ಕೆಟ್ಟ ಯೋಚನೆಗಳಿಗೆ, ನಿರ್ಧಾರಗಳಿಗೆ ಮನಸ್ಸು ಬಲಿಯಾಗು ವುದು ತಪ್ಪುತ್ತದೆ.

 

 

Advertisement

-ಗೀತಾಂಜಲಿ

Advertisement

Udayavani is now on Telegram. Click here to join our channel and stay updated with the latest news.

Next