Advertisement

ಸಾಮಾಜಿಕ ಜಾಲತಾಣ ಎಂಬ ಮಾಯಾಜಾಲದಲ್ಲಿ ಸಿಲುಕಿದ ಭಾರತೀಯರು

09:35 AM Feb 28, 2020 | mahesh |

ಹೊಸದಿಲ್ಲಿ: ನಿತ್ಯದ ಬದುಕಿನಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟ್ಟರ್‌, ಯೂಟ್ಯೂಬ್, ವಾಟ್ಸ್‌ಆ್ಯಪ್‌, ಟಿಕ್‌ಟಾಕ್‌ ಅಂತಹ ಜನಪ್ರಿಯ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೈನಂದಿನ ಬದುಕಿನಲ್ಲಿ ಮೊಬೈಲ್‌, ಸೋಷಿಯಲ್‌ ಮೀಡಿಯಾಗಳ ಹೆಚ್ಚಿನ ಆದ್ಯತೆ ಪಡೆದುಕೊಳ್ಳುತ್ತಿದೆ. ಯುವ ಜನತೆಯಿಂದ ಹಿಡಿದು ವಯೋವೃದ್ಧರು ಕೂಡ ಸೋಷಿಯಲ್‌ ಮೀಡಿಯಾವನ್ನು ಬಿಟ್ಟು ದೂರ ಉಳಿಯಲು ಸಾಧ್ಯವಿಲ್ಲ ಅನ್ನುವ ಮಟ್ಟಕ್ಕೆ ಬೆಳೆದು ಬಿಟ್ಟಿವೆ. ಈ ಹಿನ್ನೆಲೆ ತಂತ್ರಜ್ಞಾನದ ಬಹುದೊಡ್ಡ ಕೊಡುಗೆಯಾದ ಸಾಮಾಜಿಕ ಜಾಲತಾಣವನ್ನು ಬಳಸುವ ಭಾರತೀಯರ ಸಂಖ್ಯೆ ಇಲ್ಲಿದೆ.

Advertisement

ಫೇಸ್‌ಬುಕ್‌ : 2.6 ಕೋಟಿ
ವಾಟ್ಸ್‌ಆಪ್‌ : 40 ಕೋಟಿ
ಇನ್‌ಸ್ಟಾಗ್ರಾಮ್‌ : 8ಕೋಟಿ
ಟ್ವಿಟರ್‌ : 1.45ಕೋಟಿ

ಕೇವಲ ನೆರೆಹೊರೆಯ ಗೆಳೆಯರಷ್ಟೇ ಅಲ್ಲದೇ ಸಾಗರದಾಚೆಯ ದೇಶ- ವಿದೇಶಗಳ ಗೆಳೆಯರೊಂದಿಗೆ ಸಂಪರ್ಕ ಕಲ್ಪಿಸುವ ಮಾಯಾಜಾಲ ಈ ಸಾಮಾಜಿಕ ಜಾಲತಾಣ. ಇಂದಿನ ಜನಾಂಗದವರ ಬದುಕಿನ ಅಂಗವೇ ಆಗಿರುವ ಈ ಮೀಡಿಯಾಗಳು ಒಂದೆಡೆ ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿಕೊಟ್ಟರೆ, ಮತ್ತೂಂದೆಡೆ ಸುಳ್ಳು ಸುದ್ದಿಗಳ ಹರಿದಾಟ. ಸಮಾಜ ಘಾತುಕ ವಿಡಿಯೋಗಳ ಹಂಚಿಕೆ , ಕೋಮು ಗಲಭೆ ಸೃಷ್ಟಿಸುವಂತಹ ಸಂದೇಶ ಸೇರಿದಂತೆ ಕೆಲ ನಕಾರಾತ್ಮಕ ವಿಚಾರಗಳಿಗೂ ದಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next