Advertisement

ರಾಗಿ ಹಣ ಬಾಕಿ ಶೀಘ್ರ ಪಾವತಿಸಿ

02:19 PM May 12, 2019 | Suhan S |

ಹುಳಿಯಾರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ತೆಗೆಯಲಾಗಿದ್ದ ರಾಗಿ ಖರೀದಿ ಕೇಂದ್ರದಲ್ಲಿ ಮಾರ್ಚ್‌ ತಿಂಗಳಿನಲ್ಲಿ ರಾಗಿ ಮಾರಾಟ ಮಾಡಿದ್ದ ರೈತರಿಗೆ 2 ತಿಂಗಳಾದರೂ ಲಕ್ಷಾಂತರ ರೂ., ಬಾಕಿ ಹಣ ಪಾವತಿ ಮಾಡಿಲ್ಲ. ಕೂಡಲೇ ಪಾವತಿಸುವಂತೆ ರೈತರು ಆಗ್ರಹಿಸಿದ್ದಾರೆ. ಬಾಕಿ ಹಣದ ಬಗ್ಗೆ ರಾಗಿ ಖರೀದಿ ಕೇಂದ್ರದಲ್ಲಿ ವಿಚಾರಿಸಲು ಹೋದರೆ ಖರೀದಿ ಕೇಂದ್ರಕ್ಕೆ ಬೀಗ ಹಾಕಿದೆ. ಎಪಿಎಂಸಿಯವರು ನಮಗೂ ಇದಕ್ಕೂ ಸಂಬಂಧವಿಲ್ಲ. ನಾವು ಖರೀದಿ ಕೇಂದ್ರಕ್ಕೆ ಕೇವಲ ಜಾಗ ಕೊಟ್ಟಿದ್ದೇವೆ ಹೊರತು ನೀವು ಬಾಕಿ ಹಣವನ್ನು ಆಹಾರ ನಿಗಮದ ಅಧಿಕಾರಿಗಳನ್ನು ವಿಚಾರಿಸ ಬೇಕು ಎನ್ನುತ್ತಾರೆ.

Advertisement

ಅಧಿಕಾರಿಗಳಿಗೆ ಕರೆ ಮಾಡಿದರೆ ಹಣ ಈಗ ಬರುತ್ತದೆ. ಆಗ ಬರುತ್ತದೆ ಎಂದು ಸಬೂಬು ಹೇಳುತ್ತಲೇ ಮುಂದೆ ಹಾಕುತ್ತಿದ್ದಾರೆ. ಇದೇ ಸ್ಥಿತಿ ಮುಂದು ವರಿದರೆ ರಾಗಿ ಖರೀದಿ ಕೇಂದ್ರಗಳ ಮೇಲೆ ರೈತರಿಗೆ ನಂಬಿಕೆ ಹೊರಟು ಹೋಗುತ್ತದೆ ಎಂದು ರೈತ ಎಚ್.ವಿ. ಧನಂಜಯ ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ತುರ್ತಾಗಿ ಗಮನ ಹರಿಸಬೇಕು, ಇಲ್ಲದಿದ್ದಲ್ಲಿ ಎಪಿಎಂಸಿ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next