Advertisement

“ಮಿಲೇನಿಯಂ ವೋಟರ್‌’ಬ್ಯಾಡ್ಜ್ ಗೌರವ

02:52 PM Jan 26, 2018 | |

ಬೀದರ: ನಗರದ ರಂಗಮಂದಿರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಜ.1ಕ್ಕೆ ವಯಸ್ಸು 18 ವರ್ಷ ಪೂರ್ಣಗೊಂಡು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದವರಿಗೆ “ಮಿಲೇನಿಯಂ ವೋಟರ್‌ ಆಫ್‌ ಇಂಡಿಯಾ’ ಬ್ಯಾಡ್ಜ್ ನೀಡಿ ಗೌರವಿಸಲಾಯಿತು.

Advertisement

ಗೋರನಳ್ಳಿಯ ಪ್ರಿಯಂಕಾ ಪ್ರಕಾಶ, ಅಲಿಯಂಬರ್‌ನ ಇಂದುಮತಿ ಸಿದ್ದಪ್ಪ, ಶಮಸು ರಮೇಶ ಹಾಗೂ ಚಟನಳ್ಳಿಯ ಸುಪ್ರಿತಾ ನರಸಪ್ಪಾ ಅವರು ಈ ಗೌರವಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಸ್‌.ಪಾಟೀಲ ಅವರು ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೋಂದಣಿಯಾಗಿರುವ ಯುವಕ- ಯುವತಿಯರಿಗೆ ಮತದಾರರ ಗುರುತಿನ ಚೀಟಿ ವಿತರಿಸಿದರು. ಮತದಾನದ ಮಹತ್ವ ಕುರಿತು ಕಲಾವಿದರಾದ ವಿಜಯಕುಮಾರ ಸೊನಾರೆ, ಸುನಿಲ್‌ ಕಡ್ಡೆ ಅವರನ್ನು ಒಳಗೊಂಡ ತಂಡದಿಂದ ಪ್ರದರ್ಶನಗೊಂಡ ಕಿರು ನಾಟಕ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಬಹುಮಾನ ವಿತರಣೆ: ಚುನಾವಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. 

ಪದವಿ ಪೂರ್ವ ವಿಭಾಗ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಾಬು ಬಿರಾದಾರ ಪಿಯು ಕಾಲೇಜಿನ ಅಂಬಿಕಾ ವಿಜಯಕುಮಾರ ಪ್ರಥಮ, ಲಕ್ಷಿಬಾಯಿ ಕಮಠಾಣೆ ಪಿಯು ಕಾಲೇಜಿನ ವಿಜಯಲಕ್ಷ್ಮೀ ಕೆ.ಸ್ವಾಮಿ ದ್ವಿತೀಯ ಹಾಗೂ ಬಸವಕಲ್ಯಾಣ ಸರ್ಕಾರಿ ಕಾಲೇಜಿನ ವೀರೇಶ ಶಿವರಾಜ ತೃತೀಯ. ಇಂಗ್ಲಿಷ್‌ ಪ್ರಬಂಧ ಸ್ಪರ್ಧೆಯಲ್ಲಿ ಕರ್ನಾಟಕ ಪಿಯು ಕಾಲೇಜಿನ ಡಿ.ಶ್ರೇಯಸ್‌ ಸುರೇಶ ಪ್ರಥಮ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಶ್ರೇಷಾ ಮುಸ್ಕಾನ್‌ ದ್ವಿತೀಯ ಹಾಗೂ ಮೌಲಾನಾ ಆಜಾದ್‌ ಪಿಯು ಕಾಲೇಜಿನ ಪ್ರಿಸಿಲ್ಲಾ ತುಕಾರಾಮ ತೃತೀಯ. 

ಪೋಸ್ಟರ್‌ ತಯಾರಿಕಾ ಸ್ಪರ್ಧೆಯಲ್ಲಿ ಗುರುನಾನಕ್‌ ಪಿಯು ಕಾಲೇಜಿನ ಮಹಮ್ಮದ್‌ ಸೋಹೇಲ್‌ ರಫಿಕ್‌ ಪ್ರಥಮ, ಜ್ಞಾನಸುಧಾ ಪಿಯು ಕಾಲೇಜಿನ ಸುಷ್ಮಾ ಸುಭಾಷ ದ್ವಿತೀಯ ಹಾಗೂ ಎನ್‌ಎಫ್‌ ಪಿಯು ಕಾಲೇಜಿನ ಮಾರ್ಟಿನಾ ಮಾಸ್‌ ತೃತೀಯ ಪ್ರಶಸ್ತಿ ಪಡೆದರು. ಕೊಲ್ಯಾಜ್‌ ತಯಾರಿಕೆ ಸ್ಪರ್ಧೆಯಲ್ಲಿ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ನಿಖೀತಾ ನಿಖತ್‌ ಬೇಗಂ ಪ್ರಥಮ, ಸಿದ್ಧಾರ್ಥ ಪಿಯು ಕಾಲೇಜಿನ ಪರಮೇಶ್ವರ ಕೆ.ಸ್ವಾಮಿ ದ್ವಿತೀಯ ಹಾಗೂ ಔರಾದ ಸರ್ಕಾರಿ ಪಿಯು ಕಾಲೇಜಿನ ಬಬ್ಬನ್‌ ಮಾರುತಿ ತೃತೀಯ ಪ್ರಶಸ್ತಿ ಪಡೆದರು.

Advertisement

ಪದವಿ ವಿಭಾಗ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಿವಿಬಿ ಕಾಲೇಜಿನ ಪರಮೇಶ್ವರ ಬಿರಾದಾರ ಪ್ರಥಮ, ಸುಜಾತಾ ಘಾಳೆಪ್ಪಾ ದ್ವಿತೀಯ, ಅಕ್ಕಮಹಾದೇವಿ ಕಾಲೇಜಿನ ಅನಿತಾ ಕಂಠಯ್ನಾ ಹಾಗೂ ಬಿವಿಬಿ ಕಾಲೇಜಿನ ಅಶ್ವಿ‌ನಿ ಬಾಲಪ್ಪ ತೃತೀಯ, ಇಂಗ್ಲಿಷ್‌ ಪ್ರಬಂಧ ಸ್ಪರ್ಧೆಯಲ್ಲಿ ಬಿವಿಬಿ ಕಾಲೇಜಿನ ಸುಧಾಕರ್‌ ಎಸ್‌.ಅರಳಿ ಪ್ರಥಮ, ಜಗದೀಶ ಆರ್‌. ದ್ವಿತೀಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮೀರೆಜ್‌ ಬೇಗಮ್‌ ತೃತೀಯ ಪ್ರಶಸ್ತಿ ಪಡೆದರು. ಪೋಸ್ಟರ್‌ ತಯಾರಿಕೆಯಲ್ಲಿ ಯೋಗೇಶ್‌ ಪೈನ್‌ ಆರ್ಟ್‌ ಕಾಲೇಜಿನ ಸಿದ್ದಪ್ಪ ಬಿ. ಪ್ರಥಮ, ಬಿವಿಬಿ ಕಾಲೇಜಿನ ಮೋಸಸ್‌ ನರಸಿಂಗ್‌ ದ್ವಿತೀಯ ಹಾಗೂ ಕರ್ನಾಟಕ ಪದವಿ ಕಾಲೇಜಿನ ಶಿವಾಂಜಲಿ ಎಂ.ಪಾಟೀಲ ತೃತೀಯ. ಕೊಲ್ಯಾಜ್‌ ತಯಾರಿಕೆಯಲ್ಲಿ ಬಿವಿಬಿ ಕಾಲೇಜಿನ ಜಗದೀಶ ಆರ್‌. ಪ್ರಥಮ ಹಾಗೂ ಸಂತೋಷ ಡಿ. ದ್ವಿತೀಯ ಪ್ರಶಸ್ತಿ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಶಾರದಾ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಸಂತೋಷ ವನ್ನಿಕೇರಿ ಪ್ರಥಮ, ಉಡುಮನಳ್ಳಿ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಜಾವೇದ್‌ ಅಹ್ಮದ್‌ ದ್ವಿತೀಯ, ನ್ಯಾಷನಲ್‌ ಫೈನ್‌ ಆರ್ಟ್‌ ಕಾಲೇಜು ಪ್ರಾಚಾರ್ಯ ಸಂದೀಪ ಸಜ್ಜನ್‌ ತೃತೀಯ ಬಹುಮಾನ ಪಡೆದರು. ಕೊಲ್ಯಾಜ್‌ ಪೇಂಟಿಂಗ್‌ನಲ್ಲಿ ಎಸ್‌. ಎಂ. ಪಂಡಿತ್‌ ಚಿತ್ರಕಲಾ ಮಹಾವಿದ್ಯಾಲಯದ ಪವೀನ್‌ ಗುತ್ತೆ ಬಹುಮಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next