ನಾಲ್ಕು ಬಾರಿ ಏಷ್ಯನ್ ಗೇಮ್‌ನಲ್ಲಿ ಹಾಗೂ ಒಮ್ಮೆ ಕಾಮನ್‌ವೆಲ್ತ್‌ನಲ್ಲಿ ಬಂಗಾರ ಪದಕ ಗೆದ್ದಿದ್ದ ಮಿಲ್ಖಾ ಸಿಂಗ್ ಅವರದ್ದು ಅಮೋಘಸಾಧನೆ. ಅವರಕ್ರೀಡಾ ಸಾಧನೆಗಳನ್ನು ಪರಿಗಣಿಸಿ ಕೇಂದ್ರಸರ್ಕಾರ 1959ರಲ್ಲೇ ಪದ್ಮಶ್ರೀ ನೀಡಿ ಗೌರವಿಸಿದೆ.
ಭಾರತದಲ್ಲಿ ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ಅವರು ಇಡೀ ದೇಶವನ್ನೇ ಪ್ರಭಾವಿಸಿದ್ದರು. ಅವರಿಂದ ದೇಶದಲ್ಲಿ ಓಟಗಾರರ ದೊಡ್ಡ ಪಡೆಯೇ ಸಿದ್ದವಾಗಿತ್ತು. ಮಿಂಚಿನಂತಹ ಓಟವನ್ನು ನೋಡಿದ ಜನ ಅವರನ್ನು ಹಾರುವ ಸಿಖ್ ಎಂದೇ ಗೌರವದಿಂದ ಕರೆಯುತ್ತಿದ್ದರು.
ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್‌ನ ಮುಜಫರ್ ಗಢದ ಗೋಬಿಂದಪುರ ಎಂಬ ಹಳ್ಳಿಯಲ್ಲಿ ಮಿಲ್ಖಾ 1929ರ ನ.20ರಂದು ಜನಿಸಿದರು. ದೇಶ ವಿಭಜನೆಯ ನಂತರ ಅವರ ಕುಟುಂಬ ಭಾರತವನ್ನುಕೂಡಿಕೊಂಡಿತು. ಅವರು 15 ಮಂದಿ ಮಕ್ಕಳಿದ್ದ ದೊಡ್ಡ ಕುಟುಂಬದಲ್ಲಿ ಜನಿಸಿದ್ದರು ಎನ್ನುವುದನ್ನು ಗಮನಿಸಬೇಕು.
ಇದನ್ನೂ ಓದಿ;ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ
ಮಿಲಿಟರಿಯಲ್ಲಿದ್ದ ಮಿಲ್ಖಾ ಸಿಂಗ್ ಅವರು, ಅಲ್ಲಿಂದಲೇ ಓಟದ ಬೆನ್ನತ್ತಿ, ಏಷ್ಯಾಕಪ್‌ನಲ್ಲಿ ನಾಲ್ಕು ಬಾರಿ ಚಿನ್ನದ ಪದಕ ಗೆದ್ದರು.1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯಲ್ಲಿ ಕಂಚು ಪದಕ ತಪ್ಪಿತು. ಇವರ ಸಾಧನೆಯಿಂದಾಗಿ ಮಿಲಿಟರಿ ಇವರಿಗೆ ಹಾನರರಿ ಕ್ಯಾಪ್ಟನ್ ನೀಡಿ ಗೌರವಿಸಿತು.
ಕ್ರೀಡಾ ಸಾಧನೆಗಳು
- 1958ರಕಾರ್ಡಿಫ್ ಕಾಮನ್‌ವೆಲ್ತ್‌ಕೂಟದಲ್ಲಿ 440 ಯಾರ್ಡ್ಸ್ದೂರದ ಓಟದಲ್ಲಿ ಚಿನ್ನ.ಈ ದಾಖಲೆಯನ್ನು 50 ವರ್ಷಯಾರೂ ಮುರಿದಿರಲಿಲ್ಲ.
- 1958ಟೋಕ್ಯೋಏಷ್ಯಾಡ್‌ನ 200ಮೀ., 400ಮೀ. ಓಟದಲ್ಲಿ ಚಿನ್ನ.
3 1962 ಜಕಾರ್ತ ಏಷ್ಯಾಡ್‌ನ 400ಮೀ., 400ಮೀ. ರಿಲೇಓಟದಲ್ಲಿ ಚಿನ್ನ.
- 1960ರ ರೋಮ್ ಒಲಿಂಪಿಕ್ಸ್‌ನ 400ಮೀ. ಓಟದಲ್ಲಿ 4ನೇ ಸ್ಥಾನ, ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಕಂಚು.
ಭಾಗ್ ಮಿಲ್ಖಾ ಭಾಗ್ ಸಿನಿಮಾ
ಓಟದ ದಂತಕಥೆ ಮಿಲ್ಖಾ ಅವರ ಜೀವನ ಆಧರಿಸಿ ಬಾಲಿವುಡ್‌ನಲ್ಲಿ2013ರಲ್ಲಿ ಭಾಗ್ ಮಿಲ್ಖಾ ಭಾಗ್ ಎಂಬ ಸಿನಿಮಾ ತೆರೆಕಂಡಿತ್ತು. ಚಿತ್ರದಲ್ಲಿ ಮಿಲ್ಖಾ ಅವರ ಬಾಲ್ಯದ ಜೀವನ, ಅಂತಾರಾಷ್ಟ್ರೀಯ ವೃತ್ತಿ ಜೀವನ ಅವರು ಪಟ್ಟ ಕಷ್ಟಗಳ ಹಾಗೂ ಅವರು ಬೆಳೆದು ಬಂದ ಬಗೆಯನ್ನು ತೋರಿಸಲಾಗಿದೆ. 1956ರಲ್ಲಿ ನಡೆದ ಮೆಲ್ಬೊರ್ನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಿಲ್ಖಾ ಸಿಂಗ್ ಭಾರತ ತಂಡದ ಅಥ್ಲೀಟ್ ಆಗಿ ಸ್ಪರ್ಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಬಗ್ಗೆ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ.