Advertisement

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ರಾಜ್ಯಕ್ಕೆ ಪ್ರಥಮ: ರವಿರಾಜ್‌ ಹೆಗ್ಡೆ

02:30 AM Jul 15, 2017 | Karthik A |

ನಗರ: ಗುಣಮಟ್ಟದ ಹಾಲು ಸಂಗ್ರಹಣೆಯಲ್ಲಿ ದ.ಕ. ಸ. ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ ಎಂದು ಕೆಎಂಎಫ್‌ ಜಿಲ್ಲಾ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಹೇಳಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಒಕ್ಕೂಟ 741.69 ಕೋ.ರೂ. ವ್ಯವಹಾರ ನಡೆಸಿ, 5.58 ಕೊ.ರೂ. ನಿವ್ವಳ ಲಾಭ ಗಳಿಸಿದೆ. ರಾಜ್ಯ ಮಹಾಮಂಡಲದ 14 ಒಕ್ಕೂಟಗಳ ಪೈಕಿ ದ.ಕ. ಜಿಲ್ಲಾ ಒಕ್ಕೂಟವು ಪ್ರಥಮ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು. ರೈತರಿಗೆ ವಿವಿಧ ಯೋಜನೆಯಡಿ 7.65 ಕೋ.ರೂ. ನೆರವು ನೀಡಲಾಗಿದೆ. ಸಿಬಂದಿ ವರ್ಗಕ್ಕೆ 3.59 ಕೋ.ರೂ. ಸಹಾಯಧನ ನೀಡಲಾಗಿದೆ. ಅಪಘಾತ ಪರಿಹಾರ, ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದು ಅವರು ವಿವರಿಸಿದರು.

Advertisement

ಗರಿಷ್ಠ ಹಾಲು ಉತ್ಪಾದನೆ
1996ರಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ 50 ಸಾವಿರ ಲೀಟರ್‌ ಹಾಲು ಉತ್ಪಾದಿಸುವುದೇ ತ್ರಾಸದಾಯಕ ಸಂಗತಿ ಆಗಿತ್ತು. ಇಂದು ಪುತ್ತೂರಿನಲ್ಲೇ 52 ಸಾವಿರ ಲೀಟರ್‌ ಉತ್ಪಾದನೆಯಾಗುತ್ತಿದ್ದು, ಒಕ್ಕೂಟದ ವ್ಯಾಪ್ತಿಯಲ್ಲೇ 4.56 ಲಕ್ಷ ಗರಿಷ್ಠ ಮತ್ತು ದಾಖಲೆ ಪ್ರಮಾಣದ ಹಾಲು ಸಂಗ್ರಹಿಸಿದೆ ಎಂದರು.

ಆ. 11: ಜಿಲ್ಲಾ ಮಟ್ಟದ ಸಭೆ
ದ.ಕ. ಜಿಲ್ಲಾ ಒಕ್ಕೂಟದ ಮಹಾಸಭೆ ಆ. 11ರಂದು ಜರಗಲಿದೆ. ಹಾಗಾಗಿ ತಾಲೂಕಿನ ಒಕ್ಕೂಟದ ಸಮಸ್ಯೆಗಳನ್ನು ಅರಿಯಲು ಈ ಸಮಾಲೋಚನ ಸಭೆ ಏರ್ಪಡಿಸಲಾಗಿದೆ ಎಂದ ಅವರು ಉತ್ಪಾದನೆಯಲ್ಲಿ ಕಳೆದ ಸಾಲಿಗಿಂತ ಶೇ.10ರಷ್ಟು ಬೆಳವಣಿಗೆಯನ್ನು ಕಂಡಿದ್ದರೂ ಹಾಲಿನ ವಾಲ್ಯೂಮ್‌, ಡಿಮೋನಿಟೈಜೇಶನ್‌, ದರ ಏರಿಕೆ, ಕಾರ್ಮಿಕರ ಕೊರೆತೆಯಿಂದ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸಾಧನೆ ಸಿಕ್ಕಿಲ್ಲ ಎಂದರು. ಈ ಸಂದರ್ಭ ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಉತ್ತಮ ಸಾಧನೆ ತೋರಿದವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಶ್ರೇಷ್ಠ ಕ್ರೀಡಾಪಟುಗಳಾದ ಸಂಪ್ಯದ ನಿಶಾಂತ್‌, ಹಳೆನೇರಂಕಿಯ ಚೇತನ್‌, ಚಾರ್ವಾಕದ ವಚನಾ ಅವರನ್ನು ಗುರುತಿಸಲಾಯಿತು.

ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ವೀಣಾ ಆರ್‌. ರೈ, ನಿರಂಜನ, ಪದ್ಮನಾಭ ಶೆಟ್ಟಿ, ಆಡಳಿತ ನಿರ್ದೇಶಕ ಡಾ| ಸತ್ಯನಾರಾಯಣ, ಸತ್ಯಶಂಕರ್‌ ರೈ, ನಾರಾಯಣ ಉಪಸ್ಥಿತರಿದ್ದರು. ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಮಿತಾ ಪ್ರಾರ್ಥಿಸಿದರು. ಹಾಲು ಶೀಥಲೀಕರಣದ ಮೋಹನ್‌ ನಾಯ್ಕ, ಉಪವ್ಯವಸ್ಥಾಪಕ ಉಪೇಂದ್ರ, ಸಹಾಯಕ ವ್ಯವಸ್ಥಾಪಕ ಡಾ| ಕಾರ್ತಿಕ್‌, ವಿಸ್ತರಣಾಧಿಕಾರಿ ಮಂಜುನಾಥ್‌, ಸುಳ್ಯದ ವಿಸ್ತರಣಾಧಿಕಾರಿ ಯಮುನಾ ಮೊದಲಾದವರು ಉಪಸ್ಥಿತರಿದ್ದರು.

ಗುಣಮಟ್ಟದ ಹಾಲು ಪೂರೈಕೆ ಸೇರಿದಂತೆ 18 ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಮಾಟ್ನೂರು ಹಾಲು ಉತ್ಪಾದಕರ ಸಂಘ ಪ್ರಥಮ ಸ್ಥಾನ ಹಾಗೂ ಕಡಬ ಹಾಲು ಉತ್ಪಾದಕರ ಸಹಕಾರ ಸಂಘ ದ್ವಿತೀಯ ಸ್ಥಾನ ಪಡೆಯಿತು. ಹಾಲು ಉತ್ಪಾದಕ ಪರಮೇಶ್ವ ಗೌಡ ಆಲಂತಾಯ ಅವರಿಗೆ ಉತ್ತಮ ಹೈನುಗಾರಿಕೆ ಪ್ರಶಸ್ತಿ ಹಾಗೂ ಹಸಿರು ಮೇವು ವಿಭಾಗಕ್ಕೆ ಸಂಬಂಧಿಸಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸತೀಶ್‌ ಅವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಫಲಾನುಭವಿಗಳಾದ ಕಲ್ಲಾಜೆಯ ಪ್ರೇಮಲತಾ, ತಂಬುತ್ತಡ್ಕದ ಭವಾನಿ, ಮಾಟ್ನೂರಿನ ದಿವ್ಯನಾಥ ಶೆಟ್ಟಿ, ವಿಶಾಲಾಕ್ಷಿ ಕೆಯ್ಯೂರು ಅವರಿಗೆ ಪರಿಹಾರ ಚೆಕ್‌ ವಿತರಿಸಲಾಯಿತು.

Advertisement

ಗುರಿ ಮೀರಿ ಸಾಧನೆ
ಒಕ್ಕೂಟದ ಜಿಲ್ಲಾ ನಿರ್ದೇಶಕ ಸವಣೂರು ಸೀತಾರಾಮ ರೈ ಮಾತನಾಡಿ, ಒಕ್ಕೂಟದ ಸಹಕಾರ ಸಂಘಗಳ ಪರಿಶ್ರಮದ ಫಲವಾಗಿ ಹಾಲಿನ ಉತ್ಪಾದನೆ ಗುರಿ ಮೀರಿ ಸಾಧನೆ ತೋರಿದೆ. ಹಾಲಿನ ಡೈರಿಗೆ ಸಂಬಂಧಿಸಿ, ಹಾಲು ಉತ್ಪಾದಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಾಲೂಕು ವ್ಯಾಪ್ತಿಯಲ್ಲೇ ಸಭೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next