Advertisement

ಉಗ್ರರಿಗೆ ಆರ್ಥಿಕ ನಿರ್ಬಂಧ ಅಗತ್ಯ

01:44 AM Jul 28, 2019 | mahesh |

ರಿಯೋ ಡಿ ಜನೈರೋ: ಭಯೋತ್ಪಾದನೆಗೆ ಸಿಗುತ್ತಿರುವ ವಿತ್ತೀಯ ನೆರವು ತಡೆಯಬೇಕಾದ ಅನಿವಾರ್ಯತೆ ಇದೆ ಎಂದು ಭಾರತ ಪ್ರತಿಪಾದಿಸಿದೆ. ರಿಯೋ ಡಿ ಜನೈರೋದಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾರತದ ನಿಯೋಗದ ನೇತೃತ್ವ ವಹಿಸಿದ್ದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್‌ ಈ ಸಲಹೆ ನೀಡಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ವಿದೇಶಾಂಗ ಸಚಿವರು ಭಯೋತ್ಪಾದನೆ ತಡೆಗೆ ಸಮಗ್ರವಾಗಿರುವ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ಮಾಡಿದ್ದಾರೆ. ಬ್ರಿಕ್ಸ್‌ ರಾಷ್ಟ್ರಗಳ ಕೆಲ ಸ್ಥಳಗಳಲ್ಲಿ ಇತ್ತೀಚೆಗೆ ನಡೆದ ಉಗ್ರ ಕೃತ್ಯಗಳ ವಿರುದ್ಧ ಖಂಡನೆಯನ್ನೂ ಸಭೆಯಲ್ಲಿ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next