Advertisement

ಉಗ್ರರು ಹುತಾತ್ಮರು, ನಮ್ಮ ಮಕ್ಕಳು: ಪಿಡಿಪಿ ಶಾಸಕ

06:40 AM Jan 12, 2018 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪಿಡಿಪಿ ಶಾಸಕ ಅಜೀಜ್‌ ಅಹ್ಮದ್‌ ಉಗ್ರರು ಹುತಾತ್ಮರು ಮತ್ತು ನಮ್ಮ ಸಹೋದರರು ಎಂದು ಹೇಳಿದ್ದಾರೆ. ಇದರಿಂದಾಗಿ ಆಡಳಿತಾ ರೂಢ‌ ಮೈತ್ರಿಕೂಟ ಬಿಜೆಪಿ-ಪಿಡಿಪಿಗೆ ಇರಿಸು ಮುರಿಸು ಉಂಟಾ ಗಿದೆ. ಅಲ್ಲಿನ ವಿಧಾನಸಭೆ ಹೊರಭಾಗದಲ್ಲಿ ಮಾತನಾಡಿದ ಅವರು “ಕಾಶ್ಮೀರದಿಂದ ಬಂದ ಉಗ್ರರು ಭಯೋತ್ಪಾದಕರು. ಅವರು ನಮ್ಮ ಸಹೋದರರು. ಅವರ ಪೈಕಿ ಇನ್ನು ಕೆಲವರು ನಮ್ಮ ಮಕ್ಕಳು. 14 ವರ್ಷಕ್ಕಿಂತ ಕೆಳಗಿನವರೂ ಇದ್ದಾರೆ. ಅವರಿಗೆ ಏನು ಮಾಡುತ್ತಿದ್ದಾರೆ ಎಂದೇ ಗೊತ್ತಿರುವುದಿಲ್ಲ. 200 ಮಂದಿ ಉಗ್ರರನ್ನು ಕೊಂದಿರುವ ವಿಚಾರ ವೈಭವೀಕರಿಸುವುದನ್ನು ನಿಲ್ಲಿಸಬೇಕು’ ಎಂದು ಹೇಳಿದ್ದಾರೆ. 

Advertisement

ಕೇಂದ್ರ ಸರಕಾರದ ಸಂಧಾನಕಾರ ದಿನೇಶ್ವರ್‌ ಶರ್ಮಾ ಎಲ್ಲ ವರ್ಗದ ಜನರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕ ಶಾಸಕರ ಹೇಳಿಕೆ ಯನ್ನು ಖಂಡಿಸಿದೆ. ಕಾಂಗ್ರೆಸ್‌ ನಾಯಕ ಟಾಂ ವಡಕ್ಕನ್‌ ಮಾತನಾಡಿ “ಬಿಜೆಪಿ ಪಿಡಿಪಿ ಜತೆ ಮೈತ್ರಿ ಮಾಡಿರುವುದರಿಂದ ಅದು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next