ನಾಯಕ ನಟ ಅನೀಶ್ ನಾಯಕರಾಗಿರುವ “ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾಕ್ಕೆ ನಟಿ ಮಿಲನಾ ನಾಯಕಿ ಯಾಗಿದ್ದಾರೆ. ಇದೇ ಮೊದಲ ಬಾರಿಗೆ ನಾಯಕ ಅನೀಶ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಮಿಲನಾ ನಾಗರಾಜ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಿ ಹುಡುಗಿ ಹಾಗೂ ಟೀಚರ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಮಿಲನ ನಾಗರಾಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಸದ್ಯದಲ್ಲೇ ಇಬ್ಬರ ಪೋಸ್ಟರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:ಬದಲಾಗುತ್ತಿರುವ ಹವಾಮಾನ; ಆಲಿವ್ ರಿಡ್ಲಿ ಸಮುದ್ರ ಆಮೆಗಳ ಮೇಲೆ ದುಷ್ಪರಿಣಾಮ
ಈ ಚಿತ್ರವನ್ನು “ಅಕಿರ’ ಸಿನಿಮಾ ನಿರ್ಮಿಸಿರುವ ಶ್ರೀಕಾಂತ್ ಪ್ರಸನ್ನ, ಗುಳ್ಟು ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.