Advertisement
ನಗರದ ಶ್ರೀಮಂತ ಬಡಾವಣೆಯ ಸಾವಿರಾರು ಮಂದಿ ಕೋವಿಡ್ ಹಾವಳಿ ಶುರುವಾದ ಬಳಿಕ ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದಾರೆ. ಈ ವಿಚಾರ ತಿಳಿದು ಬಂದದ್ದು ಅವರ ಮೊಬೈಲ್ ಫೋನ್‌ಗಳ ಲೊಕೇಶನ್ ಮೂಲಕ.
Related Articles
Advertisement
ಆದರೆ ಆದಾಯದ ನೆಲೆಯಲ್ಲಿ ವಿಶ್ಲೇಷಿಸಿದಾಗ ಅತಿ ಹೆಚ್ಚಿನ ವರಮಾನವಿರುವವರು ನಗರವನ್ನು ತೊರೆದಿರುವುದು ಸ್ಪಷ್ಟವಾಗುತ್ತದೆ. ಮಾರ್ಚ್ ಮಧ್ಯ ಭಾಗಕ್ಕಾಗುವಾಗ ಶುರುವಾದ ಸಿರಿವಂತರ ವಲಸೆ ಎಪ್ರಿಲ್‌ನಲ್ಲಿ ಅತಿ ಹೆಚ್ಚಾಯಿತು. ಮೇಯರ್ ಬಿಲ್ ಡಿ ಬ್ಲಾಸಿಯೊ ಶಾಲೆಗಳನ್ನು ಮುಚ್ಚಿ ಲಾಕ್‌ಡೌನ್ ಘೋಷಣೆಯ ಸುಳಿವು ನೀಡಿದಾಗಲೇ ಸಿರಿವಂತರೆಲ್ಲ ಜಾಗ ಮಾಡ ತೊಡಗಿದ್ದರು.
ಬಿಕ್ಕಟ್ಟಿನ ಸಮಯದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬುದು ಘೋಷಣೆ ಮಾತ್ರ. ವಾಸ್ತವದಲ್ಲಿ ಜನರ ಮನೋಭಾವ ಈ ರೀತಿ ಇಲ್ಲ. ಹಣವಿದ್ದವರು ಕೋವಿಡ್‌ಗೆ ಹೆದರಿ ಸಾಕಷ್ಟು ಮುಂಚಿತವಾಗಿಯೇ ಪಲಾಯನ ಮಾಡಿದ್ದಾರೆ. ಉಳಿದವರು ಮಧ್ಯಮ ವರ್ಗದವರು ಮತ್ತು ಬಡವರು ಮಾತ್ರ ಎನ್ನುತ್ತಾರೆ ಇತಿಹಾಸದ ಉಪನ್ಯಾಸಕ ಫಿಲಿಪ್ಸ್ ಫೆನ್.
ಡೆಸ್ಕಾರ್ಟ್ಸ್ ಲ್ಯಾಬ್ಸ್ ಸಂಸ್ಥೆ ನ್ಯೂಯಾರ್ಕ್ ನಗರಗಳ ನಿವಾಸಿಗಳ ಮೊಬೈಲ್ ಡೇಟಾವನ್ನು ವಿಶ್ಲೇಷಣೆಗೊಳಪಡಿಸಿತ್ತು. ಈ ಸಂದರ್ಭದಲ್ಲಿ ನಗರಕ್ಕೆ ಬಂದು ಹೋಗುವವರು ಮತ್ತು ಪ್ರವಾಸಿಗರನ್ನು ಬಿಟ್ಟು ನಗರದಲ್ಲಿ ವಾಸ್ತವ್ಯವಿರುವವರ ಡೇಟಾವನ್ನು ಮಾತ್ರ ವಿಶ್ಲೇಷಣೆಗೆ ಗುರಿಪಡಿಸಲಾಯಿತು. ಫೆಬ್ರವರಿಯಲ್ಲಿ ಮತ್ತು ಮಾರ್ಚ್‌ನಲ್ಲಿ ಅವರ ಓಡಾಟದ ಮಾಹಿತಿಯನ್ನು ಕಲೆ ಹಾಕಿದಾಗ ಶ್ರೀಮಂತರು ನಗರದಿಂದ ದೂರ ಹೋಗಿರುವ ಅಂಶ ಪತ್ತೆಯಾಗಿದೆ.ನ್ಯೂಯಾರ್ಕ್‌ನ ಶ್ರೀಮಂತರು ಕೋವಿಡ್ ಕಾಟದ ವೇಳೆ ನಗರ ತೊರೆದಿದ್ದಾರೆ ಎನ್ನುವುದಕ್ಕೆ ಇನ್ನೂ ಕೆಲವು ಸಾಕ್ಷ್ಯಗಳಿವೆ.ತ್ಯಾಜ್ಯ ಸಂಘ್ರಹದ ಪ್ರಯಾಬದಲ್ಲಾಗಿರುವ ಇಳಿಕೆ, ನೀರಿನ ಬಳಕೆ ಕಡಿಮೆಯಾಗಿರುವುದು ಈ ಮುಂತಾದ ಮಾಹಿತಿಗಳನ್ನು ವಿಶ್ಲೇಷಿಸಿದಾಗಲೂ ನಗರದಲ್ಲಿ ಜನಸಂಖ್ಯೆ ಕಡಿಮೆಯಾಗಿರುವುದು ಕಂಡು ಬರುತ್ತದೆ. ಶ್ರೀಮಂತರೆಲ್ಲ ನಗರದ ಹೊರಭಾಗಗಳಲ್ಲಿ ಎರಡನೇ ಮನೆ ಅಥವಾ ತೋಟದ ಮನೆಯನ್ನು ಹೊಂದಿರುತ್ತಾರೆ. ಹೆಚ್ಚಿನವರು ಇಂಥ ಮನೆಗಳಿಗೆ ಹೋಗಿರುವ ಸಾಧ್ಯತೆಯೂ ಇದೆ. ಶಾಲೆಗೆ ರಜೆ ಸಿಕ್ಕಿದಾಗ ಮಕ್ಕಳ ಸಮೇತ ತೋಟದ ಮನೆಗಳಿಗೆ ಅಥವಾ ದೂರದ ಊರುಗಳಿಗೆ ಪ್ರವಾಸ ಹೋಗುವುದು ಅಮೆರಿಕದಲ್ಲಿ ಮಾಮೂಲು. ಆದರೆ ಕೋವಿಡ್ ಹಾವಳಿಯ ಸಂದರ್ಭದಲ್ಲಿ ಈ ವಲಸೆ ಗಮನಕ್ಕೆ ಬಂದಿದೆಯಷ್ಟೇ ಎಂದು ವಲಸೆ ಹಿಂದಿನ ಕಾರಣವನ್ನು ವಿವರಿಸಿದ್ದಾರೆ ಮೇಯರ್. ಮಾ.2ರಿಂದ ಮಾ. 27ರ ತನಕ ಸುಮಾರು 3,73,000 ಮೊಬೈಲ್ ಫೋನ್‌ಗಳ ಲೊಕೇಶನ್ ಸರ್ಚ್ ಮಾಡಿದಾಗಲೇ ನಾರೀ ಪ್ರಮಾಣದಲ್ಲಿ ವಲಸೆ ಆಗಿರುವುದು ಸ್ಪಷ್ಟವಾಗಿತ್ತು. ವಲಸೆಯ ಪರಿಣಾಮವಾಗಿ ನಗರದ ಜನಸಂಖ್ಯೆ ಸುಮಾರು ಶೇ. 5 ಕಡಿಮೆಯಾಗಿದೆ. ಮ್ಯಾನ್‌ಹಟನ್‌ನಿಂದ ಅತಿ ಹೆಚ್ಚು ಸಿರಿವಂತರು ವಲಸೆ ಹೋಗಿದ್ದಾರೆ.