Advertisement
ಲಾಕ್ ಡೌನ್ ಗೇ ಭಯ ಬೀತಗೊಂಡಿರುವ ವಲಸೆ ಕಾರ್ಮಿಕರು ಮತ್ತೆ ಗುಳೆ ಹೊರಟಿರುವ ದೃಶ್ಯಗಳು ಮಾಧ್ಯಮಗಳ ಕಣ್ಣಿಗೆ ಬಿದ್ದಿವೆ. ಲಾಕ್ ಡೌನ್ ಮತ್ತೆ ವಿಸ್ತರಣೆಗೊಂಡಲ್ಲಿ ಮತ್ತೆ ಕಳೆದ ವರ್ದ ಪರಿಸ್ಥಿತಿ ಎದುರಾಗಬಹುದೆಂಬ ಭಯದಿಂದ ಹಲವು ಮಂದಿ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿ ಹೊರಟಿದ್ದಾರೆ.
Related Articles
Advertisement
“ನನ್ನ ಕುಟುಂಬದಲ್ಲಿ ಹಿರಿಯ ನಾಗರಿಕರೂ ಸೇರಿದಂತೆ ಏಳು ಸದಸ್ಯರು ಇದ್ದಾರೆ. ಕಳೆದ ಬಾರಿಯ ಲಾಕ್ ಡೌನ್ ಸಮಯದಲ್ಲಿ, ಪರಿಸ್ಥಿತಿ ಹದಗೆಟ್ಟ ನಂತರ ನಾವು ನೇಪಾಳಕ್ಕೆ ಹೋದೆವು. ನಾವು ನಾಲ್ಕೈದು ತಿಂಗಳಾದ ಬಳಿಕ ಮರಳಿದ್ದೇವೆ. ನಾವು ದಿನಗೂಲಿ ಕೆಲಸ ಮಾಡುತ್ತೇವೆ. ಮತ್ತು ಕೆಲಸವಿಲ್ಲ ನಮ್ಮೂರಲ್ಲಿ ನಮಗೆ ಕೆಲಸಕ್ಕೆ ಅನುಕೂಲವಿಲ್ಲ ಹಾಗಾಗಿ ನಾವು ಇಲ್ಲಿಗೆ ಬರಬೇಕಾಗಿ ಬಂತು. ಆದರೇ ಇಲ್ಲಿ ಮತ್ತೆ ಸೋಂಕು ಹೆಚ್ಚಾಗಿರು ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಭವಿಷ್ಯದ ಬಗ್ಗೆ ಭಯವಿದೆ ನಮಗೆ. ಯಾವುದೇ ಕೆಲಸವಿಲ್ಲ, ಲಾಕ್‌ಡೌನ್ ಅನ್ನು ಯಾವಾಗ ಬೇಕಾದರೂ ವಿಸ್ತರಿಸಬಹು. ಹಾಗಾಗಿ ನಾವು ಮತ್ತೆ ನಾವು ಊರಿಗೆ ತೆರಳುವ ಪರಿಸ್ಥಿತಿ ಬಂದಿದೆ “ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ವಾರದ ಲಾಕ್ ಡೌನ್ ಘೋಷಿಸಿ, ಕಾರ್ಮಿಕರಲ್ಲಿ ಊರಿಗೆ ತೆರಳದಂತೆ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ, ಕಳೆದ ವರ್ಷದ ವಲಸೆಗಾರರ ನಿರ್ಗಮನಕ್ಕೆ ಹೋಲುವ ದೃಶ್ಯಗಳು ಅಂತರರಾಜ್ಯ ಬಸ್ ಟರ್ಮಿನಲ್ ಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಬಸ್ ಗಾಗಿ ಕಾಯುತ್ತಿರುವ ದೃಶ್ಯಗಳು ಕಂಡು ಬಂದವು.
ಇನ್ನು, ಲಾಕ್ ಡೌನ್‌ನ ಅಲ್ಪಾವಧಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಕಾರ್ಮಿಕರನ್ನು ದೆಹಲಿಯಿಂದ ಹೊರಹೋಗದಂತೆ ಮನವಿ ಮಾಡಿದ್ದರು. ಆದಾಗ್ಯೂ ಪ್ರಸ್ತುತ, ಲಾಕ್ ಡೌನ್ ಸಮಯದಲ್ಲಿ ಅಂತರರಾಜ್ಯ ಚಲನೆಗೆ ಯಾವುದೇ ನಿರ್ಬಂಧವಿಲ್ಲ.
ಓದಿ : ಕೋವಿಡ್ ಲಸಿಕೆ ವಿತರಣೆಗೆ 5 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿ ಸೌಲಭ್ಯ ಇಲ್ಲ!
“ನಾವು ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಇಲ್ಲಿ ಒಂದು ತಿಂಗಳ ಕಾಲ ಸಿಲುಕಿಕೊಂಡಿದ್ದೇವೆ. ಆಹಾರದ ಸಮಸ್ಯೆಯಲ್ಲ, ಆದರೆ ನಮ್ಮ ಜೀವಕ್ಕೆ ನಾವು ಹೆದರುತ್ತಿದ್ದೆವು. ಕಳೆದ ವರ್ಷ ನಾವು ಟ್ರಕ್ ನಲ್ಲಿ ಪ್ರಯಾಣಿಸಿ ಜಾನ್ ಪುರ ತಲುಪಿದೆವು ಎಂದು ಚಂದನ್ ಸಿರೋಜ್ ಎಂಬ ಮತ್ತೊಬ್ಬ ವಲಸೆ ಕಾರ್ಮಿಕರು ತಿಳಿಸಿದ್ದಾರೆ.
“ಮತ್ತೆ ಸಹಜ ಸ್ಥಿತಿಗೆ ಮರಳಬಹುದು ಎಂದು ಸುಮಾರು ಎರಡು ತಿಂಗಳ ಹಿಂದೆ ಹಿಂತಿರುಗಿದ್ದೇವೆ. ಸೋಮವಾರ ನಾವು ನಮ್ಮ ಉದ್ಯೋಗದಾತರಿಗೆ ನಾವು ಜಾನ್ ಪುರಕ್ಕೆ ಹೊರಡುತ್ತಿದ್ದೇವೆ ಎಂದು ಹೇಳಿದಕೊಂಡು, ಸ್ವಲ್ಪ ಹಣವನ್ನು ಕೇಳಿದೆವು. ಅವರು ನಮಗೆ ತಲಾ 500 ರೂಗಳನ್ನು ಮಾತ್ರ ನೀಡಿದರು. ಎಂದು ಸಿರೋಜ್ ಹೇಳಿದ್ದಾರೆ.
ಲಕ್ನೋ ಸಮೀಪದ ಅಕ್ಬರಪುರ ಮೂಲದ ಧರ್ಮವೀರ್ ಸಿಂಗ್ ತನ್ನೂರಿಗೆ ಬಸ್ ಹುಡುಕುತ್ತಿದ್ದರು. ಆದಾಗ್ಯೂ, ಅವರು ಮನೆಗೆ ಹೋಗಲು ವಿಭಿನ್ನ ಕಾರಣಗಳನ್ನು ಹೊಂದಿದ್ದರು.
“ನಾನು ಪಶ್ಚಿಮ ದೆಹಲಿಯ ಸುಭಾಷ್ ನಗರದಲ್ಲಿ ಬಡಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ವಾರ ನನ್ನ ತಂಗಿ ಮದುವೆ ಇರುವ ಕಾರಣ ನಾನು ನನ್ನೂರಿಗೆ ಹೋಗಬೇಕಾಗಿದೆ. ಮೊದಲು ನಾನು ವಾರಾಂತ್ಯದಲ್ಲಿ ಹೋಗಲು ಯೋಜಿಸುತ್ತಿದ್ದೆ, ಆದರೆ ಲಾಕ್ ಡೌನ್ ಸರ್ಕಾರ ಘೋಷಿಸಿದ ನಂತರ, ನನ್ನ ಕುಟುಂಬವು ಸಾಧ್ಯವಾದಷ್ಟು ಬೇಗ ಬರಲು ಹೇಳಿದೆ. ನನ್ನ ಮನೆಯವರಿಗೂ ಕೋವಿಡ್ ಪರಿಸ್ಥಿತಿಯ ಬಗ್ಗೆ ಭಯವಿದೆ ಎಂದು ಅವರು ಪಿಟಿಐ ಗೆ ತಿಳಿಸಿದ್ದಾರೆ.
ಹೀಗೆ ದೆಹಲಿಯಲ್ಲಿ ಕಳೆದ ವರ್ಷದ ದೃಶ್ಯ ಮತ್ತೆ ಎದುರಾಗಿದೆ ಎಂದರೇ ತಪ್ಪಿಲ್ಲ. ಸಾವಿರಾರು ಮಂದಿ ವಲಸೆ ಕಾರ್ಮಿಕರು ಲಾಕ್ ಡೌನ್ ಭೀತಿಯಿಂದ ಮತ್ತೆ ತಮ್ಮೂರಿಗೆ ಗುಳೆ ಹೊರಟಿರುವ ದೃಶ್ಯ ರಾಷ್ಟ್ರ ರಾಜಧಾನಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಓದಿ : ‘ಸಂಪೂರ್ಣ ಲಾಕ್‍ಡೌನ್’ ಹೇರುವಂತೆ ಸಿಎಂಗೆ ಸಚಿವರುಗಳಿಂದ ಮನವಿ