ತಿರುವನಂತಪುರ: ಕೇರಳದಲ್ಲಿರುವ ವಲಸೆ ಕಾರ್ಮಿಕರೊಬ್ಬರಿಗೆ 75 ಲಕ್ಷ ರೂ.ಗಳ ಲಾಟರಿ ಹೊಡೆದಿದ್ದು, ರಕ್ಷಣೆ ಕೋರಿ ಪೊಲೀಸರ ಮೊರೆಹೋಗಿರುವ ಘಟನೆ ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯಾದ ಎಸ್.ಕೆ. ಬಾದೇಶ್‌ಗೆ ಕೇರಳ ಸರ್ಕಾರದ ಸ್ತ್ರೀಶಕ್ತಿ ಲಾಟರಿ ಟಿಕೆಟ್‌ನಲ್ಲಿ ಅದೃಷ್ಟ ಖುಲಾಯಿಸಿದೆ.
ವಿಚಾರ ತಿಳಿಯುತ್ತಿದ್ದಂತೆ ಟಿಕೆಟ್ ಅಥವಾ ಹಣವನ್ನು ಯಾರಾದರೂ ಲಪಟಾಯಿಸಬಹುದೆಂದು ಹೆದರಿ, ಬಾದೇಶ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಲಾಟರಿ ಮೊತ್ತ ಪಡೆಯುವ ಪ್ರಕ್ರಿಯೆ ಕುರಿತು ವಿವರಿಸಿದ ಪೊಲೀಸರು, ರಕ್ಷಣೆಯ ಭರವಸೆಯನ್ನೂ ನೀಡಿದ್ದಾರೆ.
ಬಡವನ ಜೀವನದಲ್ಲಿ ಕೇರಳ ಸರ್ಕಾರ ತಂದ ಅದೃಷ್ಟಕ್ಕೆ ಬಾದೇಶ್ ಧನ್ಯವಾದ ಅರ್ಪಿಸಿದ್ದು, ಹಣ ಬರುತ್ತಿದ್ದಂತೆ ತಮ್ಮ ಸ್ವಂತ ಊರಿಗೆ ತೆರಳಿ ಹೊಸ ಬದುಕು ನಡೆಸುವುದಾಗಿ ಹೇಳಿದ್ದಾರೆ.