Advertisement

ವಲಸಿಗ ರೈತರಿಗೆ ಎಟುಕದ ಸೌಲಭ್ಯ

02:50 PM May 07, 2021 | Team Udayavani |

ಬೆಂಗಳೂರು: ಕಳೆದ ವರ್ಷದ ಲಾಕ್‌ಡೌನ್‌ನಲ್ಲಿಗ್ರಾಮೀಣ ಪ್ರದೇಶಕ್ಕೆ ತೆರಳಿದ ವಲಸಿಗ ರೈತರಲ್ಲಿಶೇ..10ರಷ್ಟು ಮಂದಿ ಅಲ್ಲಿಯೇ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದು, ಬಹುತೇಕ ಮಂದಿಗೆಸರ್ಕಾರಿ ಸೌಲಭ್ಯಗಳು ತಲುಪಿಲ್ಲ!ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರಘೋಷಣೆ ಮಾಡಿರುವ ಪರಿಹಾರ ಶೇ..17 ರಷ್ಟುಜನರಿಗೆ ಮಾತ್ರ ದೊರೆತಿದೆ. ಶೇ..23 ರಷ್ಟು ರೈತರಿಗೆ ಮಾತ್ರ ನರೇಗಾ ಯೋಜನೆಯಿಂದ ಅವಕಾಶ ದೊರೆತಿದೆ.

Advertisement

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಶೇ..53 ರಷ್ಟು ರೈತರು ಹಾಗೂ ಶೇ..20 ರಷ್ಟು ರೈತರಿಗೆ ಮಾತ್ರ ಬೆಳೆ ವಿಮೆ ಸೌಲಭ್ಯ ದೊರೆತಿದೆ.  ಇದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಹಾಗೂ ಮಹಾರಾಜ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ಆಫ್‌ ಮೈಸೂರು ಸಹಯೋಗದೊಂದಿಗೆ ಪೃಥ್ವಿ ಎಂಬಸ್ವಯಂ ಸೇವಾ ಸಂಸ್ಥೆ ಕೊರೊನಾ ಲಾಕ್‌ಡೌನ್‌ ನಂತರ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋದ ಕುಟುಂಬಗಳ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದ ಅಂಶ.

ಈಗ ಇನ್ನೊಮ್ಮೆ ಲಾಕ್‌ಡೌನ್‌ನಂಥ ಸ್ಥಿತಿಯೇಎದುರಾಗಿದ್ದು,. ಹಳ್ಳಿ ಸೇರಿರುವ ರೈತರಿಗೆ ಬದುಕುಕಟ್ಟಿಕೊಡುವ ಅವಕಾಶವನ್ನು ಕಲ್ಪಿಸಿಕೊಡುವಸವಾಲು ಸರ್ಕಾರದ ಮುಂದೆ ಇದೆ. ಕಳೆದ ವರ್ಷನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿದವಲಸಿಗರಲ್ಲಿ ಶೇ.19 ರಷ್ಟು ಜನರು ರೈತಕುಟುಂಬಗಳಿಗೆ ಸೇರಿದವರಾಗಿದ್ದರು. ಅಂದರೆಸುಮಾರು 8 ರಿಂದ 10 ಲಕ್ಷ ರೈತ ಕುಟುಂಬಕ್ಕೆ ಸೇರಿದವರು ನಗರಗಳಿಂದ ಮರು ವಲಸೆ ತೆರಳಿದ್ದರು.ಅವರಲ್ಲಿ ಶೇ.23 ರಷ್ಟು ಜನರು ಕಲ್ಯಾಣ ಕರ್ನಾಟಕ,ಮಲೆನಾಡು ಹಾಗೂ ಕರಾವಳಿ ಭಾಗಕ್ಕೆಸೇರಿದವರಾಗಿದ್ದಾರೆ.ವಲಸಿಗರಲ್ಲಿ 60 ವರ್ಷ ಮೀರೀದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಳ್ಳಿಗಳಿಗೆ ತೆರಳಿದ ಶೇ.19 ರಷ್ಟುಜನರಲ್ಲಿ ಶೇ.10 ರಷ್ಟು ಜನರು ನಗರ ಪ್ರದೇಶಗಳಿಗೆವಾಪಸ್‌ ಬರದೇ ತಮ್ಮೂರುಗಳಲ್ಲಿಯೇ ಏನಾದರೂಉದ್ಯೋಗ ಮಾಡಿಕೊಂಡು ಇರಲು ಬಯಸಿದ್ದಾರೆ.ಆದರೆ, ರಾಜ್ಯ ಸರ್ಕಾರ ಹಳ್ಳಿಗಳಿಗೆ ತೆರಳಿದ ಜನರಿಗೆಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಲಾಕ್‌ಡೌನ್‌ ಸಮಯ ಹಾಗೂ ನಂತರ ರಾಜ್ಯಸರ್ಕಾರ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ನೆರವು ನೀಡಿರುವ ಬಗ್ಗೆ ಶೇಕಡಾ 45 ರಷ್ಟು ಜನರು ಮಾತ್ರತೃಪ್ತಿ ವ್ಯಕ್ತಪಡಿಸಿದ್ದು, ಶೇ.55 ರಷ್ಟು ಜನರು ರಾಜ್ಯಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನಹೊಂದಿದ್ದಾರೆ.

ಉತ್ಪಾದನೆ ನಷ್ಟ: ಕಳೆದ ವರ್ಷ ಲಾಕ್‌ಡೌನ್‌ಘೋಷಣೆ ಮಾಡಿದ ಸಂದರ್ಭದಲ್ಲಿ ರಾಜ್ಯದ ರೈತರುಹಿಂಗಾರು ಬೆಳೆ ಉತ್ತಮವಾಗಿ ಬಂದಿದ್ದರೂ ಶೇ.30ರಷ್ಟು ರೈತರು ಮಾತ್ರ ತಮ್ಮ ಉತ್ಪನ್ನ ಮಾರಾಟಮಾಡಲು ಸಾಧ್ಯವಾಗಿದೆ. ಶೇ.17 ರಷ್ಟು ಉತ್ಪನ್ನಮಾರಾಟವಾಗದೇ ಸಂಪೂರ್ಣ ಕೊಳೆತು ಹೋಗಿದೆ.ಶೇ. 6 ರಷ್ಟು ರೈತರಿಗೆ ಮಾತ್ರ ಸಾಮಾನ್ಯ ದರದೊರೆತಿದ್ದು, ಶೇ. 94 ರಷ್ಟು ರೈತರಿಗೆ ಸರಿಯಾದ ಬೆಲೆದೊರೆಯದೇ ನಷ್ಟ ಅನುಭವಿಸಿದ್ದಾರೆ.

Advertisement

ಲಾಕ್‌ಡೌನ್‌ ಸಂದರ್ಭದಲ್ಲಿ ರೈತರಿಗೆ ಸರ್ಕಾರದಕೃಷಿ, ನೀರಾವರಿ, ತೋಟಗಾರಿಕೆ ಸೇರಿದಂತೆ ಪ್ರಮುಖಇಲಾಖೆಗಳಿಂದ ಸೂಕ್ತ ಮಾಹಿತಿ ದೊರೆತಿರುವ ಬಗ್ಗೆಶೇ.49 ರಷ್ಟು ರೈತರು ಮಾತ್ರ ಸಹಮತವ್ಯಕ್ತಪಡಿಸಿದ್ದಾರೆ.

ಸಾಲದ ಸಮಸ್ಯೆ: ರೈತರಿಗೆ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಸೂಕ್ತ ಸಾಲ ಸಿಗದಿರುವ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಎಲ್ಲ ರೈತರಿಗೂ ಸಾಲದೊರೆಯದಿರುವ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಳೆಗೆ ಸರಿಯಾದಮಾರುಕಟ್ಟೆ ವ್ಯವಸ್ಥೆ ದೊರೆಯದೇ ನಷ್ಟಅನುಭವಿಸಿರುವ ಬಗ್ಗೆ ರೈತರು ಸಮೀಕ್ಷೆಯಲ್ಲಿ ಬೇಸರವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಹಳ್ಳಿಗಳಿಗೆ ಮರು ವಲಸೆಹೋದ ರೈತ ಕುಟುಂಬಗಳು ಹಾಗೂ ಕಾರ್ಮಿಕರಿಗೆ ರಾಜ್ಯಸರ್ಕಾರ ಹಳ್ಳಿಗಳಲ್ಲಿಯೇ ಪರ್ಯಾಯ ಉದ್ಯೋಗ ಒಗದಿಸುವಲ್ಲಿವಿಫಲವಾಗಿದೆ. ಈಗ ಮತ್ತೆ ಲಾಕ್‌ಡೌನ್‌ ಆಗಿದೆ. ರಾಜ್ಯ ಸರ್ಕಾರಗ್ರಾಮೀಣ ಪ್ರದೇಶಗಳಲ್ಲಿಯೇ ಮರು ವಲಸಿಗರಿಗೆ ಪರ್ಯಾಯಉದ್ಯೋಗ ಒದಗಿಸುವ ಕಡೆಗೆ ಆದ್ಯತೆ ನೀಡಬೇಕು.

  • ಡಾ. ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next